ರಸ್ತೆಗೆ ಇಳಿಯಿತು 260 ವರ್ಷ ಹಳೆಯ ಗೋಲ್ಡನ್‌ ರಥ: ಚಿನ್ನದ ತೇರಿನ ವಿಶೇಷತೆ ಏನ್‌ ಗೊತ್ತಾ!

Sat, 04 Jun 2022-9:44 am,

ಇಂಗ್ಲೆಂಡ್ ಸಿಂಹಾಸನದ ರಾಣಿ ಎಲಿಜಬೆತ್ II ಅವರು ತಮ್ಮ ಆಳ್ವಿಕೆ ಪ್ರಾರಂಭಿಸಿ 70 ವರ್ಷಗಳು ಕಳೆದಿದೆ. ಈ ಸಂದರ್ಭದಲ್ಲಿ, ಅದರ ಗೌರವಾರ್ಥವಾಗಿ ಅನೇಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ರಾಣಿಯ ಪ್ಲಾಟಿನಂ ಜುಬಿಲಿ ಆಚರಣೆಗಳನ್ನು ಗುರುತಿಸಲು ನಡೆಯುತ್ತಿರುವ ನಾಲ್ಕು ದಿನಗಳ ಮೆರವಣಿಗೆಯ ಎರಡನೇ ದಿನದಂದು 'ಥ್ಯಾಂಕ್ಸ್‌ಗಿವಿಂಗ್' ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ 20 ವರ್ಷಗಳ ನಂತರ ರಾಣಿಯ ಈ ವಿಶೇಷ ಚಿನ್ನದ ರಥ ಬೀದಿಗಿಳಿದಿದೆ. ಇದರ ವಿಶೇಷತೆ ಕುರಿತು ಹೇಳುವುದಾದರೆ, ನಾಲ್ಕು ಟನ್ ತೂಕದ ರಥವು 7 ಮೀಟರ್ ಉದ್ದ ಮತ್ತು 3.6 ಮೀಟರ್ ಎತ್ತರವಿದೆ. ಇದನ್ನು 8 ಕುದುರೆಗಳ ಸಹಾಯದಿಂದ ಎಳೆಯಲಾಗುತ್ತದೆ. ಈ ಭವ್ಯ ರಥದ ಮೇಲೆ ಕನಿಷ್ಠ ಏಳು ಪದರಗಳ ಚಿನ್ನವನ್ನು ಲೇಪಿಸಲಾಗಿದೆ. ಈ ವಿಶೇಷ ರಥವನ್ನು ಕಿಂಗ್ ಜಾರ್ಜ್ (III) ರ ವಾಸ್ತುಶಿಲ್ಪದ ಸಲಹೆಗಾರ ಸರ್ ವಿಲಿಯಂ ಚೇಂಬರ್ಸ್ ವಿನ್ಯಾಸಗೊಳಿಸಿದರು. ಸ್ಯಾಮ್ಯುಯೆಲ್ ಬಟ್ಲರ್ ನಿರ್ಮಿಸಿದರು.

ಇಂದು ಪ್ಲಾಟಿನಂ ಜುಬಿಲಿ ಆಚರಣೆಯ ಮೂರನೇ ದಿನ. ಇದಲ್ಲದೆ, ಯುಕೆಯಲ್ಲಿನ ಅತಿದೊಡ್ಡ ಚರ್ಚ್ ಬೆಲ್, 16-ಟನ್ ಗ್ರೇಟ್ ಪಾಲ್ ಈವೆಂಟ್ ನಂತರ ನಾಲ್ಕು ಗಂಟೆಗಳ ಕಾಲ ನಿರಂತರವಾಗಿ ಸದ್ದು ಮಾಡಲಿದೆ. ಪ್ರಿನ್ಸ್ ಆಫ್ ವೇಲ್ಸ್, ಡಚೆಸ್ ಆಫ್ ಕಾರ್ನ್‌ವಾಲ್ ಮತ್ತು ಕೇಂಬ್ರಿಡ್ಜ್‌ನ ಡ್ಯೂಕ್ ಮತ್ತು ಡಚೆಸ್ ಸೇರಿದಂತೆ ಹಿರಿಯ ರಾಜಮನೆತನದವರು ಭಾಗವಹಿಸಲಿದ್ದಾರೆ, ಪ್ರಿನ್ಸ್ ಚಾರ್ಲ್ಸ್ ಅಧಿಕೃತವಾಗಿ ರಾಣಿಯನ್ನು ಪ್ರತಿನಿಧಿಸಿಲಿದ್ದಾರೆ. ಎರಡು ವರ್ಷಗಳ ಹಿಂದೆ ಬ್ರಿಟನ್ ತೊರೆದಿದ್ದ ಪ್ರಿನ್ಸ್ ಹ್ಯಾರಿ ಮತ್ತು ಮೇಘನ್ ಅವರಿಗೆ ಇದು ಮೊದಲ ರಾಯಲ್ ಕಾರ್ಯಕ್ರಮವಾಗಿದೆ.

