Good News: ನೌಕರ ವರ್ಗದವರಿಗೊಂದು ಸಂತಸದ ಸುದ್ದಿ, ಈ ಯೋಜನೆ ಅಡಿ ಇನ್ಮುಂದೆ ಉಚಿತವಾಗಿ ಸಿಗಲಿದೆ 7 ಲಕ್ಷ ರೂ.
1. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಚಂದಾದಾರರಿಗೆ / ಸದಸ್ಯ ಉದ್ಯೋಗಿಗಳಿಗೆ ಜೀವ ವಿಮಾ ಸೌಲಭ್ಯವನ್ನು ಸಹ ಒದಗಿಸುತ್ತದೆ. EPFOನ ಎಲ್ಲಾ ಚಂದಾದಾರರು ನೌಕರರ ಠೇವಣಿ ಲಿಂಕ್ಡ್ ವಿಮಾ ಯೋಜನೆ 1976 (EDLI) ವ್ಯಾಪ್ತಿಗೆ ಬರುತ್ತಾರೆ. ಇದೀಗ ಈ ಯೋಜನೆಯ ವಿಮಾ ರಕ್ಷಣೆಯ ಗರಿಷ್ಠ ಮೊತ್ತವನ್ನು 7 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹಿಂದೆ ಅದು 6 ಲಕ್ಷ ರೂಪಾಯಿ ಆಗಿತ್ತು. ಇತ್ತೀಚೆಗೆ, ಸೆಪ್ಟೆಂಬರ್ 9, 2020 ರಂದು, ಕಾರ್ಮಿಕ ಸಚಿವ ಸಂತೋಷ್ ಗಂಗ್ವಾರ್ ನೇತೃತ್ವದ ಇಪಿಎಫ್‌ಒನ ಕೇಂದ್ರ ಮಂಡಳಿಯ ಟ್ರಸ್ಟಿಗಳು (CBT) ಇಡಿಎಲ್ಐ ಯೋಜನೆಯಡಿ ಖಾತರಿಪಡಿಸಿದ ಗರಿಷ್ಠ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸಲು ನಿರ್ಧರಿಸಿತ್ತು.
2. ಈ ಹೆಚ್ಚುವರಿ ಲಿಮಿಟ್ ಜಾರಿಯಾಗಿದೆ: EDLI ಯೋಜನೆಯಡಿ ಖಾತರಿಪಡಿಸಿದ ಗರಿಷ್ಠ ಮೊತ್ತವನ್ನು 7 ಲಕ್ಷ ರೂ.ಗೆ ಹೆಚ್ಚಿಸುವ ನಿರ್ಧಾರವನ್ನು ಜಾರಿಗೆ ತರಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಏಪ್ರಿಲ್ 28 ರಂದು ಅಧಿಸೂಚನೆ ಹೊರಡಿಸಿತ್ತು. ಅಧಿಸೂಚನೆಯ ದಿನಾಂಕದಿಂದ ಈ ಹೆಚ್ಚಿದ ಮಿತಿ ಇದೀಗ ಜಾರಿಗೆ ಬಂದಿದೆ.
