Google Pay ಬಳಕೆದಾರರಿಗೆ ಶಾಕಿಂಗ್ ನ್ಯೂಸ್
ನವದೆಹಲಿ: ನೀವು ವ್ಯವಹಾರಗಳಿಗಾಗಿ ಯುಪಿಐ ಮೋಡ್‌ನಲ್ಲಿ ಗೂಗಲ್ ಪೇ ಬಳಸುತ್ತಿದ್ದರೆ ನಿಮಗಾಗಿ ಶಾಕಿಂಗ್ ಸುದ್ದಿ ಇದೆ. ಹೌದು, Google Pay ನಿಂದ ಹಣವನ್ನು ವರ್ಗಾಯಿಸುವುದು ಇನ್ನು ಮುಂದೆ ಉಚಿತವಾಗಿರುವುದಿಲ್ಲ. ಬ್ಯಾಂಕ್‌ನಿಂದ ಬ್ಯಾಂಕ್ ವರ್ಗಾವಣೆಗೆ ಈಗ ಶುಲ್ಕ ವಿಧಿಸಲಾಗುವುದು ಎಂದು ಕಂಪನಿ ತಿಳಿಸಿದೆ. ಇದಕ್ಕಾಗಿ ಕಂಪನಿಯು ಸಿದ್ಧತೆಗಳನ್ನು ಪ್ರಾರಂಭಿಸಿದೆ.
ಟೆಕ್ ಸೈಟ್ ಬಿಸಿನೆಸ್ ಇನ್ಸೈಡರ್ ಪ್ರಕಾರ, ಗೂಗಲ್ ಪೇ ಜನವರಿ 2021 ರಿಂದ ಪೀರ್ ಟು ಪೀರ್ ಪಾವತಿ ಸೌಲಭ್ಯವನ್ನು (Peer to Peer Payment Facility) ನಿಲ್ಲಿಸಲಿದೆ. ಬದಲಾಗಿ ಕಂಪನಿಯು ತ್ವರಿತ ಹಣ ವರ್ಗಾವಣೆ ಪಾವತಿ ವ್ಯವಸ್ಥೆಯನ್ನು ಸೇರಿಸುತ್ತದೆ. ಇದರ ನಂತರ ಬಳಕೆದಾರರು ಹಣವನ್ನು ವರ್ಗಾಯಿಸಲು ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಇದಕ್ಕಾಗಿ ಬಳಕೆದಾರರಿಂದ ಎಷ್ಟು ಶುಲ್ಕ ವಿಧಿಸಲಾಗುವುದು ಎಂಬುದರ ಬಗ್ಗೆ ಕಂಪನಿ ಇನ್ನೂ ನಿಖರವಾದ ಮಾಹಿತಿ ನೀಡಿಲ್ಲ.
ಪ್ರಸ್ತುತ ಗೂಗಲ್ ಪೇ ಬಳಕೆದಾರರಿಗೆ ಮೊಬೈಲ್ ಅಥವಾ ವೆಬ್ ಪುಟದ ಮೂಲಕ ಹಣವನ್ನು ವರ್ಗಾಯಿಸಲು ಅನುಮತಿಸುತ್ತದೆ. ಇತ್ತೀಚೆಗೆ ಕಂಪನಿಯು ತನ್ನ ವೆಬ್ ಅಪ್ಲಿಕೇಶನ್ ಅನ್ನು ಮುಚ್ಚುವುದಾಗಿ ಘೋಷಿಸಿದೆ. ಕಂಪನಿಯ ಪ್ರಕಾರ ಈಗ ಜನರು ಹಣವನ್ನು ಕಳುಹಿಸಲು ಅಥವಾ ಸ್ವೀಕರಿಸಲು pay.google.com ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಹಣ ವರ್ಗಾವಣೆಗೆ Google Pay ಅಪ್ಲಿಕೇಶನ್ ಅನ್ನು ಮಾತ್ರ ಬಳಸಬಹುದು.
ಅಲ್ಲದೆ ಗೂಗಲ್ ಪೇ ಬೆಂಬಲ ಪುಟವನ್ನು ಮುಂದಿನ ವರ್ಷದ ಜನವರಿಯಿಂದ ಮುಚ್ಚಲಾಗುವುದು ಎಂದು ಗೂಗಲ್ ಸ್ಪಷ್ಟಪಡಿಸಿದೆ. ನಿಮ್ಮ ಬ್ಯಾಂಕ್ ಖಾತೆಗೆ ನೀವು ಹಣವನ್ನು ಕಳುಹಿಸಿದಾಗ ಟ್ರಾನ್ಸ್ಫರ್ ಮಾಡಲಾದ ಮೊತ್ತ ಸ್ವೀಕೃತ ಗ್ರಾಹಕರ ಖಾತೆ ತಲುಪಲು ಒಂದರಿಂದ ಮೂರು ದಿನಗಳು ಬೇಕಾಗುತ್ತದೆ. ಅದೇ ಸಮಯದಲ್ಲಿ ಡೆಬಿಟ್ ಕಾರ್ಡ್ ಮೂಲಕ ಹಣವನ್ನು ತಕ್ಷಣ ವರ್ಗಾಯಿಸಲಾಗುತ್ತದೆ ಎನ್ನಲಾಗಿದೆ.
ನೀವು ಡೆಬಿಟ್ ಕಾರ್ಡ್‌ನೊಂದಿಗೆ ಹಣವನ್ನು ವರ್ಗಾಯಿಸಿದಾಗ 1.5 % ಅಥವಾ 0.31 % ಶುಲ್ಕ ವಿಧಿಸಲಾಗುವುದು ಎಂದು ಗೂಗಲ್ ಬೆಂಬಲ ಪುಟದಿಂದ ಘೋಷಿಸಿದೆ. ಅಂತಹ ಪರಿಸ್ಥಿತಿಯಲ್ಲಿ ತ್ವರಿತ ಹಣ ವರ್ಗಾವಣೆಯಲ್ಲಿ ಗೂಗಲ್‌ನಿಂದ ಶುಲ್ಕವನ್ನು ಸಹ ಸಂಗ್ರಹಿಸಬಹುದು. ಕಳೆದ ವಾರ ಗೂಗಲ್‌ನಿಂದ ಹಲವು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲಾಗಿದೆ. ಅಮೇರಿಕನ್ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗಾಗಿ ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊರತಂದಿದೆ. ಇದಲ್ಲದೆ ಕಂಪನಿಯು ಗೂಗಲ್ ಪೇ ಲೋಗೋವನ್ನೂ ಬದಲಾಯಿಸಿದೆ.