ಈ ಕಂಪ್ಯೂಟರ್‌ಗಳಲ್ಲಿ ಕಾರ್ಯನಿರ್ವಹಿಸಲ್ಲ Google Chrome, ಕಾರಣ ತಿಳಿಯಿರಿ
ನವದೆಹಲಿ: ಗೂಗಲ್ ಕ್ರೋಮ್ ಇಲ್ಲದ ಕಂಪ್ಯೂಟರ್ ಅನ್ನು ಕಲ್ಪಿಸಿಕೊಳ್ಳುವುದು ಕೂಡ ಅಸಾಧ್ಯ. ಆದರೆ Google ನ ಬ್ರೌಸರ್ ನಿಮ್ಮ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದರೆ ಏನಾಗುತ್ತೆ... ಹೌದು, 2022 ರಿಂದ ಗೂಗಲ್ ಕ್ರೋಮ್ ನಿಮ್ಮ ಕಂಪ್ಯೂಟರ್‌ನಲ್ಲಿ ತನ್ನ ಸೇವೆಯನ್ನು ನಿಲ್ಲಿಸುತ್ತದೆ ಎಂಬುದು ನಿಜ. ಕಾರಣ ಏನು ಎಂದು ತಿಳಿಯಿರಿ…
ದಿ ಸನ್ ವರದಿ ಪ್ರಕಾರ, ಗೂಗಲ್ ಕ್ರೋಮ್ ಜನವರಿ 2022ರ ನಂತರ ವಿಂಡೋಸ್ 7 ಗಾಗಿ ತನ್ನ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ.
ಲಭ್ಯವಾಗಿರುವ ಮಾಹಿತಿಯ ಪ್ರಕಾರ ಕಂಪನಿಯು ಈ ಮೊದಲು ತನ್ನ ಸೇವೆಗಳನ್ನು ಜೂನ್ 2021 ರಿಂದ ನಿಲ್ಲಿಸಲು ನಿರ್ಧರಿಸಿತ್ತು. ಕರೋನಾವೈರಸ್ ಸಾಂಕ್ರಾಮಿಕದಿಂದಾಗಿ ಗೂಗಲ್ ಕ್ರೋಮ್‌ನ ಸೇವೆಗಳನ್ನು ಜನವರಿ, 2022 ರವರೆಗೆ ಮುಂದುವರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ನೆಟ್‌ಮಾರ್ಕೆಟ್‌ಶೇರ್‌ನ ವರದಿಯ ಪ್ರಕಾರ ವಿಶ್ವಾದ್ಯಂತ ಬಳಸಲಾಗುವ 20.93 ರಷ್ಟು ಕಂಪ್ಯೂಟರ್‌ಗಳು ಇನ್ನೂ ವಿಂಡೋಸ್ 7 ಅನ್ನು ಬಳಸುತ್ತವೆ. ಗೂಗಲ್‌ನ ಈ ಹಂತವು ಕೋಟಿ ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.
ವರದಿಯ ಪ್ರಕಾರ ಈಗ ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಮಾತ್ರ ಗೂಗಲ್ ಕ್ರೋಮ್ ಕಾರ್ಯನಿರ್ವಹಿಸುತ್ತದೆ ಎಂದು ಗೂಗಲ್ ಸ್ಪಷ್ಟಪಡಿಸಿದೆ. ಬ್ರೌಸರ್ ಬಳಸಲು ಬಳಕೆದಾರರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಅಪ್‌ಗ್ರೇಡ್ ಮಾಡಬೇಕು.