Xiaomi, Redmi ಬಳಕೆದಾರರಿಗೆ ಗುಡ್ ನ್ಯೂಸ್, ಅಗ್ಗದ ಫೋನ್‌ಗಳಲ್ಲಿ ಲಭ್ಯವಾಗಲಿದೆ ಜಿಯೋ 5G ನೆಟ್‌ವರ್ಕ್

Wed, 04 Jan 2023-2:28 pm,

ಫೋನ್ ನವೀಕರಣ: Xiaomi ಮತ್ತು Redmi ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ 5G ಸೇವೆಯನ್ನು ಬಳಸಲು ಸ್ಮಾರ್ಟ್‌ಫೋನ್ ಅನ್ನು ನವೀಕರಿಸುವುದು ಬಹಳ ಮುಖ್ಯ. ಒಮ್ಮೆ ನಿಮ್ಮ ಸ್ಮಾರ್ಟ್‌ಫೋನ್‌ ಅಪ್ಡೇಟ್ ಆದರೆ ನಂತರವಷ್ಟೇ ನೀವು ಜಿಯೋ 5ಜಿ ಸೇವೆಯನ್ನು ಬಳಸಲು ಸಾಧ್ಯವಾಗುತ್ತದೆ. 

ಈ ಫೋನ್‌ಗಳಲ್ಲಿ ಲಭ್ಯವಾಗಲಿದೆ 5ಜಿ ಸೇವೆ: ಜಿಯೋ 5ಜಿ ಸೇವೆಗಳು Xiaomi ಅಥವಾ Redmiಯ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಮಾತ್ರ ಲಭ್ಯವಿರುತ್ತದೆ. ಅವುಗಳ ಪಟ್ಟಿ ಇಲ್ಲಿದೆ: Redmi Note 10T 5G, Mi 11X 5G, Mi 11X Pro 5G, Redmi K50i 5G, Xiaomi 11 Lite NE 5G, Redmi Note 11T 5G, Redmi 11 Prime 5G, Mi 11 Ultra 5G, Xiaomi 12 Pro , Redmi Note 11 Pro+ 5G, Xiaomi 11i 5G ಮತ್ತು Xiaomi 11i ಹೈಪರ್‌ಚಾರ್ಜ್

ಸಾಫ್ಟ್‌ವೇರ್ ನವೀಕರಣ: Xiaomi ಅಥವಾ Redmiಯ ಬಳಕೆದಾರರು ಯಾವುದೇ ಅಡೆತಡೆ ಇಲ್ಲದೆ ಜಿಯೋ 5ಜಿ ಸೇವೆಯನ್ನು ಬಳಸಲು ಮೊದಲು ನಿಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಸಾಫ್ಟ್‌ವೇರ್ ನವೀಕರಣ ಮಾಡಬೇಕಾಗುತ್ತದೆ.

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೂ   5G ನೆಟ್‌ವರ್ಕ್ ಲಭ್ಯ:  ವಿಶೇಷವೆಂದರೆ ಅಗ್ಗದ ಬೆಲೆಯ Xiaomi ಮತ್ತು Redmi ಸ್ಮಾರ್ಟ್‌ಫೋನ್‌ಗಳಲ್ಲಿಯೂ Jio 5G ನೆಟ್‌ವರ್ಕ್ ಲಭ್ಯವಾಗಲಿದೆ.

ಲಕ್ಷಾಂತರ ಬಳಕೆದಾರರಿಗೆ ಪ್ರಯೋಜನ: Xiaomi ರಿಲಯನ್ಸ್ ಜಿಯೋ ಟ್ರೂ 5G ಯೊಂದಿಗೆ ಕೈಜೋಡಿಸಿದೆ. ಇದೀಗ ಎರಡೂ ಕಂಪನಿಗಳು ಸ್ಮಾರ್ಟ್‌ಫೋನ್ ಬಳಕೆದಾರರಿಗೆ 5G ಸೇವೆಯನ್ನು ಒದಗಿಸಲು ಮುಂದಾಗಿರುವುದು ಲಕ್ಷಾಂತರ ಬಳಕೆದಾರರಿಗೆ ಪ್ರಯೋಜನವನ್ನು ನೀಡಲಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link