Gold Silver Price, 03 March 2021: ಬಂಗಾರದ ಬೆಲೆಯಲ್ಲಿ 11,000 ರೂ ಇಳಿಕೆ, ಖರೀದಿಗೆ ಈ ಚಿನ್ನದಂತಹ ಅವಕಾಶ ಮಿಸ್ ಮಾಡ್ಬೇಡಿ

Wed, 03 Mar 2021-12:33 pm,

1. ಚಿನ್ನದ ನೂತನ ಬೆಲೆ (Gold Price Today) - ದೆಹಲಿಯ ಸರಾಫ್ ಮಾರುಕಟ್ಟೆಯಲ್ಲಿ ಬುಧವಾರ 10 ಗ್ರಾಂಗೆ ಚಿನ್ನದ ಬೆಲೆ 45,500 ರೂ.ಗಳಷ್ಟಿತ್ತು. ಇದು 10 ತಿಂಗಳಲ್ಲಿ ಅತ್ಯಂತ ಕಡಿಮೆ ಮಟ್ಟವಾಗಿದೆ. ಕಳೆದ ವಹಿವಾಟಿನ ಅವಧಿಯಲ್ಲಿ ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನವು 10 ಗ್ರಾಂ.ಗೆ 44,760 ರೂ.ಗಳಷ್ಟಿತ್ತು. ಮತ್ತೊಂದೆಡೆ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಪ್ಪಟ ಚಿನ್ನವು 0.2% ಕುಸಿದು ಪ್ರತಿ ಔನ್ಸ್ ಗೆ 1734.16 ಡಾಲರ್ ಗೆ ತಲುಪಿದೆ.

2. ಬೆಳ್ಳಿಯ ನೂತನ್ ಬೆಲೆ (Silver Price Today) - ಬುಧವಾರ ಬೆಳ್ಳಿ ಬೆಲೆಯಲ್ಲಿ ಯಾವುದೇ ಮಹತ್ವದ ಬದಲಾವಣೆ ಕಂಡುಬಂದಿಲ್ಲ. ದೆಹಲಿ ಬುಲಿಯನ್ ಮಾರುಕಟ್ಟೆಯಲ್ಲಿ ಸಿಲ್ವರ್ ಫ್ಯೂಚರ್ ಪ್ರತಿ ಕೆ.ಜಿ.ಗೆ ರೂ.69,216 ರಷ್ಟಿದೆ. ಕಳೆದ ವಹಿವಾಟಿನಲ್ಲಿ ಈ ಅಮೂಲ್ಯ ಲೋಹ (Silver) 1,847 ರೂ.ಗಳನ್ನು ಕಳೆದುಕೊಂಡು ಪ್ರತಿ ಕೆ.ಜಿ.ಗೆ 67,073 ರೂ.ನಲ್ಲಿ ತನ್ನ ವಹಿವಾಟು ನಡೆಸಿತ್ತು. ಇಂದು, ಬೆಳ್ಳಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ 0.3% ಕುಸಿದು ಪ್ರತಿ ಔನ್ಸ್ ಗೆ  26.67 ಡಾಲರ್ ಗೆ ತಲುಪಿದೆ.

3. ಭಾರಿ ಬದಲಾವಣೆ ಸಾಧ್ಯತೆ ಇಲ್ಲ - ಈ ಕುರಿತು ಮಾಹಿತಿ ನೀಡಿರುವ ಮಾರುಕಟ್ಟೆ ತಜ್ಞರು, ಪ್ರಸ್ತುತ ಚಿನ್ನ ಸೈಡ್ ವೆ ನಲ್ಲಿ ಟ್ರೆಂಡ್ ಮಾಡುತ್ತಿದೆ. ಅಂದರೆ, ಚಿನ್ನದ ಬೆಲೆಯಲ್ಲಿ ಯಾವುದೇ ಭಾರಿ ಬದಲಾವಣೆ ಗಮನಿಸಲು ಸಾಧ್ಯವಿಲ್ಲ MCX ಚಿನ್ನದ ಬೆಲೆ ರೂ.45600-ರೂ.45800 ರ ನಡುವೆ ಇರಲಿದೆ. ಈ ಕುರಿತು ಹೇಳಿಕೆ ನೀಡಿರುವ ಮತ್ತೋರ್ವ ಮಾರುಕಟ್ಟೆ ತಜ್ಞರು, ಚಿನ್ನಕ್ಕೆ ರೂ.44,500- ರೂ.45000ರ ನಡುವೆ ಸಪೋರ್ಟ್ ಸಿಗುವ ಸಾಧ್ಯತೆ ಇದೆ ಎಂದ್ದಾರೆ. ಇದರರ್ಥ ಚಿನ್ನದ ಬೆಲೆ ರೂ.45,000ಕ್ಕಿಂತ ಅತ್ಯಂತ ಕೆಳಮಟ್ಟಕ್ಕೆ ಜಾರುವ ಸಾಧ್ಯತೆ ಇಲ್ಲ.  

4. ಚಿನ್ನ ಖರೀದಿಸಲು ಇದು ಉತ್ತಮ ಅವಕಾಶ - ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಖರೀದಿಗೆ ಭಾರಿ ಬೇಡಿಕೆ ಇದೆ. ಸದ್ಯ ಮದುವೆಯ ಸೀಜನ್ ಜೋರಾಗಿ ನಡೆಯುತ್ತಿದೆ ಹಾಗೂ ಚಿನ್ನದ ಬೆಲೆ ತುಂಬಾ ಕೆಳಮಟ್ಟಕ್ಕೆ ತಲುಪಿದೆ. ಇಂತಹುದರಲ್ಲಿ ಬೇಡಿಕೆಯ ಒತ್ತಡ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಚಿನ್ನದ ಬೆಲೆಯಲ್ಲಿ ಈ ಬೆಲೆ ಇಳಿಕೆ ಶಾರ್ಟ್ ಟರ್ಮ್ ಗಾಗಿ ಮಾತ್ರ ಇರಲಿದೆ. ಚಿನ್ನ ಶೀಘ್ರದಲ್ಲಿಯೇ ಬೌನ್ಸ್ ಬ್ಯಾಕ್ ಮಾಡಲಿದೆ. ಹೀಗಾಗಿ ಚಿನ್ನ ಖರೀದಿಗೆ ಇದು ಉತ್ತಮ ಅವಕಾಶವಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link