DA Arrears Latest update : ಸರ್ಕಾರಿ ನೌಕರರ 18 ತಿಂಗಳ ಡಿಎ ಬಾಕಿಗಳ ಬಗ್ಗೆ ಬಿಗ್ ಅಪ್ಡೇಟ್ ! ಈ ದಿನ ಖಾತೆಗೆ ಹಣ ವರ್ಗ !
ಕರೋನಾ ಅವಧಿಯಲ್ಲಿ 1 ಜನವರಿ 2020 ರಿಂದ 30 ಜೂನ್ 2021 ರವರೆಗಿನ ತುಟ್ಟಿಭತ್ಯೆಯನ್ನು ಸರ್ಕಾರ ತಡೆ ಹಿಡಿದಿತ್ತು. ಸಂಸತ್ತಿನಲ್ಲಿಯೂ ಸಹ ಬಾಕಿ ಉಳಿಸಿಕೊಂಡಿರುವ ಡಿಎ ಬಗ್ಗೆ ಚರ್ಚೆ ನಡೆದಿದೆ. ಆದರೆ ಸರ್ಕಾರ ಯಾವುದೇ ಸ್ಪಷ್ಟ ಉತ್ತರವನ್ನು ನೀಡಿರಲಿಲ್ಲ.
18 ತಿಂಗಳ ಡಿಎ ಬಾಕಿಯನ್ನು ಮೋದಿ ಸರ್ಕಾರ ಖಾತೆಗೆ ಜಮಾ ಮಾಡಿದರೆ, ಭಾರೀ ಮೊತ್ತದ ಹಣ ನೌಕರರ ಖಾತೆ ಸೇರುವುದು ಖಚಿತ. ಡಿಎ ಬಾಕಿಯ ಹಣವನ್ನು ಸರ್ಕಾರ ಮೂರು ಕಂತುಗಳಲ್ಲಿ ನೌಕರರ ಖಾತೆಗೆ ವರ್ಗಾವಣೆ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಇನ್ನೇನು ಲೋಕಸಭೆ ಚುನಾವಣೆ ಸನಿಹದಲ್ಲಿದ್ದು, ಅದಕ್ಕೂ ಮುನ್ನ ಬಾಕಿ ಉಳಿಸಿಕೊಂಡಿರುವ ತುಟ್ಟಿಭತ್ಯೆಯನ್ನು ಸರ್ಕಾರ ಬಿಡುಗಡೆ ಮಾಡಲಿದೆ ಎನ್ನಲಾಗಿದೆ. ಹೀಗಾದರೆ ಪ್ರಥಮ ದರ್ಜೆ ನೌಕರರ ಖಾತೆಗಳಿಗೆ 2 ಲಕ್ಷಕ್ಕೂ ಹೆಚ್ಚು ಹಣ ಜಮಾ ಆಗುವ ನಿರೀಕ್ಷೆಯಿದೆ
ಸದ್ಯದಲ್ಲೇ ನೌಕರರು ಮತ್ತು ಪಿಂಚಣಿದಾರರ ಡಿಎ ಹೆಚ್ಚಿಸಲಿದೆ. ಈ ಬಾರಿ ಸುಮಾರು ಶೇ.4ರಷ್ಟು ಡಿಎ ಹೆಚ್ಚಿಸಬಹುದಾಗಿದ್ದು, ಇದು ಶೇ.46ಕ್ಕೆ ಏರಿಕೆಯಾಗಲಿದೆ.ಇದರಿಂದಾಗಿ ನೌಕರರ ಮೂಲ ವೇತನದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
ನೌಕರರು ಮತ್ತು ಪಿಂಚಣಿದಾರರ ಸಂಘಟನೆಗಳು ಈ ಬಗ್ಗೆ ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರೂ ಸರ್ಕಾರ ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ. 18 ತಿಂಗಳ ಡಿಎ ಬಾಕಿ ಪಾವತಿಸುವ ಬಗ್ಗೆ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅಧಿಕೃತ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಆದರೆ ಮಾಧ್ಯಮ ವರದಿಗಳು ಶೀಘ್ರದಲ್ಲೇ ನೀಡುತ್ತವೆ ಎಂದು ಹೇಳುತ್ತಿವೆ.