Google Maps Tips: ಗೂಗಲ್ ಮ್ಯಾಪ್ಸ್ ನಲ್ಲಿ ನಿಮ್ಮ ಮನೆ ಲೋಕೇಶನ್ ನೋಂದಾಯಿಸಬೇಕೆ? ಪ್ರಕ್ರಿಯೆ ತುಂಬಾ ಸುಲಭವಾಗಿದೆ
ಇದಕ್ಕಾಗಿ ಮೊದಲು ನೀವು ನಿಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ ಗೂಗಲ್ ಮ್ಯಾಪ್ಸ್ ಆಪ್ ತೆರೆಯಿರಿ. ನೀವು ಈಗಾಗಲೇ ಲಾಗ್ ಇನ್ ಆಗಿಲ್ಲದಿದ್ದರೆ, ನಿಮ್ಮ ಗೂಗಲ್ ಖಾತೆಯೊಂದಿಗೆ ಲಾಗ್ ಇನ್ ಮಾಡಿ.
ಈಗ "ಕಾಂಟ್ರಿಬ್ಯೂಟ್" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಪರದೆಯ ಕೆಳಗಿನ ಬಲಭಾಗದಲ್ಲಿರುವ "ಕಾಂಟ್ರಿಬ್ಯೂಟ್" ಆಯ್ಕೆಯನ್ನು ಕ್ಲಿಕ್ಕಿಸಿದ ನಂತರ, ನಿಮ್ಮ ಮುಂದೆ ಒಂದು ಮೆನು ತೆರೆದುಕೊಳ್ಳುತ್ತದೆ, ಅದರಲ್ಲಿ ನೀವು "ಆಡ್ ಲೋಕೇಶನ್" ಆಯ್ಕೆಯನ್ನು ಆರಿಸಬೇಕಾಗುತ್ತದೆ.
ಈಗ ನೀವು "ಆಡ್ ಮಿಸ್ಸಿಂಗ್ ಪ್ಲೇಸ್" ಆಯ್ಕೆ ಮಾಡಬೇಕು. "ಪ್ಲೇಸ್ ಆಡಿಶನ್" ಆಯ್ಕೆಯನ್ನು ಆರಿಸುವುದರಿಂದ ನಿಮ್ಮ ಮುಂದೆ ಮತ್ತೊಂದು ಪುಟ ತೆರೆದುಕೊಳ್ಳುತ್ತದೆ. ಇಲ್ಲಿ "ಅಲ್ಲಿ ಆಡ್ ಮಿಸ್ಸಿಂಗ್ ಪ್ಲೇಸ್" ಬಟನ್ ಮೇಲೆ ಕ್ಲಿಕ್ ಮಾಡಿ.
ಮನೆಯ ಹೆಸರು ಮತ್ತು ವಿಳಾಸವನ್ನು ನಮೂದಿಸಿ. "ಹೆಸರು" ಜಾಗದಲ್ಲಿ ನಿಮ್ಮ ಮನೆಯ ಹೆಸರನ್ನು ನಮೂದಿಸಿ. "ವಿಳಾಸ" ಜಾಗದಲ್ಲಿ ನಿಮ್ಮ ಪೂರ್ಣ ವಿಳಾಸವನ್ನು ನೀವು ನಮೂದಿಸಬೇಕು. ಇದು ಪಿನ್ ಕೋಡ್ ಅನ್ನು ಸಹ ಒಳಗೊಂಡಿದೆ.
ನಿಮ್ಮ ಮನೆಯ ಸ್ಥಳವನ್ನು ಆಯ್ಕೆಮಾಡಿ, ವಾಸ್ತವದಲ್ಲಿ ನೀವು ಮ್ಯಾಪ್ಸ್ ನಲ್ಲಿ ನಿಮ್ಮ ಮನೆಯ ನಿಖರವಾದ ಸ್ಥಳವನ್ನು ಆಯ್ಕೆ ಮಾಡಬೇಕು. ಝೂಮ್ ಇನ್/ಔಟ್ ಮತ್ತು ಪಿನ್ ಅನ್ನು ಡ್ರ್ಯಾಗ್ ಮಾಡುವ ಮೂಲಕ ನೀವು ಸ್ಥಳವನ್ನು ಸರಿಹೊಂದಿಸಬಹುದು. ಈಗ ನೀವು "ಪ್ರೋಸೀಡ್ " ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ನೀವು ಅಪಾರ್ಟ್ಮೆಂಟ್, ಮನೆ ಇತ್ಯಾದಿಗಳನ್ನು ಒಳಗೊಂಡಿರುವ ಹೆಚ್ಚುವರಿ ಮಾಹಿತಿಯನ್ನು ನಮೂದಿಸಬೇಕು. "ಫೋನ್ ನಂಬರ್"ಜಾಗದಲ್ಲಿ ನೀವು ಮನೆಯ ಫೋನ್ ಸಂಖ್ಯೆಯನ್ನು ಸಹ ನಮೂದಿಸಬಹುದು. ಇದಾದ ಬಳಿಕ ನೀವು "ಸಬ್ಮಿಟ್" ಬಟನ್ ಕ್ಲಿಕ್ ಮಾಡುವ ಮೂಲಕ ಡೇಟಾವನ್ನು ಸಲ್ಲಿಸಬಹುದು.