ಕಾರ್ಯಕ್ರಮವನ್ನು ಸ್ಮರಣೀಯವಾಗಿಸಲು ಸಹಾಯ ಮಾಡಿದ ಎಲ್ಲಾ ಜನರು ಮತ್ತು ಅತಿಥಿಗಳಿಗೆ ರಾಣಿ ಎಲಿಜಬೆತ್ (ಎರಡನೇ) ಕೃತಜ್ಞತೆ ಸಲ್ಲಿಸಿದ್ದಾರೆ. ಇನ್ನು ಚಿನ್ನದ ರಥದ ಬಗ್ಗೆ ಹೇಳುವುದಾದರೆ, ಈ ವಿಶೇಷ ವಿವಿಐಪಿ ರಥವನ್ನು ಮರದಿಂದ ಮಾಡಲಾಗಿದ್ದು, ಅದರ ಮೇಲೆ ಚಿನ್ನದ ಲೇಪನ ಮಾಡಲಾಗಿದೆ. ರಾಣಿಯ 70 ವರ್ಷಗಳ ಆಳ್ವಿಕೆಯನ್ನು ಆಚರಿಸುವ 4 ದಿನಗಳ ಕಾರ್ಯಕ್ರಮ ಗುರುವಾರ ಪ್ರಾರಂಭವಾಗಿದೆ. ಈ ಚಿನ್ನದ ರಥವು ಪ್ಲಾಟಿನಂ ಜುಬಿಲಿ ಆಚರಣೆಯ ಮೆರವಣಿಗೆಯನ್ನು ಮುನ್ನಡೆಸುತ್ತದೆ.

ಈ ಚಿನ್ನದ ರಥವು ನೋಟದಲ್ಲಿ ಒಂದು ಕಾಲ್ಪನಿಕ ಕಥೆಯಂತಿದೆ. ರಾಜ ರಥವು ಐತಿಹಾಸಿಕ ಕಲೆಯ ಜೀವಂತ ಉದಾಹರಣೆಯಾಗಿದೆ. ಗೋಲ್ಡ್ ಸ್ಟೇಟ್ ಕೋಚ್ ಹೊರಗಿನಿಂದ ಎಷ್ಟು ಸುಂದರವಾಗಿದೆಯೋ, ಅದರ ಒಳಾಂಗಣವೂ ಅಷ್ಟೇ ಸುಂದರವಾಗಿದೆ. 

ಭಾನುವಾರ ಸಮಾರಂಭದ ಕೊನೆಯ ದಿನದಂದು ನಡೆಯುವ ಮೆರವಣಿಗೆಯಲ್ಲಿ ರಾಣಿ ಅದರ ಮೇಲೆ ಸವಾರಿ ಮಾಡುವುದಿಲ್ಲ. ಬದಲಾಗಿ, ಅವರು ಮೊದಲು ಪಟ್ಟಾಭಿಷೇಕ ಮಾಡಿದ ದಿನದ ವೀಡಿಯೊ ತುಣುಕನ್ನು ವಾಹನದ ಕಿಟಕಿಗಳ ಮೇಲೆ ಪ್ರೊಜೆಕ್ಟರ್‌ಗಳ ಮೂಲಕ ತೋರಿಸಲಾಗುತ್ತದೆ. ಎಲಿಜಬೆತ್ II 96 ವರ್ಷ ವಯಸ್ಸಿನವರಾಗಿದ್ದಾರೆ. ಅವರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ವಿರಳವಾಗಿ ಕಾಣಿಸಿಕೊಳ್ಳುತ್ತಾರೆ. ಎಲಿಜಬೆತ್ ತನ್ನ 25 ವರ್ಷ ವಯಸ್ಸಿನಲ್ಲಿ ರಾಣಿ ಪಟ್ಟಕ್ಕೇರಿದವರು. 7 ದಶಕಗಳಿಂದ ಈ ಹುದ್ದೆಯನ್ನು ಸಂಪೂರ್ಣ ಜವಾಬ್ದಾರಿಯುತವಾಗಿ ನಿಭಾಯಿಸುತ್ತಿರುವ ಇವರು ಅತಿ ಹೆಚ್ಚು ಕಾಲ ಈ ಸಿಂಹಾಸನವನ್ನು ಹಿಡಿದ ವ್ಯಕ್ತಿಯಾಗಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link