SSY: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸರ್ಕಾರ ಮಾಡಿರುವ 5 ಬದಲಾವಣೆಗಳು ನಿಮಗೆ ಗೊತ್ತಿರಲಿ

Sat, 31 Dec 2022-1:18 pm,

1. ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ ಪಿಪಿಎಫ್ ಹಾಗೂ ಸುಕನ್ಯಾ ಸಮೃದ್ಧಿ ಯೋಜನೆಗಳ ಮೇಲೆ ಈ ಮೊದಲು ನೀಡಲಾಗುತ್ತಿದ್ದ ವಾರ್ಷಿಕ  ಶೇ.7.1 ಮತ್ತು ಶೇ 7.6ರಷ್ಟು ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಆದರೆ ವರ್ಷದ ಕೊನೆಯ ದಿನಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸರ್ಕಾರ 5 ಬದಲಾವಣೆಗಳನ್ನು ಮಾಡಿದೆ ಅವು ಯಾವುವು ತಿಳಿದುಕೊಳ್ಳೋಣ ಬನ್ನಿ,  

2. ಸುಕನ್ಯಾ ಸಮೃದ್ಧಿ ಯೋಜನೆಯ ಹೊಸ ನಿಯಮಗಳ ಅಡಿಯಲ್ಲಿ, ಖಾತೆಗೆ ವರ್ಗಾಯಿಸಲಾಗುವ ಮತ್ತು ತಪ್ಪಾದ ಬಡ್ಡಿಯನ್ನು ಹಿಂಪಡೆಯುವ ನಿಬಂಧನೆಯನ್ನು ತೆಗೆದುಹಾಕಲಾಗಿದೆ. ಹೆಚ್ಚುವರಿಯಾಗಿ, ಖಾತೆಯ ಮೇಲಿನ ವಾರ್ಷಿಕ ಬಡ್ಡಿಯನ್ನು ಪ್ರತಿ ಇನ್ಮುಂದೆ ಹಣಕಾಸು ವರ್ಷದ ಕೊನೆಯಲ್ಲಿ ವರ್ಗಾಯಿಸಲಾಗುವುದು ಎನ್ನಲಾಗಿದೆ. ಮೊದಲು ಇದನ್ನು ತ್ರೈಮಾಸಿಕ ಆಧಾರದ ಮೇಲೆ ಖಾತೆಗೆ ವರ್ಗಾಯಿಸಲಾಗುತ್ತಿತ್ತು.  

3. ಈ ಮೊದಲು ಇದ್ದ ನಿಯಮಗಳ ಪ್ರಕಾರ ಮಗಳಿಗೆ 10 ವರ್ಷ ತುಂಬಿದ ಬಳಿಕ ಆಕೆಗೆ ತನ್ನ ಖಾತೆಯನ್ನು ನಿರ್ವಹಿಸುವ ಅವಕಾಶ ಸಿಗುತ್ತಿತ್ತು. ಆದರೆ, ಹೊಸ ನಿಯಮದ ಪ್ರಕಾರ ಇದೀಗ ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮುನ್ನ ಖಾತೆ ನಿರ್ವಹಿಸಲು ಅನುಮತಿಯನ್ನು ನೀಡಲಾಗುವುದಿಲ್ಲ ಎನ್ನಲಾಗಿದೆ. 18 ವರ್ಷದವರೆಗೆ ಆಕೆಯ ಪೋಷಕರು ಮಾತ್ರ ಖಾತೆಯನ್ನು ನಿರ್ವಹಿಸಬೇಕು  ಎನ್ನಲಾಗಿದೆ.  

4. ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯಲ್ಲಿ ವಾರ್ಷಿಕವಾಗಿ 250 ಮತ್ತು ಗರಿಷ್ಠ 1.5 ಲಕ್ಷ ರೂ.ಜಮಾ ಮಾಡಲು ಅವಕಾಶವಿದೆ. ಆದರೆ ಒಂದು ವೇಳೆ ಕನಿಷ್ಠ ಮೊತ್ತ ಠೇವಣಿ ಮಾಡದೆ ಹೋದ ಸಂದರ್ಭದಲ್ಲಿ ಖಾತೆ ಡೀಫಾಲ್ಟ್ ಆಗುತ್ತದೆ. ಹೊಸ ನಿಯಮದ ಪ್ರಕಾರ ಒಂದು ವೇಳೆ ಖಾತೆಯನ್ನು ಮರುಸಕ್ರೀಯಗೊಳಿಸದಿದ್ದರೆ, ಯೋಜನೆಯ ಅವಧಿ ಮುಕ್ತಾಯದವರೆಗೆ ಖಾತೆಯಲ್ಲಿ ಠೇವಣಿ ಮಾಡಲಾದ ಮೊತ್ತಕ್ಕೆ ಬಡ್ಡಿ ಪಾವತಿ ಮುಂದುವರೆಯಲಿದೆ. ಆದರೆ, ಈ ಹಿಂದೆ ಈ ಪ್ರಾವಧಾನ ಇರಲಿಲ್ಲ.  

5. ಈ ಮೊದಲು ತೆರಿಗೆ ವಿನಾಯ್ತಿಯ ಪ್ರಯೋಜನ 80ಸಿ ಅಡಿಯಲ್ಲಿ ಇಬ್ಬರು ಹೆಣ್ಣುಮಕ್ಕಳಿಗೆ ಮಾತ್ರ ಲಭ್ಯವಿತ್ತು. ಆದರೆ, ಇದೀಗ ಮೂರನೇ ಮಗಳು ಹುಟ್ಟಿದ ಮೇಲೂ ಕೂಡ ಸುಕನ್ಯಾ ಸಮೃದ್ಧಿ ಯೋಜನೆಯ ಖಾತೆಯನ್ನು ತೆರೆಯಬಹುದು. ಅಂದರೆ, ಮೊದಲ ಮಗಳು ಹುಟ್ಟಿದ ಬಳಿಕ ಎರಡನೇ ಚಾನ್ಸ್ ನಲ್ಲಿ ಅವಳಿ ಹೆಣ್ಣು ಮಕ್ಕಳು ಜನಿಸಿದರೆ, ಅವಳಿ ಹನ್ನುಮಕ್ಕಳ ಖಾತೆಯನ್ನು ತೆರೆಯುವ ಅವಕಾಶ ಕಲ್ಪಿಸಲಾಗಿದೆ. ಈ ರೀತಿಯಾಗಿ ಓರ್ವ ವ್ಯಕ್ತಿ ತನ್ನ ಮೂವರು ಹೆಣ್ಣು ಮಕ್ಕಳ ಹೆಸರಿನಲ್ಲಿ ಖಾತೆ ತೆರೆಯಬಹುದು.  

6. ಈ ಮೊದಲು ಮಗಳ ಮರಣದ ನಂತರ ಅಥವಾ ಮಗಳ ಮನೆ ವಿಳಾಸ ಬದಲಾದ ಸಂದರ್ಭದಲ್ಲಿ ಖಾತೆಯನ್ನು ಮೊಟಕುಗೊಳಿಸಲು ಅವಕಾಶವಿತ್ತು. ಆದರೆ, ಇದೀಗ ಖಾತೆ ಹೊಂದಿದವರ ಮಾರಣಾಂತಿಕ ಕಾಯಿಲೆ ಕೂಡ ಇದರಲ್ಲಿ ಶಾಮೀಲುಗೊಳಿಸಲಾಗಿದ. ಇದಲ್ಲದೆ ಪಾಲಕರ ಅಥವಾ ಪೋಷಕರ ಅಕಾಲಿಕ ಮರಣದ ನಂತರವೂ ಕೂಡ ಅಕಾಲಿಕವಾಗಿ ಖಾತೆಯನ್ನು ನೀವು ಸ್ಥಗಿತಗೊಳಿಸಬಹುದು.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link