ಇನ್ನು ಎರಡೇ ದಿನಗಳಲ್ಲಿ ತೆರೆಯುವುದು ಈ ರಾಶಿಯವರ ಅದೃಷ್ಟದ ಬಾಗಿಲು ! ಕಾಣುವರು ಸಾಲು ಸಾಲು ಗೆಲುವು

Thu, 20 Apr 2023-9:03 am,

ಮೇಷ: ಮೇಷ ರಾಶಿಯವರ ಭವಿಷ್ಯ ಬೆಳಗಲಿದೆ. ಅವಿವಾಹಿತರಿಗೆ ವಿವಾಹ ನಿಶ್ಚಯವಾಗಬಹುದು. ಶಿಕ್ಷಣ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಪ್ರಗತಿ ಕಾಣಲಿದ್ದಾರೆ. ಯಾವ ಕೆಲಸ ಮಾಡುವುದಾದರೂ ಮನೆಯವರ ಸಂಪೂರ್ಣ ಬೆಂಬಲ ಇರಲಿದೆ. ಕಚೇರಿಯಲ್ಲಿ ಅಧಿಕಾರಿಗಳು ಕೂಡಾ ನಿಮ್ಮ ಕಾರ್ಯ ವೈಖರಿಯಿಂದ  ಹೆಮ್ಮೆ ಪಡುತ್ತಾರೆ.   

ವೃಷಭ:  ಮನೆ ಮತ್ತು ವಾಹನ ಖರೀದಿಸಲು ಬಯಸುವವರು ಈ ಸಂದರ್ಭದಲ್ಲಿ ಯೋಚನೆ ಮಾಡಬಹುದು. ಗುರು ಬಲದಿಂದ ನೀವು ಮಾಡಬೇಕೆಂದಿರುವ ಕೆಲಸ ಕೈಗೂಡುವುದು.  ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವ ವಿದ್ಯಾರ್ಥಿಗಳ ಆಸೆ ನೆರವೇರುವುದು. 

ಮಿಥುನ: ವೃತ್ತಿಯಲ್ಲಿ ಪ್ರಗತಿಯಾಗುವುದು. ವ್ಯವಹಾರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತವೆ. ಉದ್ಯೋಗವನ್ನು ಬದಲಾಯಿಸಲು ಬಯಸುವವರು ಕೂಡಾ ಈ ಸಂದರ್ಭದಲ್ಲಿ ಪ್ರಯತ್ನಿಸಿ. ನೀವು ಅಂದುಕೊಂಡ ಉದ್ಯೋಗ ನಿಮ್ಮದಾಗುತ್ತದೆ. 

ಕರ್ಕಾಟಕ: ಜಮೀನಿನ ಮೇಲೆ ಹೂಡಿಕೆ ಮಾಡಬಹುದು. ವಾಹನವನ್ನು ಬದಲಾಯಿಸಲು ಇದೇ  ಸರಿಯಾದ ಸಮಯ. ಕಚೇರಿಯಲ್ಲಿ ನಿಮ್ಮ ಕೆಲಸಕ್ಕೆ ಶ್ಲಾಘನೆ ಸಿಗುವುದು.

ಸಿಂಹ:  ತಂದೆ ಮತ್ತು ಮಗ ಇಬ್ಬರೂ ಒಂದೇ ವ್ಯವಹಾರದಲ್ಲಿ ಕೆಲಸ ಮಾಡುತ್ತಿದ್ದರೆ, ಶೀಘ್ರದಲ್ಲೇ ಪ್ರಗತಿ ಹೊಂದಬಹುದು. ವಿದ್ಯಾರ್ಥಿಗಳು ಕಷ್ಟ ಪಟ್ಟು ಓದಿದರೆ ಅದರ ಫಲ ಖಂಡಿತಾ ಸಿಗುತ್ತದೆ. 

ಕನ್ಯಾ: ಶಿಕ್ಷಣ, ಧರ್ಮ ಅಥವಾ  ಕಮ್ಯುನಿಕೇಶನ್ ಕ್ಷೇತ್ರಕ್ಕೆ ಸಂಬಂಧಿಸಿದ ಕೆಲಸ ಮಾಡುವವರಿಗೆ ಭಾರೀ ಲಾಭವಾಗುವುದು.  ಈ ಬಾರಿ ಈ ರಾಶಿಯವರ ಆದಾಯವೂ ಹೆಚ್ಚಲಿದೆ. ಆದಾಯದ ರೂಪದಲ್ಲಿ ಹೆಚ್ಚಿನ ಹಣವನ್ನು ಪಡೆಯುವಿರಿ.      

ವೃಶ್ಚಿಕ: ವ್ಯಾಪಾರ ಆರಂಭಿಸಲು ಇದು ಸೂಕ್ತ ಸಮಯ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಆರ್ಥಿಕವಾಗಿ ಸ್ಥಿತಿ ಉತ್ತಮವಾಗಲಿದೆ. ರಫ್ತು ಆಮದು ಕೆಲಸ ಮಾಡುವವರಿಗೆ ಲಾಭವಾಗುತ್ತದೆ.  

ಧನು ರಾಶಿ: ಉದ್ಯೋಗದಲ್ಲಿರುವವರು, ಬಡ್ತಿ ಮತ್ತು ಇನ್ಕ್ರಿಮೆಂಟ್ ಪಡೆಯುವಿರಿ. ಪಾಲುದಾರಿಕೆಯಲ್ಲಿ ಹೊಸ ವ್ಯಾಪಾರ  ಆರಂಭಿಸಲು ಸರಿಯಾದ ಸಮಯ. ದೊಡ್ಡ ಆರ್ಡರ್ ಗಳನ್ನು ಪಡೆಯಬಹುದು. ನಿಮ್ಮ ಅದೃಷ್ಟವು ಬೆಳಗುವುದು. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link