ಈ ಮೂರು ರಾಶಿಯವರಿಗೆ ಗುರು ದೆಸೆ ! ಕೈ ಹಾಕಿದ ಕೆಲಸದಲ್ಲಿ ಭರ್ಜರಿ ಯಶಸ್ಸು, ಉಕ್ಕಿ ಬರುವುದು ಧನ ಸಂಪತ್ತು
ಭರಣಿ ನಕ್ಷತ್ರವನ್ನು ಪ್ರವೇಶಿಸಿರುವ ಗುರು ನವೆಂಬರ್ 27 ರವರೆಗೆ ಇದೇ ನಕ್ಷತ್ರದಲ್ಲಿ ಇರಲಿದ್ದಾನೆ. ನಂತರ ಗುರು ಭರಣಿ ನಕ್ಷತ್ರವನ್ನು ತೊರೆದು ಅಶ್ವಿನಿ ನಕ್ಷತ್ರದ ಮೊದಲ ಹಂತವನ್ನು ಪ್ರವೇಶಿಸುತ್ತಾನೆ. ಈ ರೀತಿಯಾಗಿ ನವೆಂಬರ್ 27 ರವರೆಗೆ ಸುಮಾರು 150 ದಿನಗಳ ಕಾಲ ಗುರು ಭರಣಿ ನಕ್ಷತ್ರದಲ್ಲಿ ಉಳಿದುಕೊಳ್ಳುವ ಸಮಯದಲ್ಲಿ ಎಲ್ಲಾ 12 ರಾಶಿಗಳಿಗೆ ಶುಭ ಮತ್ತು ಅಶುಭ ಪರಿಣಾಮಗಳನ್ನು ನೀಡುತ್ತದೆ.
ಗುರುವಿನ ನಕ್ಷತ್ರ ಬದಲಾವಣೆಯು ಮೂರು ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಮಾತ್ರವಲ್ಲ ಬಹಳಷ್ಟು ಹಣವನ್ನು ಕೂಡಾ ನೀಡುತ್ತದೆ. ಗುರುವಿನ ನಕ್ಷತ್ರ ಬದಲಾವಣೆಯಿಂದ ಅದೃಷ್ಟ ಬೆಳಗುವ ರಾಶಿಗಳು ಯಾವುವು ನೋಡೋಣ.
ಮೇಷ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಮೇಷ ರಾಶಿಯವರ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಗುರುವಿನ ನಕ್ಷತ್ರ ಬದಲಾವಣೆಯಿಂದ ಮೇಷ ರಾಶಿಯಲ್ಲಿ ಗುರು-ರಾಹುವಿನ ಸಂಯೋಗ ರೂಪುಗೊಂಡ ಗುರು ಚಂಡಾಲ ಯೋಗ ಅಂತ್ಯಗೊಳ್ಳುತ್ತದೆ. ಇದರೊಂದಿಗೆ ಈವರೆಗೆ ಅನುಭವಿಸುತ್ತಿದ್ದ ಕಷ್ಟಗಳು ಕೊನೆಯಾಗುತ್ತವೆ. . ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಯಶಸ್ಸು ಕಾಣುವಿರಿ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು.
ಮಿಥುನ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಮಿಥುನ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ವಿಶೇಷವಾಗಿ ವ್ಯಾಪಾರ ವರ್ಗದವರಿಗೆ ಲಾಭವಾಗಲಿದೆ. ಸಾಕಷ್ಟು ಹಣ ಹರಿದು ಸಿಗಲಿದೆ. ಆದಾಯ ಹೆಚ್ಚಲಿದೆ. ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಹೊಸ ಆದಾಯದ ಮೂಲಗಳನ್ನು ಸೃಷ್ಟಿಸಬಹುದು. ಹೊಸ ಮನೆ ಅಥವಾ ಕಾರು ಖರೀದಿಸಬಹುದು. ಹೊಸ ಜನರ ಭೇಟಿಯಿಂದ ಲಾಭವಾಗಲಿದೆ.
ಕರ್ಕಾಟಕ ರಾಶಿ : ಗುರುವಿನ ನಕ್ಷತ್ರ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಲಾಭವನ್ನು ನೀಡುತ್ತದೆ. ನಿರೀಕ್ಷೆಗೂ ಮೀರಿದ ಹಣ ಕೈ ಸೇರುತ್ತದೆ. ಹೊಸ ಮೂಲಗಳಿಂದ ಹಣ ಬರುತ್ತದೆ ಮತ್ತು ಆದಾಯವೂ ಹೆಚ್ಚಾಗಬಹುದು. ಆರೋಗ್ಯ ಚೆನ್ನಾಗಿರುತ್ತದೆ. ನಿರುದ್ಯೋಗಿಗಳು ಉದ್ಯೋಗ ಪಡೆಯುವ ಅವಕಾಶವಿರುತ್ತದೆ. ವ್ಯಾಪಾರ ವರ್ಗದವರಿಗೆ ಸಮಯವು ತುಂಬಾ ಮಂಗಳಕರವಾಗಿರಲಿದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆ ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)