Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?
ಮಂಗಳೂರು ಸೌತೆಕಾಯಿಯಲ್ಲಿ ವಿಟಮಿನ್ ಎ, ಸಿ , ಉತ್ಕರ್ಷಣ ನಿರೋಧಕಗಳು,ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್,ಕೆಫೀಕ್ ಆಮ್ಲ,ಆಸ್ಕೋರ್ಬಿಕ್ ಆಮ್ಲಗಳನ್ನು ಹೊಂದಿದೆ.
ಸೌತೆಕಾಯಿಯಲ್ಲಿ ಮೆಗ್ನೀಸಿಯಮ್, ಫಾಸ್ಫರಸ್ ಮತ್ತು ಪೊಟ್ಯಾಸಿಯಮ್ ಹೇರಳವಾಗಿರುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವುದರಿಂದ ಇದರಲ್ಲಿನ ಆಸ್ಕೋರ್ಬಿಕ್ ಆಮ್ಲ, ಕೆಫೀಕ್ ಆಮ್ಲ ದೇಹದ ಚರ್ಮ ಒರಟು ಆಗುವುದನ್ನು ತಪ್ಪಿಸುತ್ತದೆ.
ನಿಶಕ್ತಿಯುಳ್ಳವರಿಗೆ ವೈಧ್ಯರೇ ಮಂಗಳೂರು ಸೌತೆಕಾಯಿಯನ್ನು ಶಿಫಾರಸು ಮಾಡುತ್ತಾರೆ. ಕಾರಣ ಇದರ ತಿರುಳು ಹೆಚ್ಚು ಪೋಷಕಾಂಶದಿಂದ ಕೂಡಿದೆ. ಆದ್ದರಿಂದ ಇದರ ಸೇವನೆಯಿಂದ ಶಕ್ತಿಯಿಂದಿರಲು ಕಾರಣವಾಗಿರಿಸುತ್ತದೆ.
ಮಂಗಳೂರು ಸೌತೆಯಲ್ಲಿ ವಿಟಮಿನ್ ಎ, ಸಿ ಹೊಂದಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ
ಈ ಸೌತೆಯಲ್ಲಿ ಹೆಚ್ಚು ನೀರಿನಾಂಶ ಇರುವುದರಿಂದ ಕೊಬ್ಬು ಕರಗಿಸುತ್ತದೆ.