2025ರಲ್ಲಿ ಈ ರಾಶಿಯವರ ಮೇಲಿರಲಿದೆ ಸಾಕ್ಷಾತ್ ಲಕ್ಷ್ಮಿ ಅನುಗ್ರಹ, ವರ್ಷಪೂರ್ತಿ ಯಶಸ್ಸು, ಕೈ ಸೇರಲಿದೆ ಕುಬೇರನ ಸಂಪತ್ತು
ಗ್ರಹ ಗೋಚಾರದ ವಿಚಾರದಲ್ಲಿ 2025ರ ವರ್ಷ ಬಹಳ ವಿಶೇಷವಾಗಿದೆ. 2025ರಲ್ಲಿ ನ್ಯಾಯದ ದೇವರು ಶನಿ, ಕ್ರೂರ ಗ್ರಹಗಳು ಎಂತಲೇ ಕರೆಯಲ್ಪಡುವ ರಾಹು-ಕೇತು ಗ್ರಹಗಳ ಸಂಚರವಾಗಲಿದೆ.
2025ರಲ್ಲಿ ಶನಿ, ರಾಹು-ಕೇತು ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ತಾಯಿ ಮಹಾಲಕ್ಷ್ಮಿಯೇ ಕೃಪೆ ತೋರಲಿದ್ದಾಳೆ. ಲಕ್ಷ್ಮಿಯ ವಿಶೇಷ ಆಶೀರ್ವಾದದಿಂದ ಅವರ ಬದುಕೇ ಬಂಗಾರವಾಗಲಿದೆ ಎನ್ನಲಾಗುತ್ತಿದೆ.
ಮೇಷ ರಾಶಿ: 2025ರಲ್ಲಿ ಈ ರಾಶಿಯವರ ಮೇಲೆ ಸಂಪತ್ತುಕಾರಕ ಶುಕ್ರನ ವಿಶೇಷ ಆಶೀರ್ವಾದ ಇರಲಿದೆ. ಇದರಿಂದಾಗಿ ವ್ಯವಹಾರದಲ್ಲಿ ಯಶಸ್ಸು, ಆದಾಯದಲ್ಲಿ ಹೆಚ್ಚಳವಾಗಲಿದೆ. ನೀವು ಬಯಸಿದ್ದನ್ನು ಪಡೆಯುವ ಸುವರ್ಣ ವರ್ಷ ಇದಾರಿಗಲಿದೆ.
ಮಿಥುನ ರಾಶಿ: ಹೊಸ ವರ್ಷದಲ್ಲಿ ಸಂಪತ್ತಿನ ಅಧಿದೇವತೆ ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲಿರಲಿದ್ದು ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹೂಡಿಕೆಯಿದ ಭಾರೀ ಲಾಭವಾಗಲಿದೆ. ಹಣಕಾಸಿನ ಸ್ಥಿತಿ ಮೊದಲಿಗಿಂತ ಸುಧಾರಿಸಲಿದ್ದು, ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳವಾಗಲಿದೆ.
ಕುಂಭ ರಾಶಿ: 2025ರಲ್ಲಿ ಶನಿಯ ರಾಶಿ ಬಡಲವನೆಯು ಈ ರಾಶಿಯವರ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ನೀಡಲಿದೆ. ಶುಕ್ರನ ದಯೆಯಿಂದ ಅದೃಷ್ಟ ಹೆಗಲೇರಲಿದ್ದು ವ್ಯವಹಾರದಲ್ಲಿ ಭಾರೀ ಆದಾಯವನ್ನು ನಿರೀಕ್ಷಿಸಬಹುದು. ಬಹಳ ದಿನಗಳ ನಿಮ್ಮ ಕನಸೊಂದು ಈ ವರ್ಷ ನನಸಾಗಲಿದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.