ಬೆಳಗ್ಗೆ ಈ ಕಾಫಿ ಕುಡಿದರೆ ಸಾಕು ಬ್ಲಡ್ ಶುಗರ್ ಒಮ್ಮೆಲೇ ನಾರ್ಮಲ್ ಆಗಿ ಬಿಡುತ್ತದೆ! ಅದ್ಯಾವ ಕಾಫೀ ನೋಡಿ !
ಗ್ರೀನ್ ಕಾಫಿಯ ಬಗ್ಗೆ ನಿಮಗೆಷ್ಟು ಗೊತ್ತಿದೆ. ಗ್ರೀನ್ ಟೀಯಂತೆ ಗ್ರೀನ್ ಕಾಫಿ ಕೂಡಾ ಪ್ರಪಂಚದಾದ್ಯಂತ ಜನಪ್ರಿಯವಾಗಿದೆ.ಗ್ರೀನ್ ಕಾಫಿಯನ್ನು ಆರೋಗ್ಯಕರ ಪಾನೀಯ ಎಂದು ಗುರುತಿಸಲಾಗಿದೆ.
ಬ್ಲಾಕ್ ಕಾಫಿ ಅಥವಾ ಸಾಮಾನ್ಯ ಕಾಫಿ ಮಾಡಲು ಬಳಸುವ ಬೀಜಗಳಿಂದಲೇ ಗ್ರೀನ್ ಕಾಫಿಯನ್ನು ತಯಾರಿಸಲಾಗುತ್ತದೆ. ಸಾಮಾನ್ಯ ಕಾಫಿಯನ್ನು ತಯಾರಿಸಲು, ಕಾಫಿ ಬೀಜಗಳನ್ನು ಹುರಿದು ಪುಡಿಮಾಡಲಾಗುತ್ತದೆ. ಆದರೆ, ಗ್ರೀನ್ ಕಾಫಿಯ ನೈಸರ್ಗಿಕ ಪರಿಮಳವನ್ನು ಕಾಪಾಡಿಕೊಳ್ಳಲು, ಅದನ್ನು ಹುರಿಯುವುದಿಲ್ಲ. ಹಾಗಾಗಿ ಅದರಲ್ಲಿರುವ ಪೋಷಕಾಂಶಗಳ ಪ್ರಮಾಣವೂ ಹೆಚ್ಚು.
ಸಾಮಾನ್ಯ ಕಾಫಿ ಕುಡಿಯುವುದರಿಂದ ದೇಹದಲ್ಲಿ ಕೆಫೀನ್ ಮತ್ತು ಕೆಲವು ವಿಷ ಪದಾರ್ಥಗಳು ಹೆಚ್ಚಾಗಬಹುದು. ಗ್ರೀನ್ ಕಾಫಿ ದೇಹದಲ್ಲಿ ಅಡಗಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಈ ಮೂಲಕ ಗ್ರೀನ್ ಕಾಫಿ ದೇಹವನ್ನು ನಿರ್ವಿಷಗೊಳಿಸುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ ಎನ್ನುವ ಭಯದಿಂದ ಮಧುಮೇಹ ಇದ್ದವರು ಚಹಾ, ಕಾಫಿಯಿಂದ ದೂರ ಇರುತ್ತಾರೆ. ಆದರೆ ಗ್ರೀನ್ ಕಾಫಿ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.
ನಿಯಮಿತವಾಗಿ ಗ್ರೀನ್ ಕಾಫಿ ಕುಡಿಯುವುದರಿಂದ ಬೊಜ್ಜು ಕಡಿಮೆಯಾಗುತ್ತದೆ. ಈ ಮೂಕ ತೂಕ ನಿಯಂತ್ರಣದಲ್ಲಿರುತ್ತದೆ. ಜೊತೆಗೆ, ಇದು ಜೀರ್ಣಕಾರಿ ಶಕ್ತಿಯನ್ನು ಹೆಚ್ಚಿಸುತ್ತದೆ.