ಗೃಹಲಕ್ಷ್ಮಿಯರಿಗೆ ಗುಡ್‌ ನ್ಯೂಸ್‌! ಎರಡು ಕಂತಿನ ಗೃಹಲಕ್ಷ್ಮಿ ಹಣ ಬಿಡುಗಡೆ?

Sun, 06 Oct 2024-9:17 am,

Gruha Lakshmi: ರಾಜ್ಯದ ಮಹಿಳೆಯರಿಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಶುಭ ಸುದ್ದಿ ನೀಡಿದ್ದಾರೆ.ಎರಡು ತಿಂಗಳಿನಿಂದ ಖಾತೆ ಸೇರದೆ ಉಳಿದಿರುವರುವ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಲಿರುವ ದಿನ ಯಾವುದು ಎನ್ನುವ ಸುಳಿವನ್ನು ನೀಡಿದ್ದಾರೆ.     

ಚುಣಾವಣಾ ಸಂದರ್ಭದಲ್ಲಿ ರಾಜ್ಯಸರ್ಕಾರ ಐದು ಮಹತ್ವವಾದ ಗ್ಯಾರಂಟಿಗಳನ್ನು ನೀಡಿತ್ತು, ಅದರಲ್ಲಿ ಗೃಹಲಕ್ಷ್ಮಿ ಯೋಜನೆ ಕೂಡ ಒಂದು, ಗೃಹಲಕ್ಷ್ಮಿ ಕಾಸಿನಿಂದ ಹಲವರಿಗೆ ಸಹಾಯ ಆಗುತ್ತಿದೆ ಆದರೂ, ಹಣ ಸರಿಯಾದ ಸಮಯಕ್ಕೆ ಖಾತೆ ಸೇರುತ್ತಿಲ್ಲ.   

ಜನರು ಹಣ ಯಾವಾಗ ರಿಲೀಸ್‌ ಆಗುತ್ತೆ ಎಂದು ಎದುರು ನೋಡತ್ತಾ ಕೂತಿದ್ದಾರೆ. ಈ ಗ್ಯಾರಂಟಿ ಜಾರಿಯಾದಾಗಿನಿಂದ ಹಣ ವಿಳಂಬವಾಗಿರುವುದು ಇದೇ ಮೊದಲೇನಲ್ಲ. ಈ ಮುಂಚೆ ಕೂಡ ಹೀಗೆಯೇ ಆಗಿತ್ತು. ಆಗಸ್ಟ್‌ ತಿಂಗಳಲ್ಲಿ ಹಣ ಬಿಡುಗಡೆಯಾಗಿದ್ದು, ಕೇವಲ ಜೂನ್‌ ತಿಂಗಳಲ್ಲಿ ಜಮೆ ಮಾಡಲಾಗಿತ್ತು.   

ಪ್ರತಿ ತಿಂಗಳಿಗೊಮ್ಮೆ ಖಾತೆ ಸೇರಬೇಕಿದ್ದ ಗೃಹಲಕ್ಷ್ಮಿ ಹಣ ಇದೀಗ ಮೂರು ತಿಂಗಳಿಗೊಮ್ಮೆ ಜಮೆ ಆಗುತ್ತಿದೆ, ಜನ ಮಾತ್ರ ದುಡ್ಡು ಈ ತಿಂಗಳು ಬರುತ್ತೆ, ಇನ್ನೇನು ಮುಂದಿನ ತಿಂಗಳು ಬರುತ್ತೆ ಎಂದು ಸರ್ಕಾರ ನೀಡುವ ಹಾಣಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ.  

ಜುಲೈ, ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳಿನಲ್ಲಿ ಗೃಹಲಕ್ಷ್ಮಿ ಹಣ ಇನ್ನೂ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ. ಈ ತಿಂಗಳ ಹಣ ಸೇರಿಸಿದರೆ, ಒಟ್ಟು ಮೂರು ತಿಂಗಳ ಹಣ ಗೃಹಲಕ್ಷ್ಮಿಯರ ಖಾತೆ ಸೇರಬೇಕಿದೆ.  

ಇದೀಗ, ಮೂರು ತಿಂಗಳ ಹಣದ ಬಿಡಿಗಡೆಯ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಹತ್ವದ ಸುಳಿವು ನೀಡಿದ್ದಾರೆ. ಶೀಘ್ರವೇ ಗೃಹಿಣಿಯರ ಖಾತೆಗೆ ಹಣ ಜಮೆ ಮಾಡಲಾಗುವುದು ಎಂದು ಸಚಿವೆ ಮಾಹಿತಿ ನೀಡಿದ್ದಾರೆ.   

ಗೃಹಲಕ್ಷ್ಣಿ ಯೋಜನೆ ಜಾರಿಗೆ ಬಂದಾಗಿನಿಂದ ಸರ್ಕಾರ ಅಂದಾಜು 25000 ಕೋಟಿಯನ್ನು ಬಿಡುಗಡೆ ಮಾಡಿದೆ. ತಿಂಗಳಿಗೆ 2000 ರೂ, ಯಂತೆ ಸುಮಾರು 11 ತಿಂಗಳಿನಿದಮ ಗೃಹಿಣಿಯರ ಖಾತೆಗೆ ಜಮೆ ಮಾಡುತ್ತಾ ಬರುತ್ತಿದೆ, ಆದರೆ ಗೃಹಲಕ್ಷ್ಮಿಯರ ಖಾತೆಗೆ ಸರಿಯಾದ ಸಮಯಕ್ಕೆ ಹಣ ಹಾಕಲು ಅಡ್ಡಿಯಾಗುತ್ತಿರುವುದು ತಾಂತ್ರಿಕ ಸಮಸ್ಯೆ, ಇದನ್ನು ಆದಷ್ಟು ಬೇಗ ಸರಿ ಮಾಡಿ, ರಾಜ್ಯದ ಮಹಿಳೆಯರ ಖಾತೆಗೆ ಹಣ ಹಾಕಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಮಾಹಿತಿ ನೀಡಿದ್ದಾರೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link