Good News: ತನ್ನ ಚಂದಾದಾರರಿಗೆ ಭಾರಿ ನೆಮ್ಮದಿಯ ಸುದ್ದಿ ಪ್ರಕಟಿಸಿದ ESIC
1. ಸಭೆಯಲ್ಲಿ ಹಲವು ನಿರ್ಣಯಗಳನ್ನು ಕೈಗೊಳ್ಳಲಾಗಿದೆ (big decisions were taken in the meeting) - ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ರಾಜ್ಯ ಸಚಿವ (Minister of State for Labor and Employment) ಸಂತೋಷ್ ಕುಮಾರ್ ಗಂಗ್ವಾರ್ (Santosh Kumar Gangwar) ಅವರ ಅಧ್ಯಕ್ಷತೆಯಲ್ಲಿ ನಡೆದ 183 ನೇ ಸಭೆಯಲ್ಲಿ (183rd meeting) ESIC ನೌಕರರಿಗೆ ವೈದ್ಯಕೀಯ ಸೇವೆಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಹಲವಾರು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಂಡಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಕಾರ್ಮಿಕ ಸಚಿವಾಲಯ ಒಂದು ವೇಳೆ ರಾಜ್ಯ ಸರ್ಕಾರಗಳು ಖುದ್ದಾಗಿ ಆಸ್ಪತ್ರೆಗಳನ್ನು ನಡೆಸಲು ಅಥವಾ ಭವಿಷ್ಯದ ಹೊಸ ಆಸ್ಪತ್ರೆಗಳನ್ನು ನಡೆಸಲು ಒಲವು ತೋರದಿದ್ದರೆ, ಸ್ವತಃ ESICಯೇ ಅವುಗಳ ಜವಾಬ್ದಾರಿ ಹೊತ್ತುಕೊಳ್ಳಲಿದೆ ಎಂದಿದೆ. ಕಾರ್ಮಿಕರ ಬೇಡಿಕೆಯ ಹಿನ್ನೆಲೆ ಈ ಹೆಜ್ಜೆ ಇಡಲಾಗಿದೆ. ಲಾಭಾರ್ಥಿಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯ ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
2. ನೌಕರರಿಗೆ ಭಾರಿ ನೆಮ್ಮದಿ (Big relief to the employees) - ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಲಾಭಾರ್ಥಿಗಳು ಅಥವಾ ಸದಸ್ಯರು ಯಾವುದೇ ಹತ್ತಿರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅನುಮತಿ ನೀಡಿದೆ. ಪ್ರಸ್ತುತ ಲಾಭಾರ್ಥಿಗಳು ಪ್ಯಾನಲ್ ನಲ್ಲಿ ಶಾಮೀಲಾಗಿರುವ ಅಥವಾ ಅದರ ಹೊರಗಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಮೊದಲು ESIC ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ರೆಫರ್ ಮಾಡಿಸಬೇಕಾಗುತ್ತದೆ.
3. ಈ ರೀತಿಯ ಕಾಯಿಲೆಗಳಲ್ಲಿ ಸೌಲಭ್ಯ ಸಿಗಲಿದೆ (There will be facility in this type of disease) - ESIC BOARD ಕೈಗೊಂಡ ನಿರ್ಣಯದ ಪ್ರಕಾರ ಹೃದಯಾಘಾತದಂತಹ ತುರ್ತು ಚಿಕಿತ್ಸೆಯ ಸಂದರ್ಭದಲ್ಲಿ ಇದು ತುಂಬಾ ಸಹಕಾರಿಯಾಗಲಿದೆ. ಏಕೆಂದರೆ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ESIC ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿಂದ ರೆಫರ್ ಮಾಡಿಸುವುದು ರೋಗಿಗಳಿಗೆ ಅಸಾಧ್ಯದ ಕೆಲಸವಾಗಿರುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಈ ನಿರ್ಣಯ ಕೈಗೊಳ್ಳಲಾಗಿದೆ.
4. ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು (Keep these things in mind) - ESIC ಕೊಡುಗೆದಾರರು ಆಪತ್ಕಾಲದಲ್ಲಿ ಚಿಕಿತ್ಸೆ ಪಡೆಯಲು ಪ್ಯಾನಲ್ ನಲ್ಲಿ ಶಾಮೀಲಾಗಿರುವ ಆಸ್ಪತ್ರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಭೇಟಿ ನೀಡಬಹುದಾಗಿದೆ. ಪ್ಯಾನೆಲ್ ನಲ್ಲಿ ಶಾಮೀಲಾಗಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಂಪೂರ್ಣ ಕ್ಯಾಶ್ ಲೆಸ್ ಆಗಿದ್ದರೆ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ವೇಳೆ ಹಣವನ್ನು ನೀಡಿ, ಬಳಿಕ ನೀವು ನೀಡಿದ ಹಣದ ಪಾವತಿಗಳನ್ನು ಪ್ರಸ್ತುತಪಡಿಸಿ ನಿಮ್ಮ ಹಣವನ್ನು ನೀವು ಮರಳಿ ಪಡೆಯಬಹುದು. ಈ ಚಿಕಿತ್ಸೆಯ ದರಗಳು Government Health Service (CGHS) ದರಗಳನ್ನು ಆಧರಿಸಿ ಇರಲಿದೆ.