Good News: ಕೋಟ್ಯಂತರ ಬಳಕೆದಾರರಿಗೆ 2 ಅಗ್ಗದ ರಿಚಾರ್ಜ್‌ ಪ್ಲ್ಯಾನ್‌ ಪರಿಚಯಿಸಿದ ನೀಡಿದ ಜಿಯೋ..!

Mon, 11 Nov 2024-9:59 pm,

ರಿಲಯನ್ಸ್ ಜಿಯೋ ನಂತರ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಸಹ ಟ್ಯಾರಿಫ್ ಹೆಚ್ಚಿಸಿಕೊಂಡಿವೆ. ಆದರೆ ಸರ್ಕಾರಿ ಸ್ವಾಮ್ಯದ BSNL ಬೆಲೆ ಹೆಚ್ಚಿಸಿಕೊಳ್ಳದೆ ತನ್ನ ನೆಟ್‌ವರ್ಕ್‌ಗೆ ಪೋರ್ಟ್‌ ಆಗುವ ಗ್ರಾಹಕರಿಗೆ ಹೊಸ ಆಫರ್ ಬಿಡುಗಡೆ ಮಾಡಿತು. ಈ ಕಾರಣದಿಂದ ಗ್ರಾಹಕರು BSNLನತ್ತ ಮುಖ ಮಾಡಲು ಆರಂಭಿಸಿದರು. ಇದೀಗ ರಿಲಯನ್ಸ್ ಜಿಯೋ ಕಡಿಮೆ ಬೆಲೆಯ 2 ಪ್ರಿಪೇಯ್ಡ್ ಪ್ಲಾನ್‌ಗಳನ್ನು ಬಿಡುಗಡೆಗೊಳಿಸಿದೆ. ಅವುಗಳ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ....

ಜಿಯೋದ ಒಂದು ತಿಂಗಳಿನ ಪ್ಲಾನ್ 173 ರೂ.ಗೆ ಲಭ್ಯವಿದೆ. ಇನ್ನುಳಿದ ಎರಡು ಖಾಸಗಿ ಕಂಪನಿಗಳು ಕನಿಷ್ಠ 180-200 ರೂ.ವರೆಗೆ ತಿಂಗಳ ವ್ಯಾಲಿಡಿಟಿಯ ಪ್ಲಾನ್ ನೀಡುತ್ತಿವೆ. ರಿಲಯನ್ಸ್ ಜಿಯೋ ನೀಡುತ್ತಿರುವ 336 ದಿನಗಳ ವ್ಯಾಲಿಡಿಟಿಯ ಪ್ಲಾನ್ ಆಕ್ಟಿವೇಟ್ ಮಾಡಿಕೊಂಡ್ರೆ ನಿಮಗೆ ತಿಂಗಳಿಗೆ 173 ರೂ. ಆಗುತ್ತದೆ. ಗ್ರಾಹಕರು 1,899 ರೂ. ರೀಚಾರ್ಜ್ ಮಾಡಿಕೊಂಡರೆ 336 ದಿನದ ಪ್ಲಾನ್ ಆಕ್ಟಿವೇಟ್ ಆಗುತ್ತದೆ.

336 ದಿನದ ವ್ಯಾಲಿಡಿಟಿ ಪ್ಲಾನ್‌ನಲ್ಲಿ ಗ್ರಾಹಕರಿಗೆ 24GB ಹೈಸ್ಪೀಡ್ ಡೇಟಾ ಯಾವುದೇ ದಿನದ ಮಿತಿ ಇಲ್ಲದೇ ಸಿಗಲಿದೆ. ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತವಾಗಿ ಕಾಲ್ ಮಾಡಬಹುದು. ಹಾಗೆ 3,600 ಉಚಿತ SMS ಆಪ್ಷನ್ ಸಹ ಗ್ರಾಹಕರಿಗೆ ನೀಡಲಾಗುತ್ತದೆ.

ಜಿಯೋದ ಮತ್ತೊಂದು ಪ್ರಿಪೇಯ್ಡ್ ಪ್ಲಾನ್ ಬೆಲೆ 189 ರೂ. ಆಗಿದೆ. ಈ ಪ್ಲಾನ್ 2GB ಡೇಟಾ, ಅನ್‌ಲಿಮಿಟೆಡ್ ಕಾಲಿಂಗ್, ಉಚಿತ 300 SMS ಬೆನೆಫಿಟ್ ಒಳಗೊಂಡಿವೆ. ಇನ್ನುಳಿದಂತೆ ಗ್ರಾಹಕರಿಗೆ ಜಿಯೋ ಕ್ಲೌಡ್, ಟಿವಿ & ಸಿನಿಮಾ ಆಪ್‌ಗಳ ಆಕ್ಸೆಸ್ ಉಚಿತವಾಗಿ ಸಿಗಲಿದೆ.

ಜಿಯೋ ಫೋನ್‌ ಬಳಕೆದಾರರಿಗೆ 23 ದಿನ ವ್ಯಾಲಿಡಿಟಿಯ 125 ರೂ.ನ ಪ್ಲಾನ್ ನೀಡಲಾಗಿದೆ. ಈ ಪ್ಲಾನ್‌ನಲ್ಲಿ ಪ್ರತಿದಿನ 0.5GB ಡೇಟಾ, ಅನ್‌ಲಿಮಿಟೆಡ್ ಕಾಲ್ ಮತ್ತು 300 ಉಚಿತ SMS ಸಿಗಲಿದೆ. 182 ರೂ.ನಲ್ಲಿ 28 ದಿನದ ವ್ಯಾಲಿಡಿಟಿ ಜೊತೆ ಪ್ರತಿದಿನ 2GB ಡೇಟಾ ಸಿಗುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link