ಮಗಳ ವಿವಾಹಕ್ಕೆ ಸರ್ಕಾರ ನೀಡುತ್ತೇ 51,000 ರೂ.ಗಳು, ಇಲ್ಲಿದೆ ಸಂಪೂರ್ಣ ವಿವರ!

Wed, 22 Mar 2023-4:39 pm,

1. ಹುಡುಗಿಯ ವಯಸ್ಸು 18 ವರ್ಷ ಅಥವಾ ಅದಕ್ಕಿಂತ ಹೆಚ್ಚಿರುವಾಗ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಅಲ್ಲದೆ, ಮದುವೆಯಾಗಲಿರುವ ಹುಡುಗನ ವಯಸ್ಸು 21 ವರ್ಷ ಅಥವಾ ಅದಕ್ಕಿಂತ ಹೆಚ್ಚು ಇರಬೇಕು. ಒಂದು ಕುಟುಂಬದ ಇಬ್ಬರು ಹೆಣ್ಣು ಮಕ್ಕಳು ಯೋಜನೆಯ ಲಾಭ ಪಡೆಯಬಹುದು. ಎಲ್ಲಾ ವರ್ಗದ ಕುಟುಂಬಗಳ ಹೆಣ್ಣು ಮಕ್ಕಳನ್ನು ಯೋಜನೆಯಡಿ ಸೇರಿಸಲಾಗಿದೆ.  

2. ಯೋಜನೆಯ ಮೂರು ಷರತ್ತುಗಳಿವೆ. ಮೊದಲನೆಯದು ಅರ್ಜಿದಾರರು ಉತ್ತರ ಪ್ರದೇಶದ ಖಾಯಂ ನಿವಾಸಿಯಾಗಿರಬೇಕು. ಎರಡನೇದಾಗಿ  ವಾರ್ಷಿಕ ಆದಾಯವು ಗ್ರಾಮೀಣ ಪ್ರದೇಶದವರಿಗೆ 46800 ಮತ್ತು ನಗರ ಪ್ರದೇಶದವರಿಗೆ 56400 ರೂ.ಗಿಂತ ಹೆಚ್ಚಿರಬಾರದು. ಮೂರನೇದಾಗಿ ಷರತ್ತು ಅರ್ಜಿದಾರರು ಬಡತನ ರೇಖೆಗಿಂತ ಕೆಳಗಿರುವ ವ್ಯಕ್ತಿಯಾಗಿರಬೇಕು.  

3. ಅರ್ಜಿದಾರರು ಯುಪಿಯ ಆಧಾರ್ ಕಾರ್ಡ್ ಹೊಂದಿರುವುದು ಅವಶ್ಯಕ. ಅರ್ಜಿದಾರರು ತಮ್ಮ ಆದಾಯ ಪ್ರಮಾಣಪತ್ರವನ್ನು ತೋರಿಸಬೇಕು, ಜೊತೆಗೆ ಮದುವೆಯಾಗುವ ದಂಪತಿಗಳ ವಯಸ್ಸಿನ ಪ್ರಮಾಣಪತ್ರವನ್ನು ತೋರಿಸಬೇಕು.  

4. ಅರ್ಜಿದಾರರು ಯಾವುದೇ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆಯನ್ನು ಹೊಂದಿರಬೇಕು. ಇದರಿಂದ ಅನುದಾನದ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತದೆ. ಈ ಖಾತೆಯು ಸರ್ಕಾರಿ ಬ್ಯಾಂಕ್‌ನಲ್ಲಿ ಮಾತ್ರ ಇರಬೇಕು.  

5, ಅರ್ಜಿದಾರರು OBC / SC / ST ವರ್ಗದವರಾಗಿದ್ದರೆ, ಅವರು ಜಾತಿ ಪ್ರಮಾಣಪತ್ರವನ್ನು ಹೊಂದಿರಬೇಕು. ಇತರೆ ವರ್ಗಗಳಿಗೆ ಜಾತಿ ಪ್ರಮಾಣ ಪತ್ರ ಅಗತ್ಯವಿಲ್ಲ.  

6. ಅರ್ಜಿದಾರನು ಮಗಳ ಮದುವೆ ಇದ್ದಾಗ ಮಾತ್ರ ಸರ್ಕಾರ ನೀಡುವ ಈ ಹಣವನ್ನು ವಿತ್ ಡ್ರಾ ಮಾಡಬಹುದು. ಮದುವೆಗೆ 90 ದಿನಗಳ ಮೊದಲು ಅಥವಾ 90 ದಿನಗಳ ನಂತರ ಅರ್ಜಿ ಸಲ್ಲಿಸಬಹುದು.  

7. ಯೋಜನೆಯ ಲಾಭ ಪಡೆಯಲು, ಯುಪಿ ಸರ್ಕಾರದ ವೆಬ್‌ಸೈಟ್ shadianudan.upsdc.gov.in ನಲ್ಲಿ ನೋಂದಣಿಯನ್ನು ಮಾಡಬೇಕಾಗುತ್ತದೆ. ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಸ ನೋಂದಣಿಯ ಆಯ್ಕೆಯ ಅಡಿಯಲ್ಲಿ, ನೀವು ಜಾತಿಗೆ ಅನುಗುಣವಾಗಿ ಕೆಳಗೆ ನೀಡಲಾದ ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕಾಗುತ್ತದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link