Government Jobs: 10 ನೇ ತರಗತಿಯ ನಂತರ ಸರ್ಕಾರಿ ನೌಕರಿ ಪಡೆಯಬೇಕೆ? ಇಲ್ಲಿ ಅರ್ಜಿ ಸಲ್ಲಿಸಿ !

Thu, 09 May 2024-4:08 pm,

10th pass govt jobs in karnataka: 10ನೇ ನಂತರ ನೀವು ಕೆಲವು ಇಲಾಖೆಗಳಲ್ಲಿ ಸರ್ಕಾರಿ ಕೆಲಸ ಪಡೆಯಬಹುದು. SSLC ಬಳಿಕ ಸರ್ಕಾರಿ ಉದ್ಯೋಗ ಪಡೆಯಲು ಅರ್ಜಿ ಸಲ್ಲಿಸುವ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ...

Staff Selection Commission: ಸಂಯೋಜಿತ ಮೆಟ್ರಿಕ್ಯುಲೇಷನ್ / ಹೈಯರ್ ಸೆಕೆಂಡರಿ ಲೆವೆಲ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಸ್ಟಾಫ್‌ ಸೆಲೆಕ್ಷನ್‌ ಕಮಿಷನ್‌ ನಲ್ಲಿ 10 ನೇ ಪಾಸ್ ಅಭ್ಯರ್ಥಿಗಳನ್ನು ನೇಮಿಸಲಾಗುತ್ತದೆ. ವಯಸ್ಸಿನ ಮಿತಿ 18 ರಿಂದ 25 ವರ್ಷ. ಇದು ಕೇಂದ್ರ ಸರ್ಕಾರದ ನೌಕರಿ. ಇದಕ್ಕಾಗಿ ssc.nic.in ನಲ್ಲಿ ಅಪ್‌ಡೇಟ್‌ ಗಮನಿಸುತ್ತಿರಬೇಕು. ಗಾರ್ಡನರ್, ಪ್ಯೂನ್, ವಾಚ್‌ಮ್ಯಾನ್, ಆಫೀಸ್ ಅಟೆಂಡೆಂಟ್, ಡಾಟಾ ಎಂಟ್ರಿ ಆಪರೇಟರ್, ಡ್ರೈವರ್, ರಿಸೆಪ್ಷನಿಸ್ಟ್ ಇತ್ಯಾದಿ ಕೆಲಸ ಪಡೆಯಬಹುದು.

Defense force Jobs: ಹತ್ತನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಸೇನೆ, ನೌಕಾಪಡೆ, ವಾಯುಪಡೆ ಮತ್ತು ಏಳು ಸಂಸದೀಯ ಪಡೆಗಳಲ್ಲಿ ಪ್ರವೇಶ ಮಟ್ಟದ ಉದ್ಯೋಗಗಳನ್ನು ಪಡೆಯುತ್ತಾರೆ. ಕೆಲವು ಪೋಸ್ಟ್‌ಗಳಿಗೆ ITI ಡಿಪ್ಲೊಮಾ ಮತ್ತು ಅಪ್ರೆಂಟಿಸ್‌ಶಿಪ್ ಅನ್ನು ಕೇಳಬಹುದು. ನಿಮಗೆ ಆಸಕ್ತಿ ಇದ್ದರೆ ನೀವು ನೇಮಕಾತಿಯಲ್ಲಿ ಭಾಗವಹಿಸಬಹುದು. ಇಲ್ಲಿ ಕುಕ್, ಗಾರ್ಡನರ್, ಮೆಕ್ಯಾನಿಕ್, ಇಂಜಿನ್ ಫಿಟ್ಟರ್, ಐಟಿಐ ವರ್ಕರ್, ಪ್ಯೂನ್, ಕಾನ್‌ಸ್ಟೆಬಲ್ ಇತ್ಯಾದಿ ಹುದ್ದೆಗಳಲ್ಲಿ ಉದ್ಯೋಗ ಪಡೆಯಬಹುದು. 

Railway Department Jobs : 10ನೇ ತರಗತಿ ಉತ್ತೀರ್ಣರಾದವರಿಗೆ ರೈಲ್ವೆಯಲ್ಲಿ ಉದ್ಯೋಗ ಪಡೆಯಲು ಉತ್ತಮ ಅವಕಾಶವಿದೆ. ಇಲ್ಲಿ 10ನೇ ತರಗತಿ ಉತ್ತೀರ್ಣರಾದ ಅಭ್ಯರ್ಥಿಗಳು ಗ್ರೂಪ್ ಸಿ ಮತ್ತು ಡಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ವಯಸ್ಸು 18 ರಿಂದ 33 ರ ನಡುವೆ ಇರಬೇಕು. ರೈಲ್ವೆ ಇಲಾಖೆಗೆ ಪ್ರತಿ ವರ್ಷ ಲಕ್ಷಾಂತರ ಉದ್ಯೋಗಿಗಳ ಅಗತ್ಯವಿದೆ. ಫಿಟ್ಟರ್, ಹೆಲ್ಪರ್, ಸ್ವಿಚ್‌ಮ್ಯಾನ್, ಕಾನ್‌ಸ್ಟೆಬಲ್, ಅಪ್ರೆಂಟಿಸ್, ವೆಲ್ಡರ್ ಮುಂತಾದ ಹಲವು ಹುದ್ದೆಗಳಲ್ಲಿ ಕೆಲಸ ಮಾಡಬಹುದು.

Bank Jobs : ಇದಲ್ಲದೆ ಬ್ಯಾಂಕಿಂಗ್, ಪಿಎಸ್‌ಯು, ತೈಲ ಮತ್ತು ಅನಿಲ, ಇಂಧನ, ವಿದ್ಯುತ್ ಇಲಾಖೆಗಳಲ್ಲಿಯೂ 10 ನೇ ತರಗತಿಯಲ್ಲಿ ಉತ್ತೀರ್ಣರಾದವರನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ. ದೂರ ಶಿಕ್ಷಣ ಅಥವಾ ಮುಕ್ತ ವಿಶ್ವವಿದ್ಯಾನಿಲಯಗಳಿಂದ ವ್ಯಾಸಂಗ ಮುಗಿಸಿದ ಅಭ್ಯರ್ಥಿಗಳಿಗೂ ಇಲ್ಲಿ ಅವಕಾಶವಿರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link