3. EDLI ಯೋಜನೆಯ ಸದಸ್ಯ ನೌಕರರು ಮಾಡಿರುವ ನಾಮಿನಿಗಳು ನೌಕರನ ಅನಾರೋಗ್ಯ, ದುರ್ಘಟನೆ ಅಥವಾ ಸ್ವಾಭಾವಿಕ ಸಾವು ಸಂಭವಿಸಿದಾಗ ಈ 7 ಲಕ್ಷ ಮೊತ್ತವನ್ನು ಕ್ಲೇಮ್ ಮಾಡಬಹುದಾಗಿದೆ. ಪ್ರಸ್ತುತ ಈ ನಿಯಮದಲ್ಲಿಯೂ ಕೂಡ ಬದಲಾವಣೆ ತರಲಾಗಿದ್ದು, ಇದೀಗ ಈ ಕ್ಲೇಮ್ ಪೀಡಿತ ಕುಟುಂಬ ಸದಸ್ಯರಿಗೂ ಕೂಡ ಸಿಗಲಿದೆ. ಸಾವಿಗಿಂತ ಮೊದಲು 12 ತಿಂಗಳು ಒಂದು ಅಥವಾ ಹೆಚ್ಚಿನ ಸಂಸ್ಥೆಗಳಲ್ಲಿ ಸದಸ್ಯ ನೌಕರ ಸೇವೆ ಸಲ್ಲಿಸಿರಬೇಕು. ಒಂದೇ ಕಂತಿನಲ್ಲಿ ಈ ಮೊತ್ತವನ್ನು ನಾಮಿನಿ ಅಥವಾ ಅವರ ಕುಟುಂಬ ಸದಷ್ಯರಿಗೆ ಸಿಗುತ್ತದೆ. EDLI ಯೋಜನೆಯ ಅಡಿ ನೌಕರರು ಯಾವುದೇ ರೀತಿಯ ಕಂತು ಅಥವಾ ಹಣ ಪ್ರಾವತಿಸುವ ಅವಶ್ಯಕತೆ ಇಲ್ಲ. ಒಂದು ವೇಳೆ ಈ ಸ್ಕೀಮ್ ಅಡಿ ನೌಕರ ನಾಮಿನಿ ಘೋಷಿಸಿಲ್ಲ ಎಂದಾದ ಸಂದರ್ಭಗಳಲ್ಲಿ ಈ ಮೊತ್ತ ನೌಕರನ ಬಾಳಸಂಗಾತಿ, ಮದುವೆಯಾಗದ ಹೆಣ್ಣುಮಕ್ಕಳು ಹಾಗೂ ಅಪ್ರಾಪ್ತ ಮಗ/ಮಕ್ಕಳಿಗೆ ಸೇರುತ್ತದೆ.
4. ಕ್ಲೇಮ್ ಮಾಡಲಾಗುವ ಮೊತ್ತದ ಲೆಕ್ಕಾಚಾರ ಹೇಗೆ ಹಾಕಲಾಗುತ್ತದೆ?: EDLI ಯೋಜನೆಯ ಅಡಿ ಕ್ಲೇಮ್ ರಾಶಿಯ ಮೊತ್ತವನ್ನು ನೌಕರನಿಗೆ ಕಳೆದ 12 ತಿಂಗಳಿನಲ್ಲಿ ಸಿಕ್ಕ ಬೇಸಿಕ್ ಸ್ಯಾಲರಿ+DA ಆಧಾರದ ಮೇಲೆ ಲೆಕ್ಕಹಾಕಲಾಗುತ್ತಿತ್ತು. ಆದರೆ, ಹೊಸ ತಿದ್ದುಪಡಿಯ ಬಳಿಕ ಇದೀಗ ಈ ಮೊತ್ತವನ್ನು ನೌಕರ ಕೊನೆಯ ಬೇಸಿಕ್ ವೇತನ+DAನ 35 ಪಟ್ಟು ಇರಲಿದೆ. ಈ ಮೊದಲು ಇದು 30 ಪಟ್ಟಾಗಿತ್ತು. ಇದರ ಜೊತೆಗೆ ಇದೀಗ 1.75 ಲಕ್ಷ ರೂ.ಗಳ ಮ್ಯಾಕ್ಸಿಮಮ್ ಬೋನಸ್ ಕೂಡ ಸಿಗಲಿದೆ. ಈ ಮೊದಲು ಈ ಬೋನಸ್ 1.50 ಲಕ್ಷ ರೂ.ಗಳಷ್ಟಿತ್ತು. ಈ ಬೋನಸ್ ಕೊನೆಯ 12 ತಿಂಗಳ ಅವಧಿಯಲ್ಲಿ ನೌಕರ ಕಾಯ್ದಿರಿಸಿರುವ ಸರಾರಸಿ PF Balance ನ ಶೇ.50 ರಷ್ಟು ಎಂದು ಭಾವಿಸಲಾಗುತ್ತದೆ. ಉದಾಹರಣೆಗೆ, ಓರ್ವ ನೌಕರನ ಕೊನೆಯ 12 ತಿಂಗಳ ಬೇಸಿಕ್ ವೇತನ + DA 15,000 ರೂ.ಗಳಾಗಿದ್ದರೆ. ಇನ್ಸೂರೆನ್ಸ್ ಕ್ಲೇಮ್ ಮೊತ್ತ (35x15,000)+ 1,75,000= 7 ಲಕ್ಷ ರೂ.ಗಳಾಗಲಿದೆ. ಆದರೆ, ಇದು ಗರಿಷ್ಠ ಕ್ಲೇಮ್ ಆಗಿದೆ.