Monsoon Snacks: ಮಳೆಗಾಲಕ್ಕೆ ಬಾಯಲ್ಲಿ ನೀರೂರಿಸುವ ಈ ತಿಂಡಿ ಸವಿದು ಖುಷಿಪಡಿ
ಸಮೋಸಾ ಅಂದ್ರೆ ಯಾರಿಗ್ ತಾನೇ ಇಷ್ಟವಿಲ್ಲ ಹೇಳಿ. ಮಳೆಗಾಲದಲ್ಲಿ ಸಮೋಸಾ ಅನೇಕರ ಫೆವರೀಟ್ ಸ್ನಾಕ್ಸ್ ಅಂದರೆ ತಪ್ಪಾಗಲ್ಲ. ಮಳೆಗಾಲದಲ್ಲಿ ಗರಿಗರಿಯಾದ ಸಮೋಸಾ ಸೇವಿಸುವುದೇ ಒಂದು ರೀತಿ ಮಜಾ ನೀಡುತ್ತದೆ.
ಈರುಳ್ಳಿ ಪಕೋಡವನ್ನು ಈರುಳ್ಳಿ ಪನಿಯಾಣ ಎಂತಲೂ ಕರೆಯಲಾಗುತ್ತದೆ. ಇದು ಮಳೆಗಾಲದ ಅತ್ಯಂತ ಜನಪ್ರಿಯ ಕುರುಕಲು ತಿಂಡಿ. ಈ ಪಕೋಡ ಮೃದುವಾದ, ಕುರುಕುಲಾದ ಮತ್ತು ಗರಿಗರಿಯಾದ ತಿಂಡಿಯಾಗಿದ್ದು, ಮಳೆಗಾಲದ ನೆಚ್ಚಿನ ತಿಂಡಿಯಾಗಿದೆ. ಇದನ್ನು ಬಾಳೆಕಾಯಿ, ಪಾಲಕ್, ಆಲೂಗಡ್ಡೆ, ಈರುಳ್ಳಿ ಮತ್ತು ಕುಂಬಳಕಾಯಿ ಮುಂತಾದವುಗಳಿಂದ ತಯಾರಿಸಲಾಗುತ್ತದೆ.
ಮಳೆಗಾಲಕ್ಕೆ ಆಲೂ ಟಿಕ್ಕಿ ಅತ್ಯುತ್ತಮ ತಿಂಡಿಯಾಗಿದೆ. ಗರಿಗರಿಯಾದ, ಎಣ್ಣೆಯುಕ್ತ ಮತ್ತು ಸುವಾಸನೆಯುಳ್ಳ ಆಲೂ ಟಿಕ್ಕಿ ಸೇವಿಸಲು ಉತ್ತಮ ಸ್ನಾಕ್ಸ್ ಆಗಿದೆ. ಈ ಖಾದ್ಯವನ್ನು ನೀವು ವಿವಿಧ ರೀತಿಯಲ್ಲಿ ತಯಾರಿಸಬಹುದು. ಕುರ್ಕುರೆ ಆಲೂ ಟಿಕ್ಕಿ, ದಾಲ್ ಆಲೂ ಟಿಕ್ಕಿ, ಚೋಲೆ ಆಲೂ ಟಿಕ್ಕಿ ಇನ್ನೂ ಅನೇಕ ರೀತಿ ತಯಾರಿಸಿ ಸವಿಯಬಹುದು.
ಮಸಾಲೆಯುಕ್ತ ಹಿಸುಕಿದ ಆಲೂಗಡ್ಡೆಯನ್ನು ಬ್ರೆಡ್ ತುಂಡುಗಳಲ್ಲಿ ಸುತ್ತಿ ಗರಿಗರಿಯಾಗುವವರೆಗೆ ಕರಿದು ಇದನ್ನು ತಯಾರಿಸಲಾಗುತ್ತದೆ. ಇದನ್ನು ಹಸಿರು ಮತ್ತು ಕೆಂಪು ಚಟ್ನಿಯೊಂದಿಗೆ ಸೇವಿಸಿದ್ರೆ ಸಿಗುವ ಆನಂದವೇ ಬೇರೆ. ಇದು ಸಹ ಮಳೆಗಾಲದ ಉತ್ತಮ ತಿಂಡಿಯಾಗಿದೆ.
ಬೋಂಡಾ ಬಹುತೇಕರಿಗೆ ಇಷ್ಟವಾಗುವ ಸ್ನಾಕ್ಸ್ ಆಗಿದೆ. ಬೇಯಿಸಿದ ಆಲೂಗಡ್ಡೆಯನ್ನು ಉಪ್ಪು, ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸದೊಂದಿಗೆ ಬೆರೆಸಿ ಗರಿಗರಿಯಾಗುವವರೆಗೂ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರ ಮೇಲ್ಬಾಗ ಚೆನ್ನಾಗಿ ರೋಸ್ಟ್ ಆಗಿದ್ದರೆ, ಒಳಗಿನ ಮಸಾಲೆಯುಕ್ತ ಆಲೂಗಡ್ಡೆ ನಿಮಗೆ ವಿಭಿನ್ನ ರುಚಿ ನೀಡುತ್ತದೆ.