Internet Connection ಇಲ್ಲದೆಯೂ ನಡೆದು ಹೋಗುತ್ತದೆ ಈ ಕೆಲಸಗಳು
Wifi Aware ಪ್ರೋಟೋಕಾಲ್ ಬಳಸಿ ಇಂಟರ್ನೆಟ್ ಸಂಪರ್ಕವಿಲ್ಲದೆ ಯಾವುದೇ ರೆಸ್ಟೋರೆಂಟ್‌ನಲ್ಲಿ ಸೀಟ್ ಬುಕಿಂಗ್ ಮತ್ತು ಚಲನಚಿತ್ರ ಟಿಕೆಟ್‌ಗಳನ್ನು ಕಾಯ್ದಿರಿಸಬಹುದು ಎಂದು ಗೂಗಲ್ ಹೇಳಿದೆ. ದೊಡ್ಡ ಪ್ರಮಾಣದ ಡೇಟಾವನ್ನು ಶೇರ್ ಮಾಡಿಕೊಳ್ಳಲು ಕೂಡಾ ಈ ಅಪ್ಲಿಕೇಶನ್ ಅನ್ನು ಬಳಸಬಹುದು.
ಗೂಗಲ್ ಈ ಅಪ್ಲಿಕೇಶನ್ ಅನ್ನು WifiNanScan ಅನ್ನೋ ಹೆಸರಿನಲ್ಲಿ ಪ್ಲೇ ಸ್ಟೋರ್ ನಲ್ಲಿ ಲಾಂಚ್ ಮಾಡಿದೆ. ಇದನ್ನು ಡೆವಲಪರ್‌ಗಳು, ವೆಂಡರ್ಸ್ ಮತ್ತು ವಿಶ್ವವಿದ್ಯಾಲಯಗಳಿಗೆ ಸಂಶೋಧನೆ, ಡೆಮೋನ್ ಸ್ಟ್ರೆ ಶನ್ ಮತ್ತು ಟೆಸ್ಟಿಂಗ್ ಟೂಲ್ ತರಹ ಬಳಸಲು ಸಹಕಾರಿಯಾಗುವತೆ ವಿನ್ಯಾಸಗೊಳಿಸಲಾಗಿದೆ.
ಈ ಅಪ್ಲಿಕೇಶನ್‌ನೊಂದಿಗೆ ಎರಡು ಸ್ಮಾರ್ಟ್‌ಫೋನ್‌ಗಳ ನಡುವಿನ ನಿಖರವಾದ ಅಂತರವನ್ನು ಸಹ ಅಳೆಯಬಹುದು. ಎರಡೂ ಫೋನ್‌ಗಳು 1 ರಿಂದ 15 ಮೀಟರ್ ವ್ಯಾಪ್ತಿಯಲ್ಲಿರುವಾಗ ಮಾತ್ರ ಇದು ಸಾಧ್ಯ. ಇದು ಮಾತ್ರವಲ್ಲ, ಈ ಅಪ್ಲಿಕೇಶನ್‌ನ ಸಹಾಯದಿಂದ, ನೆಟ್ವರ್ಕ್ ಇಲ್ಲದೆ ಡಾಕ್ಯುಮೆಂಟ್‌ಗಳನ್ನು ಪ್ರಿಂಟರ್‌ಗೆ ಕಳುಹಿಸಬಹುದು.
ಈ ಅಪ್ಲಿಕೇಶನ್ ಆಂಡ್ರಾಯ್ಡ್ 8.0 ಮತ್ತು ಅದಕ್ಕಿಂತ ಹೆಚ್ಚಿನ OS ಆವೃತ್ತಿಯ ಎಲ್ಲಾ ಡಿವೈಸ್ ನಲ್ಲಿ ಕಾರ್ಯನಿರ್ವಹಿಸುತ್ತದೆ. ಮ ಯಾವುದೇ ರೀತಿಯ ಸಂಪರ್ಕವಿಲ್ಲದಿದ್ದರು ಸರ್ಚ್ ಮಾಡಲು ಮತ್ತು ನೇರ ಸಂಪರ್ಕ ಕಲ್ಪಿಸಲು ಅವಕಾಶ ನೀಡುತ್ತದೆ.
ಗೂಗಲ್‌ನ ಪ್ರಕಾರ, ಈ ಅಪ್ಲಿಕೇಶನ್ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಈ ಅಪ್ಲಿಕೇಶನ್‌ನ ಸಹಾಯದಿಂದ, ಬಳಕೆದಾರರು ಬ್ಲೂಟೂತ್ ಮತ್ತು ವೈಫೈ ಸಂಪರ್ಕವಿಲ್ಲದೆ ಸಂದೇಶಗಳು ಮತ್ತು ಡೇಟಾವನ್ನು ಶೇರ್ ಮಾಡಿಕೊಳ್ಳುವುದು ಸಾಧ್ಯವಾಗುತ್ತದೆ.