Golden Globe To Naatu Naatu : ʼನಾಟು ನಾಟುʼಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ.. ಫೋಟೋಸ್ ನೋಡಿ..!
ಬಿಡುಗಡೆಯಾದಾಗಿನಿಂದ ʼನಾಟು ನಾಟುʼ ಹಾಡು ಭಾರತವಷ್ಟೇ ಅಲ್ಲ ಪ್ರಪಂಚದಾದ್ಯಂತ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಎಲ್ಲಿ ನೋಡಿದ್ರೂ ರಾಮ್ ಚರಣ್ ಮತ್ತು ಎನ್‌ಟಿಆರ್ ಹಾಡಿನ ಹಾವಳಿ ಹೆಚ್ಚಾಗಿತ್ತು.
ಈ ಹಾಡಿಗಾಗಿ ರಾಜಮೌಳಿ, ಎನ್‌ಟಿಆರ್, ರಾಮ್‌ಚರಣ್ ಎಷ್ಟು ಕಷ್ಟ ಪಟ್ಟಿದ್ದರು ಎಂಬುವುದನ್ನ ಸ್ವತಃ ಸಂದರ್ಶನವೊಂದರಲ್ಲಿ ಅವರೇ ಹೇಳಿಕೊಂಡಿದ್ದರು.
ಶ್ರಮಕ್ಕೆ ಫಲ ಎನ್ನುವ ರೀತಿಯಲ್ಲಿ ಇದೀಗ ಭಾರತೀಯ ಸಿನಿರಂಗದಲ್ಲೇ ಪ್ರಪ್ರಥಮ ಬಾರಿಗೆ ಆರ್‌ಆರ್‌ಆರ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.
ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ನಂತರ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದ್ದಕ್ಕೆ RRR ತಂಡ ಸಂತೋಷ ವ್ಯಕ್ತಪಡಿಸಿದೆ.
ಆಸ್ಕರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡ ನಂತರ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿ ಲಭಿಸಿದ್ದಕ್ಕೆ RRR ತಂಡ ಸಂತೋಷ ವ್ಯಕ್ತಪಡಿಸಿದೆ.
ಇದುವರೆಗೆ ಗೋಲ್ಡನ್ ಗ್ಲೋಬ್ ಅವಾರ್ಡ್ಸ್‌ನಲ್ಲಿ ಯಾವುದೇ ಭಾರತೀಯ ಚಿತ್ರ ಪ್ರಶಸ್ತಿ ಪಡೆದಿಲ್ಲ. ಇದೀಗ ಕೀರವಾಣಿ ಆರ್‌ಆರ್‌ಆರ್ ಚಿತ್ರದ ನಾಟು ನಾಟು ಹಾಡಿಗೆ ಈ ಪ್ರಶಸ್ತಿ ಲಭಿಸಿದೆ.