ಈ ರಾಶಿಯವರ ಜೀವನದಲ್ಲಿ ಸಿರಿ ಸಂಪತ್ತು ಹರಿಸಲಿದ್ದಾನೆ ಶನಿ ಮಹಾತ್ಮ ! ಮುಂದಿನ ಐದು ತಿಂಗಳು ಸೋಲೇ ಇಲ್ಲ
ಮೇಷ ರಾಶಿ : ಈ ರಾಶಿಯವರ ಎಲ್ಲಾ ಆಸೆಗಳು ಈಡೇರುವುದು. ವರ್ಷ ಮುಗಿಯುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸು ಸಾಧಿಸುವಿರಿ. ದೊಡ್ಡ ಲಾಭದೊಂದಿಗೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.
ವೃಷಭ ರಾಶಿ : ನಿಮ್ಮ ಕಠಿಣ ಪರಿಶ್ರಮವು ಉತ್ತಮ ಪ್ರತಿಫಲವನ್ನು ಪಡೆಯುತ್ತದೆ. ಹೊಸ ಉದ್ಯೋಗಾಕಾಂಕ್ಷಿಗಳೂ ಯಶಸ್ವಿಯಾಗಬಹುದು. ವಿದೇಶಿ ಪ್ರಯಾಣವು ಅನುಕೂಲಕರವಾಗಿರುತ್ತದೆ. ಶನಿ ದೇವನ ಆಶೀರ್ವಾದದಿಂದ ಕೈ ಹಾಕುವ ಎಲ್ಲಾ ಕೆಲಸ ಕೈ ಗೂಡುವುದು.
ಮಕರ ರಾಶಿ : ಶತಭಿಷಾ ನಕ್ಷತ್ರದಲ್ಲಿ ಶನಿದೇವನ ಪ್ರವೇಶವು ಪ್ರತಿಯೊಂದು ವಿಷಯದಲ್ಲೂ ಶುಭ ಫಲವನ್ನು ನೀಡುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಹಣವನ್ನು ಉಳಿಸುವಲ್ಲಿ ಯಶಸ್ವಿಯಾಗುತ್ತೀರಿ. ಗಳಿಕೆಗೆ ಹೊಸ ಅವಕಾಶಗಳು ದೊರೆಯಲಿವೆ.
ಸಿಂಹ ರಾಶಿ : ಕೆಲಸದಲ್ಲಿ ಉತ್ತಮ ಯಶಸ್ಸು ಸಿಕ್ಕಿ ಬಡ್ತಿಗೆ ಕಾರಣವಾಗುತ್ತದೆ. ಪ್ರೀತಿ ಮತ್ತು ದಾಂಪತ್ಯ ಜೀವನ ಚೆನ್ನಾಗಿರುತ್ತದೆ. ಸಂಗಾತಿಯೊಂದಿಗೆ ನೀವು ಸಂತೋಷವಾಗಿರುತ್ತೀರಿ. ವ್ಯವಹಾರದಲ್ಲಿಯೂ ಉತ್ತಮ ಯಶಸ್ಸು ಸಿಗಲಿದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)