ಬರೋಬ್ಬರಿ 20 ವರ್ಷಗಳ ಶುಕ್ರ ದೆಸೆ : ಈ ರಾಶಿಯವರಿಗೆ ಒಂದರ ಹಿಂದೆ ಒಂದರಂತೆ ರಾಜಯೋಗ !ಸಾಕ್ಷಾತ್ ಲಕ್ಷ್ಮಿಯೇ ಜೊತೆಯಲ್ಲಿ ಹೆಜ್ಜೆ ಹಾಕುವಳು! ತುಂಬಿ ತುಳುಕುವುದು ಸಿರಿ ಸಂಪತ್ತು
ಯಾರ ಜಾತಕದಲ್ಲಿ ಶುಕ್ರನ ಸ್ಥಾನ ಅಥವಾ ಪ್ರಭಾವ ಬಲವಾಗಿರುತ್ತದೆಯೋ ಆಗ ಆ ವ್ಯಕ್ತಿಯ ಜೀವನದಲ್ಲಿ ಸಕಲ ರೀತಿಯ ಸುಖ, ಸೌಕರ್ಯ, ಸಿರಿ ಸಂಪತ್ತು ಹರಿದು ಬರುತ್ತದೆ. ಹೆಜ್ಜೆ ಹೆಜ್ಜೆಗೂ ಗೆಲುವು ನಿಮ್ಮದಾಗುವುದು.
ಶುಕ್ರ ಮಹಾದೆಸೆ ಎನ್ನುವುದು ಒಂದೆರಡಲ್ಲ ಬರೋಬ್ಬರಿ 20 ವರ್ಷಗಳವರೆಗೆ ಇರುವುದು. ಆ ಕಾರಣದಿಂದಲೇ ಅದನ್ನು ಮಹಾದೆಸೆ ಎಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಜೀವನದಲ್ಲಿ ನಡೆಯುವ ಪ್ರತಿ ಘಟನೆಗಳು ನಮ್ಮ ಪರವಾಗಿಯೇ ಇರುವುದು. ಇಲ್ಲಿ ಸೋಲಿಗೆ ಜಾಗ ಇರುವುದಿಲ್ಲ.
ಮೂರು ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಇರಲಿದೆ. ಅಂದರೆ ಬರೋಬ್ಬರಿ 20 ವರ್ಷಗಳ ಕಾಲ ಇವರಿಗೆ ಅದೃಷ್ಟ.
ವೃಷಭ ರಾಶಿ : ಎಲ್ಲಾ ಕೆಲಸಗಳು ಸರಾಗವಾಗಿ ನಡೆದುಕೊಂಡು ಹೋಗುವುದು. ಹಣಕಾಸಿನ ಸ್ಥಿತಿ ಭದ್ರವಾಗುವುದು. ನಿಮ್ಮನ್ನು ತುಚ್ಛವಾಗಿ ಕಾಣುತ್ತಿದ್ದವರು ನಿಮ್ಮ ಮುಂದೆ ತಲೆ ಬಾಗಿ ನಿಲ್ಲುವರು. ನಿಮ್ಮ ಜೀವನದ ಸುತ್ತ ಮುತ್ತ ಬರೀ ಸಂತೋಷವೇ ಇರುವುದು.
ತುಲಾ ರಾಶಿ : ನಿಮ ಕಷ್ಟಗಳಿಗೆ ತೆರೆ ಬೀಳುವುದು. ನೆಮ್ಮದಿಯ ಜೀವನ ನಿಮ್ಮದಾಗುವುದು.ನೀವು ತೆಗೆದುಕೊಳ್ಳುವ ಪ್ರತಿ ನಿರ್ಧಾರ ಗೆಲುವು ತಂದು ಕೊಡುವುದು. ಹಣಕಾಸಿನ ಸಮಸ್ಯೆ ಎಲ್ಲವೂ ಬಗೆಹರಿಯುವುದು.
ಕನ್ಯಾ ರಾಶಿ : ನಿಮ್ಮ ಜೀವನದಲ್ಲಿ ತಾಳ್ಮೆ ಬಹಳ ಮುಖ್ಯ. ತಾಳ್ಮೆ ಇದ್ದಾರೆ ನಿಮ್ಮನ್ನು ಸೋಲಿಸುವವರು ಯಾರೂ ಇಲ್ಲ. ಆಸ್ತಿ ಖರೀದಿಸಬೇಕು ಎನ್ನುವ ಯೋಚನೆ ಇದ್ದರೆ ಮುಂದುವರೆಯಿರಿ. ಮನೆ ನಿರ್ಮಾಣ, ವಾಹನ ಖರೀದಿ ಎಲ್ಲವೂ ಈ ಹಂತದಲ್ಲಿ ಕೈ ಗೂಡುವುದು.
ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳನ್ನು ಆಧರಿಸಿದೆ. Zee News ಅದನ್ನು ಖಚಿತಪಡಿಸುವುದಿಲ್ಲ.