DA Hike: ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ... ಶೇ. 4 ರಷ್ಟು ಹೆಚ್ಚಳವಾಯ್ತು ಡಿಎ ಮತ್ತು ಡಿಆರ್! ಈ ದಿನದಿಂದ ನಿಮ್ಮ ಕೈಸೇರಲಿದೆ ಭರ್ಜರಿ ವೇತನ
ಈ ವರ್ಷದ ಜೂನ್‌ನಿಂದ ಡಿಸೆಂಬರ್‌ವರೆಗೆ ನೀಡಲಾದ ಎಐಸಿಪಿಐ ಸೂಚ್ಯಂಕ (All India Consumer Price Index) ವನ್ನು ಆಧರಿಸಿ, ಮುಂದಿನ ಎರಡು ತಿಂಗಳಲ್ಲಿ ಅಂದರೆ ಜನವರಿ 2025ರಲ್ಲಿ ಡಿಎ ಹೆಚ್ಚಳದ ಮೊತ್ತವನ್ನು ನಿರ್ಧರಿಸಲಾಗುತ್ತದೆ. ಜುಲೈನಲ್ಲಿ ಸೂಚ್ಯಂಕವು 142.7 ಪಾಯಿಂಟ್‌ಗಳು ಮತ್ತು ಆಗಸ್ಟ್‌ನಲ್ಲಿ 142.6 ಪಾಯಿಂಟ್‌ಗಳಷ್ಟಿತ್ತು. ಸೆಪ್ಟೆಂಬರ್ ವೇಳೆಗೆ ಅದು ಮತ್ತೆ 143.3 ಅಂಕಗಳನ್ನು ತಲುಪಿತ್ತು. ಸದ್ಯ ಕೇಂದ್ರ ಸರ್ಕಾರಿ ನೌಕರರಿಗೆ ಶೇ 53ರಷ್ಟು ಡಿಎ ಬರುತ್ತಿದೆ.
ಮತ್ತೊಂದೆಡೆ, ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು ಕಾಯುತ್ತಿರುವ 8 ನೇ ವೇತನ ಆಯೋಗ ಜಾರಿಯಾಗುವುದೋ ಇಲ್ಲವೋ ಎಂಬುದು 2025 ಫೆಬ್ರವರಿಯಲ್ಲಿ ಘೋಷಣೆಯಾಗಲಿರುವ ಬಜೆಟ್ ಸಭೆಯಲ್ಲಿ ತಿಳಿದುಬರಲಿದೆ. ಒಂದು ವೇಳೆ 8ನೇ ವೇತನ ಆಯೋಗ ಜಾರಿಗೆ ಬಂದರೆ ನೌಕರರ ಕನಿಷ್ಠ ವೇತನ ದುಪ್ಪಟ್ಟಾಗಲಿದೆ. ಪಿಂಚಣಿಯನ್ನೂ ದ್ವಿಗುಣಗೊಳಿಸಲಾಗುತ್ತದೆ.
ಕಳೆದ ಆರು ತಿಂಗಳಲ್ಲಿ ಡಿಎ 3 ಪ್ರತಿಶತದಷ್ಟು ಹೆಚ್ಚಾಗಿದೆ. ಈ ಬಾರಿ ಜನವರಿ 2025 ರಲ್ಲಿ ಡಿಎ 4 ಪ್ರತಿಶತದಷ್ಟು ಹೆಚ್ಚಾಗುವ ನಿರೀಕ್ಷೆಯಿದೆ. ಎಐಸಿಪಿಐ ಸೂಚ್ಯಂಕ ಹೆಚ್ಚುತ್ತಿರುವುದೇ ಇದಕ್ಕೆ ಉದಾಹರಣೆ.
ಪ್ರಸ್ತುತ ಸೂಚ್ಯಂಕ ಹೆಚ್ಚುತ್ತಿದೆ. ಈ ಸೂಚ್ಯಂಕವನ್ನು ಆಧರಿಸಿ, ಡಿಎ ಇದುವರೆಗೆ 54 ಪ್ರತಿಶತವನ್ನು ತಲುಪಿದೆ. ಪ್ರಸ್ತುತ 53 ಪ್ರತಿಶತದಿಂದ ಹೆಚ್ಚುವರಿ 1 ಶೇಕಡಾ ಹೆಚ್ಚಳ ಕಂಡಿದೆ. ಡಿಸೆಂಬರ್ ವೇಳೆಗೆ ಇನ್ನೂ ಶೇ.2-3ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿ ಭತ್ಯೆ ಮತ್ತು ಡಿಯರ್‌ನೆಸ್ ರಿಲೀಫನ್ನು ವರ್ಷದಲ್ಲಿ ಎರಡು ಬಾರಿ ಹೆಚ್ಚಿಸಲಾಗುತ್ತದೆ.
ಇದೀಗ ಕೇಂದ್ರ ಸರ್ಕಾರದಿಂದ ನೌಕರರು ಮತ್ತು ಪಿಂಚಣಿದಾರರಿಗೆ ಮತ್ತೊಂದು ಶುಭ ಸುದ್ದಿ ಬಂದಿದೆ. ಮುಂದಿನ ಎರಡು ತಿಂಗಳಲ್ಲಿ ಡಿಎ ಮತ್ತು ಡಿಆರ್ ಹೆಚ್ಚಾಗಲಿದೆ ಎನ್ನಲಾಗುತ್ತಿದ್ದು, ಡಿಎ ಮತ್ತು ಡಿಆರ್ ಹೆಚ್ಚಾದಾಗಲೆಲ್ಲ ಸಂಬಳ ಮತ್ತು ಪಿಂಚಣಿ ಕೂಡ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತದೆ.