Pension: ಹಿರಿಯ ನಾಗರಿಕರಿಗೆ ಬೊಂಬಾಟ್ ಸುದ್ದಿ: ಈ ಯೋಜನೆಯ ಬದಲಾವಣೆಯಿಂದ ನಿಮ್ಮ ಖಾತೆಗೆ ಪ್ರತೀ ತಿಂಗಳು ಬರಲಿದೆ ರೂ. 20,500!
ಕೇಂದ್ರ ಸರ್ಕಾರದಿಂದ ಹಿರಿಯ ನಾಗರಿಕರಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಇಲ್ಲಿವರೆಗೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿದ ಹಣವನ್ನು ದ್ವಿಗುಣಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ 2023 ರ ಸಂದರ್ಭದಲ್ಲಿ ಈ ಬಗ್ಗೆ ಘೋಷಣೆ ಹೊರಡಿಸಿದ್ದರು.
ಪ್ರಸ್ತುತ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಕೇವಲ 15 ಲಕ್ಷ ರೂಪಾಯಿ ಹೂಡಿಕೆ ಮಾಡುವ ಅವಕಾಶ ಇತ್ತು. ಆದರೆ ಈಗ ಈ ಮಿತಿಯನ್ನು ದ್ವಿಗುಣಗೊಳಿಸಿ, 30 ಲಕ್ಷದ ವರೆಗೂ ಹೂಡಿಕೆ ಮಾಡಬಹುದು ಎಂದು ಹೇಳಲಾಗಿದೆ.
ಕೇಂದ್ರ ಸರ್ಕಾರವು 2004 ರಲ್ಲಿ ಹಿರಿಯ ನಾಗರಿಕರಿಗೆ ಹೂಡಿಕೆ ಮಾಡಿದ ಹಣದಿಂದ ನಿರ್ದಿಷ್ಟ ಮಾಸಿಕ ಆದಾಯವನ್ನು ಒದಗಿಸಲು “ಹಿರಿಯ ನಾಗರಿಕರ ಉಳಿತಾಯ ಯೋಜನೆ”ಯನ್ನು ಜಾರಿಗೆ ತಂದಿತು. ಈ ಯೋಜನೆಯು ಸೀನಿಯರ್ ಸಿಟಿಜನ್’ಗಳಿಗೆ ಭರಪೂರ ಪ್ರಯೋಜನವನ್ನು ನೀಡಿತು.
ನಿವೃತ್ತಿಯ ಸಮಯದಲ್ಲಿ ಹಿರಿಯ ನಾಗರಿಕರು ಪಡೆಯುವ ಹಣವನ್ನು ಪ್ರತಿ ತಿಂಗಳು ಇಲ್ಲಿ ಹೂಡಿಕೆ ಮಾಡಬಹುದು. ಈ ಮೂಲಕ ಪಿಂಚಣಿ ಪಡೆಯುವ ಅವಕಾಶ ನಿಮಗೆ ಸಿಗುತ್ತದೆ. ಇದು ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ನೀಡಲ್ಪಟ್ಟ ವರದಾನ ಎಂದೇ ಹೇಳಬಹುದು. ಅಷ್ಟೇ ಅಲ್ಲ, ಪ್ರತಿ ತಿಂಗಳು ನಿಮ್ಮ ಖಾತೆಗೆ 20,500 ರೂ.ವರೆಗೆ ಹಣ ಪಡೆಯುವ ಅವಕಾಶವೂ ಈ ಯೋಜನೆ ಮೂಲಕ ಇದೆ.
ಹಿರಿಯ ನಾಗರಿಕರು ಹೂಡಿಕೆ ಮಾಡುವ ಹಣದ ಆಧಾರದ ಮೇಲೆ, ವೃದ್ದಾಪ್ಯದ ಸಮಯದಲ್ಲಿ ಪಿಂಚಿಣಿ ಬರುತ್ತದೆ. ಹೆಚ್ಚಿನ ಹೂಡಿಕೆ ಮಾಡಿದರೆ, ಅತೀ ಹೆಚ್ಚಿನ ಪಿಂಚಣಿ ನಿಮಗೆ ಸಿಗಲಿದೆ.
ಈ ಯೋಜನೆ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಲು ನೀವು ಹೂಡಿಕೆ ಮಾಡಿದ ಬ್ಯಾಂಕ್ ಅಥವಾ ಅಂಚೆ ಕಚೇರಿಯನ್ನ ಸಂಪರ್ಕ ಮಾಡುವುದು ಸೂಕ್ತ.
ಹೆಚ್ಚಿನ ಅಂದರೆ 30 ಲಕ್ಷದ ವರೆಗೆ ಹೂಡಿಕೆ ಮಾಡಿದರೆ ನೀವು ವೃದ್ದಾಪ್ಯದ ಸಮಯದಲ್ಲಿ ಸುಮಾರು 20,500 ರೂಪಾಯಿ ಪಿಂಚಣಿ ಹಣವನ್ನ ಪಡೆದುಕೊಳ್ಳಬಹುದು. ಹಿರಿಯ ನಾಗರಿಕರ ಹೂಡಿಕೆ ಹಣಕ್ಕೆ ಬಡ್ಡಿ ಮೊತ್ತವನ್ನ ಕೂಡ ಏರಿಕೆ ಮಾಡಲಾಗಿದೆ.