ಕೆಲವೇ ದಿನಗಳಲ್ಲಿ ಈ ರಾಶಿಯವರ ಎಲ್ಲಾ ಕಷ್ಟಗಳಿಗೂ ಮುಕ್ತಿ ! ಕೆಲಸ ಕಾರ್ಯಗಳಲ್ಲಿ ಅದೃಷ್ಟ ಕರುಣಿಸುತ್ತಾನೆ ಶನಿ ಮಹಾತ್ಮ

Wed, 26 Apr 2023-8:41 am,

ಕುಂಭರಾಶಿಯಲ್ಲಿಯೇ  ಶನಿಯು ಹಿಮ್ಮುಖ ಚಲನೆ ಕೆಲವು ರಾಶಿಯವರ ಭಾಗ್ಯ ಬೆಳಗಲಿದೆ. ಜೂನ್ 17ರಿಂದ ನವೆಂಬರ್ 4 ರವರೆಗೆ ಶನಿ ಹಿಮ್ಮುಖ ಚಲನೆಯಲ್ಲಿ ಇರುತ್ತಾನೆ. ಈ ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದ ದಿಕ್ಕು ಕೂಡಾ ಬದಲಾಗುತ್ತದೆ. ಇಲ್ಲಿಯವರೆಗೆ ಕೈ ಕೊಟ್ಟಿದ್ದ ಅದೃಷ್ಟ ಕೈ ಹಿಡಿಯಲಿದೆ. 

ಮೀನ ರಾಶಿ : ಮೀನರಾಶಿಯವರಿಗೆ ಉತ್ತಮ ಉದ್ಯೋಗಾವಕಾಶ ದೊರೆಯಬಹುದು. ಉದ್ಯೋಗದಲ್ಲಿ ಬಡ್ತಿ ದೊರೆಯಬಹುದು . ಉದ್ಯೋಗ ಬದಲಾವಣೆ ಲಾಭದಾಯಕವಾಗಿರುತ್ತದೆ. ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ ಮತ್ತು ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಉದ್ಯೋಗ ಬದಲಾಯಿಸುವ ಯೋಚನೆಯಲ್ಲಿದ್ದರೆ ಇದಕ್ಕಿಂತ ಒಳ್ಳೆಯ ಸಮಯ ಮತ್ತೊಂದಿಲ್ಲ. ವ್ಯಾಪಾರದಲ್ಲಿರುವವರಿಗೂ ಲಾಭವಾಗಲಿದೆ.  

ಸಿಂಹ ರಾಶಿ : ಮದುವೆಗೆ ಸಂಬಂಧ ಪಟ್ಟಂತೆ ಸಮಸ್ಯೆಗಳು ಕಾಣಿಸಿಕೊಂಡಿದ್ದರೆ ದೂರವಾಗುತ್ತದೆ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಭಾಗ್ಯ ಕೂಡಿ ಬರಲಿದೆ. ಮಾಡುವ ಕೆಲಸಗಲ್ಲಿ ಶನಿದೆವನ ಆಶೀರ್ವಾದ ಇರಲಿದೆ. ಹಾಗಾಗಿ ಸೋಲುವ ಭಯವಿಲ್ಲದೆ ಮುಂದುವರಿಯಬಹುದು. ರಾಜಕೀಯಕ್ಕೆ ಸಂಬಂಧಿಸಿದ ಜನರು ದೊಡ್ಡ ಸ್ಥಾನಕ್ಕೆ ಏರಬಹುದು.

ವೃಷಭ ರಾಶಿ :  ಶನಿಯ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ   ವೃಷಭ ರಾಶಿಯವರ ಅದೃಷ್ಟದ ಬಾಗಿಲು ತೆರೆಯಲಿದೆ. ವ್ಯಾಪಾರ ವೃದ್ಧಿಯಾಗಿ, ಲಾಭವೂ ಹೆಚ್ಚಾಗುವುದು. ಉದ್ಯೋಗದಲ್ಲಿರುವವರ ವೇತನ ಹೆಚ್ಚಾಗುವುದು. ಬಡ್ತಿಯೊಂದಿಗೆ ವರ್ಗಾವಣೆಯೂ ಸಾಧ್ಯ. ಹಣದ ಸಮಸ್ಯೆಗಳೆಲ್ಲವೂ ಪರಿಹಾರವಾಗುವುದು. ಕೆಲಸ ಕಾರ್ಯಗಳಲ್ಲಿ ಎದುರಾಗುತ್ತಿದ್ದ ಅದೆ ತಡೆಗಳು ನಿವಾರಣೆಯಾಗುವುದು. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link