LPG Cylinder Offer: ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಗುಡ್ ನ್ಯೂಸ್..ಸಿಲಿಂಡರ್ ಬೆಲೆಯ ಮೇಲೆ ಭಾರಿ ರಿಯಾಯಿತಿ..!
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ದರದಿಂದ ಬೇಸತ್ತಿದ್ದೀರಾ..? ಬೆಲೆ ಏರಿಕೆ ತಲೆ ನೋವಾಗಿ ಪರಿಣಮಿಸಿದೆಯಾ..? ಯೋಚನೆ ಬಿಡಿ ಗ್ಯಾಸ್ ಬಳಕೆದಾರರರಿಗೆ ಗುಡ್ ನ್ಯೂಸ್ ಇಲ್ಲಿದೆ, ಏನದು ತಿಳಿಯಲು ಮುಂದೆ ಓದಿ...
ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಬಹಳಷ್ಟು ಜನರಿಗೆ ತಲೆ ನೋವಾಗಿ ಕಾಡುತ್ತಿದೆ. ನೀವು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದಿರಾ..? ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಸಿಲಿಂಡರ್ ಇದೀಗ ಭಾರಿ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಸಿಲಿಂಡರ್ ಬುಕ್ ಮಾಡುವವರಿಗೆ ಈ ಡೀಲ್ ಲಭ್ಯವಿದ್ದು, ಇದರ ಮೂಲ ಕೊಡುಗೆ ಏನು? ಈ ರಿಯಾಯಿತಿ ಯಾರಿಗೆ ಅನ್ವಯಿಸುತ್ತದೆ? ಮುಂತಾದ ವಿಷಯಗಳನ್ನು ಈ ಸ್ಟೊರಿಯಲ್ಲಿ ತಿಳಿಯೋಣ..
ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬುಕಿಂಗ್ ಮೇಲೆ ಭರ್ಜರಿ ಕೊಡುಗೆ ಸಿಗಲಿದೆ. ಹೆಚ್‌ಪಿ, ಇಂಡೇನ್, ಭಾರತ್, ಇವುಗಳಲ್ಲಿ ಯಾವುದೇ ಸಿಲಿಂಡರ್ ನೀವು ಬಳಸುತ್ತಿದ್ದರೂ ಈ ಕೊಡುಗೆಯನ್ನು ನೀವು ಪಡೆಯಬಹುದು.
ಆದರೆ ಈ ಒಪ್ಪಂದ ಎಲ್ಲರಿಗೂ ಅನ್ವಯಿಸುವುದಿಲ್ಲ. ಕ್ರೆಡಿಟ್ ಕಾರ್ಡ್ ಬಳಸುತ್ತಿರುವವರಿಗೆ ಈ ಡೀಲ್ ಲಭ್ಯವಿದೆ. ಆಕ್ಸಿಸ್ ಬ್ಯಾಂಕ್ ತನ್ನ ಬಳಕೆದಾರರಿಗೆ ಈ ಕೊಡುಗೆಯನ್ನು ನೀಡಿದೆ.
ಆಕ್ಸಿಸ್ ಬ್ಯಾಂಕ್‌ನ ಎಲ್ಲಾ ಕ್ರೆಡಿಟ್ ಕಾರ್ಡ್‌ಗಳಿಗೆ ಈ ಕೊಡುಗೆ ಅನ್ವಯಿಸುವುದಿಲ್ಲ. ಈ ಡೀಲ್ ಏರ್‌ಟೆಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ, ಇದರ ಸಹಾಯದಿಂದ ನೀವು 10ರಷ್ಟು ಕ್ಯಾಶ್ ಬ್ಯಾಕ್ ಪಡೆಯಬಹುದು. ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿದ್ದು, ಬಳಕೆದಾರರು ಈ ಆಪರ್ ಬಲಸಿ ಗ್ಯಾಸ್ ಸಿಲಿಂಡರ್ ಮೇಲೆ ಭರ್ಜರಿ ಡಿಸ್ಕೌಂಟ್ ಪಡೆಯಬಹುದು.
ಏರ್ ಟೆಲ್ ಥ್ಯಾಂಕ್ಸ್ ಆಪ್ ಮೂಲಕ ಗ್ಯಾಸ್ ಸಿಲಿಂಡರ್ ಬುಕ್ ಮಾಡಿ ನೀವು ಈ ಆಫರ್ ಅನ್ನು ಪಡೆಉಬಹುದು. ಆಗ ಮಾತ್ರ ನಿಮಗೆ ಶೇಕಡಾ 10 ರಷ್ಟು ಕ್ಯಾಶ್ ಬ್ಯಾಕ್ ಸಿಗುತ್ತದೆ. 85ರ ರಿಯಾಯಿತಿ ದೊರೆಯಲಿದೆ.