ಮನೆ ನಿರ್ಮಿಸುವರಿಗೆ ಸಿಹಿ ಸುದ್ದಿ !ಐದು ವರ್ಷಗಳಲ್ಲಿ ಅತ್ಯಂತ ಅಗ್ಗದ ಬೆಲೆಗೆ ಕುಸಿದ ಸಿಮೆಂಟ್ !
ಇತ್ತೀಚಿನ ದಿನಗಳಲ್ಲಿ ಮನೆ ನಿರ್ಮಾಣ ದುಬಾರಿಯಾಗುತ್ತಿದೆ. ಅಂದರೆ ಮೂಲ ಸಾಮಗ್ರಿಗಳ ಬೆಲೆಯಲ್ಲಿ ಆಗುತ್ತಿರುವ ಏರಿಕೆಯಿಂದ ಮನೆ ನಿರ್ಮಾಣ ಕಾರ್ಯ ಕೂಡಾ ದುಬಾರಿಯಾಗುತ್ತಿದೆ.
ಆದರೆ ಮನೆ ನಿರ್ಮಾಣ ಮಾಡಬೇಕು ಎಂದಿರುವವರಿಗೆ ಅಥವಾ ಮನೆ ನಿರ್ಮಾಣ ಕಾರ್ಯಕ್ಕೆ ಇಳಿದಿರುವವರಿಗೆ ಸಿಹಿ ಸುದ್ದಿ ಇದೆ. ಸಿಮೆಂಟ್ ಬೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಇಳಿಕೆಯಾಗಿದೆ.
ಸಿಮೆಂಟ್ ಬೆಲೆಗಳು ಪ್ರಸ್ತುತ ಐದು ವರ್ಷಗಳ ಕನಿಷ್ಠ ಮಟ್ಟವನ್ನು ತಲುಪಿವೆ. ಅಲ್ಲದೆ, ಸದ್ಯದಲ್ಲಿ ಸಿಮೆಂಟ್ ಬೆಲೆಯಲ್ಲಿ ಏರಿಕೆಯಾಗುವ ಯಾವ ನಿರೀಕ್ಷೆಯೂ ಇಲ್ಲ.
ಸಿಮೆಂಟ್ ಕಂಪನಿಗಳ ನಡುವೆಯೇ ಹೆಚ್ಚಿರುವ ಸ್ಪರ್ಧೆಯ ಕಾರಣದಿಂದ ಬೆಲೆ ಇಳಿಕೆ ಅನಿವಾರ್ಯವಾಗಿದೆ ಎಂದು ವರದಿ ಹೇಳುತ್ತದೆ. ಇದರ ಜೊತೆಗೆ ದುರ್ಬಲ ಬೇಡಿಕೆಯಿಂದಾಗಿಯೂ ಬೆಲೆ ಏರಿಕೆ ಸಾಧ್ಯವಾಗದ ಮಾತು ಎನ್ನಲಾಗುತ್ತಿದೆ.
ಈ ಪರಿಸ್ಥಿತಿಯು ಭವಿಷ್ಯದಲ್ಲಿಯೂ ಮುಂದುವರಿಯುವ ಸಾಧ್ಯತೆಯಿದೆ. ಬೇಡಿಕೆ ಸುಧಾರಿಸುವವರೆಗೆ ಯಾವುದೇ ಗಮನಾರ್ಹ ಬೆಲೆ ಹೆಚ್ಚಳವನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ವರದಿ ಒತ್ತಿಹೇಳುತ್ತದೆ.
ವರದಿಯ ಪ್ರಕಾರ, FY 25-26 ರ ಮಧ್ಯದಿಂದ ಬೇಡಿಕೆಯಲ್ಲಿ ಸುಧಾರಣೆ ಕಾಣುವ ಸಾಧ್ಯತೆ ಇದೆ. ಹೆಚ್ಚುತ್ತಿರುವ ಮೂಲಸೌಕರ್ಯ ಯೋಜನೆಗಳು, ಗ್ರಾಮೀಣ ಮತ್ತು ನಗರ ವಸತಿ ಬೇಡಿಕೆಯಲ್ಲಿನ ಪುನರುಜ್ಜೀವನ ಮತ್ತು ರಿಯಲ್ ಎಸ್ಟೇಟ್ ಚಟುವಟಿಕೆಯ ಉಲ್ಬಣದಿಂದ ಬೇಡಿಕೆಯಲ್ಲಿ ಸುಧಾರಣೆ ಆಗಬಹುದು.