Google CEO: 1,854 ಕೋಟಿ ಸಂಭಾವನೆ ಪಡೆದ ಸುಂದರ್ ಪಿಚೈ ಮನೆ ನೋಡಿದ್ರೆ ಶಾಕ್ ಆಗ್ತೀರಾ!

Sun, 23 Apr 2023-3:42 pm,

ಆಲ್ಫಾಬೆಟ್ ಮತ್ತು ಅದರ ಅಂಗಸಂಸ್ಥೆ Googleನ CEO ಸುಂದರ್ ಪಿಚೈ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ವರದಿಗಳ ಪ್ರಕಾರ 2022ರಲ್ಲಿ ಸುಂದರ್ ಪಿಚೈ $226 ಮಿಲಿಯನ್ ಅಂದರೆ ಸುಮಾರು 1,854 ಕೋಟಿ ರೂ. ಸಂಭಾವಣೆ ಪಡೆದುಕೊಂಡಿದ್ದಾರೆ. 2015ರಲ್ಲಿ ಪಿಚೈ ಗೂಗಲ್‌ನ ಸಿಇಒ ಆಗಿ ನೇಮಕಗೊಂಡರು. 2019ರಲ್ಲಿ ಅವರು ಆಲ್ಫಾಬೆಟ್ ಇಂಕ್‌ನ ಸಿಇಒ ಆದರು. ಅವರ ನಾಯಕತ್ವದಲ್ಲಿ ಗೂಗಲ್ ತನ್ನ ಉತ್ಪನ್ನಗಳು ಮತ್ತು ಸೇವೆಗಳಲ್ಲಿ ಅದ್ಭುತ ಯಶಸ್ಸು ಕಂಡಿತು. ಗೂಗಲ್ ಕೃತಕ ಬುದ್ಧಿಮತ್ತೆ ಮತ್ತು ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿಶೇಷ ಆಸಕ್ತಿ ವಹಿಸಿದೆ.

ಸುಂದರ್ ಪಿಚೈ ಅನೇಕ ಸಾಧನೆಗಳನ್ನು ಮಾಡಿದ್ದಾರೆ. ಈ ಪೈಕಿ ಅವರ ಐಷಾರಾಮಿ ಮನೆಯೂ ಸೇರಿದೆ. ಸುಂದರ್ ಪಿಚೈ ಅವರ ಮನೆ ನೋಟದಲ್ಲಿ ಸಾಕಷ್ಟು ಐಷಾರಾಮಿಯಾಗಿದೆ. ಮನೆಯನ್ನು ಕೂಡ ಅತ್ಯಂತ ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ. ಈ ಮನೆ ಕ್ಯಾಲಿಫೋರ್ನಿಯಾದ ಸಾಂಟಾ ಕ್ಲಾರಾ ಕೌಂಟಿಯ ಲಾಸ್ ಆಲ್ಟೋಸ್‌ನಲ್ಲಿರುವ ಬೆಟ್ಟದ ಮೇಲಿದೆ. ಈ ಆಸ್ತಿ 31.17 ಎಕರೆ ಭೂಮಿಯಲ್ಲಿದೆ.

ಈ ಮನೆಯ ಸೌಂದರ್ಯವು ಅದರ ಒಳಾಂಗಣಕ್ಕೆ ಸೀಮಿತವಾಗಿಲ್ಲ. ಅದ್ಭುತ ನೋಟಗಳು ಮತ್ತು ದೊಡ್ಡ ತೆರೆದ ಸ್ಥಳಗಳು ಈ ಮನೆಯ ಆಕರ್ಷಣೆಯನ್ನು ಹೆಚ್ಚಿಸಿವೆ. ಮನೆಯಲ್ಲಿ ಸ್ವೀಮಿಂಗ್ ಪೂಲ್, ಜಿಮ್, ಸ್ಪಾ, ಬಾರ್ ಮತ್ತು ಸೌರ ಫಲಕಗಳನ್ನು ಅಳವಡಿಸಲಾಗಿದೆ. ಇದರೊಂದಿಗೆ ಹಲವು ಆಧುನಿಕ ಸೌಲಭ್ಯಗಳೂ ಮನೆಯಲ್ಲಿವೆ. ಮನೆ ತುಂಬಾ ಸುಂದರವಾಗಿ ಕಾಣುತ್ತದೆ. ಈ ಮನೆ ಕಟ್ಟಲು ಕೋಟ್ಯಂತರ ರೂ.ಖರ್ಚು ಮಾಡಲಾಗಿದೆ.

ವರದಿಗಳ ಪ್ರಕಾರ ಈ ಮನೆಯ ಒಳಾಂಗಣವನ್ನು ಸುಂದರ್ ಪಿಚೈ ಅವರ ಪತ್ನಿ ಅಂಜಲಿ ವಿನ್ಯಾಸಗೊಳಿಸಿದ್ದಾರೆ. ಇದಕ್ಕಾಗಿ ಅವರು 49 ಕೋಟಿ ರೂ. ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ. ಒಳಾಂಗಣ ವಿನ್ಯಾಸವು ಸಾಕಷ್ಟು ಐಷಾರಾಮಿ ಮತ್ತು ವಿಶಿಷ್ಟವಾಗಿದೆ. ಪಿಚೈ ಈ ಮನೆಯನ್ನು 40 ಮಿಲಿಯನ್ ಡಾಲರ್‌ಗೆ ಖರೀದಿಸಿದ್ದರು. ಕೆಲವೇ ವರ್ಷಗಳಲ್ಲಿ ಅದರ ಮೌಲ್ಯ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಹೇಳಲಾಗುತ್ತದೆ.

ಕೆಲವು ವರದಿಗಳ ಪ್ರಕಾರ ಸುಂದರ್ ಪಿಚೈ ಅವರ ನಿವ್ವಳ ಮೌಲ್ಯವು 1,310 ಮಿಲಿಯನ್ ಡಾಲರ್‌ಗಳಿಗಿಂತ ಹೆಚ್ಚಾಗಿದೆಯಂತೆ. ಪಿಚೈ ವಿಶ್ವದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link