GT Texa: 1 ರೂ. ಖರ್ಚಿಲ್ಲದೆ ನಿತ್ಯ 130KM ಚಲಿಸಬಲ್ಲ ಹೊಸ ಬೈಕ್ ಬಿಡುಗಡೆ
ಹೊಸ ಜಿಟಿ ಟೆಕ್ಸಾ ಬೈಕ್‌ನಲ್ಲಿ 3.5 kWh Lithium-Ion ಬ್ಯಾಟರಿ ಅಳವಡಿಸಲಾಗಿದ್ದು, ಒಂದೇ ಚಾರ್ಜ್‌ನಲ್ಲಿ 120-130KM ರೇಂಜ್ ನೀಡುತ್ತದೆ. ಇದಕ್ಕೆ ನೀಡಲಾಗಿರುವ ಆಧುನಿಕ ಮೈಕ್ರೋ-ಚಾರ್ಜರ್‌ನೊಂದಿಗೆ ಬೈಕ್‌ಅನ್ನು ಕೇವಲ 4-5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಬ್ಲಾಕ್ & ರೆಡ್ 2 ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುವ GT ಟೆಕ್ಸಾ ಬೈಕ್ 180KG ಲೋಡ್ ಸಾಮರ್ಥ್ಯ ಮತ್ತು 18 ಡಿಗ್ರಿಗಳ ಗ್ರೇಡಬಿಲಿಟಿಯೊಂದಿಗೆ ನಗರ ಪ್ರದೇಶಗಳಲ್ಲಿ ಸುಲಭವಾಗಿ ರೈಡ್ ಮಾಡಬಹುದಾಗಿದೆ.
GT ಟೆಕ್ಸಾ ಟ್ಯೂಬ್‌ಲೆಸ್ ಟೈರ್‌ಗಳನ್ನು ಹೊಂದಿದ್ದು, ಮುಂಭಾಗದ ಟೈರ್ ಗಾತ್ರ 80-100/18 ಮತ್ತು ಹಿಂಭಾಗದ ಟೈರ್ ಗಾತ್ರ 120-80/17 ಇದೆ. ಈ ಟೈರ್‌ಗಳಿಗೆ ಅನುಗುಣವಾಗಿ ಮುಂಭಾಗದಲ್ಲಿ 457.2MM ಮತ್ತು ಹಿಂಭಾಗದಲ್ಲಿ 431.8MM ಅಳತೆಯ ಅಲಾಯ್ ವೀಲ್‌ಗಳನ್ನು ನೀಡಲಾಗಿದೆ. ಜೊತೆಗೆ ಎರಡೂ ವೀಲ್‌ಗಳಲ್ಲಿ ಡಿಸ್ಕ್ ಬ್ರೇಕ್ ನೀಡಿದ್ದು, ಉತ್ತಮ ಬ್ರೇಕಿಂಗ್‌ಗಾಗಿ E-ABS ಇದೆ. ಮುಂಭಾಗ ಮತ್ತು ಹಿಂಭಾಗದಲ್ಲಿ ಟೆಲಿಸ್ಕೋಪಿಕ್ ಡ್ಯುಯಲ್ ಸಸ್ಪೆನ್ಶನ್ ನೀಡಲಾಗಿದ್ದು, ಒರಟಾದ ರಸ್ತೆಗಳಲ್ಲಿಯೂ ನೀವು ಆರಾಮದಾಯಕ ಸವಾರಿ ಮಾಡಬಹುದು ಎಂದು ಕಂಪನಿ ಹೇಳಿದೆ.
ಸವಾರರು ರಿಮೋಟ್ ಸ್ಟಾರ್ಟ್ ಅಥವಾ ಕೀಲಿಯನ್ನು ಬಳಸಿಕೊಂಡು ಬೈಕ್‌ಅನ್ನು ಪ್ರಾರಂಭಿಸಬಹುದು. ಇದರಲ್ಲಿನ 17.78 CM LED ಡಿಸ್ಪ್ಲೇ ಅನುಕೂಲಕರ ಮಾಹಿತಿ ಒದಗಿಸುತ್ತದೆ. ಡಿಜಿಟಲ್ ಸ್ಪೀಡೋಮೀಟರ್, ಸೆಂಟ್ರಲ್ ಲಾಕಿಂಗ್ ಸಿಸ್ಟಮ್, LED ಹೆಡ್ಲೈಟ್, ಟೈಲ್‌ಲೈಟ್ & ಟರ್ನ್ ಸಿಗ್ನಲ್ ಲ್ಯಾಂಪ್‌ಗಳನ್ನು ಫ್ಯೂಚರಿಸ್ಟಿಕ್ ಆಗಿ ನೀಡಲಾಗಿದೆ.
770MM ಸ್ಯಾಡಲ್ ಎತ್ತರ ಮತ್ತು 145MM ಗ್ರೌಂಡ್ ಕ್ಲಿಯರೆನ್ಸ್, 120KG ಹಗುರವಾದ ಕರ್ಬ್ ತೂಕದಿಂದ ಸವಾರರು ಸುಲಭವಾಗಿ ಬೈಕ್ ನಿಯಂತ್ರಿಸಬಹುದು. ಕಂಪನಿಯು ಕೇವಲ ಈ ಒಂದು ಬೈಕ್ ಮಾತ್ರವಲ್ಲದೇ 55,555 ರೂ.ನಿಂದ ಆರಂಭಿಸಿ 84,555 ರೂ. (ಎಕ್ಸ್ ಶೋ ರೂಂ) ಬೆಲೆಯಲ್ಲಿ ಕೈಗೆಟುಕುವ ದ್ವಿಚಕ್ರ ವಾಹನಗಳನ್ನು ನೀಡುತ್ತಿದೆ.
GT ವೇಗಾಸ್, GT Ryd Plus, GT One Plus Pro ಮತ್ತು GT ಡ್ರೈವ್ ಪ್ರೊ ಸೇರಿದಂತೆ GTಯ ಇತ್ತೀಚಿನ ಶ್ರೇಣಿಯ ಹೆಚ್ಚಿನ ಮತ್ತು ಕಡಿಮೆ-ವೇಗದ EV ದ್ವಿಚಕ್ರ ವಾಹನಗಳನ್ನು ಈಗಾಗಲೇ ಮಾರಾಟ ಮಾಡುತ್ತಿದೆ. ತನ್ನ ಪರಿಸರಸ್ನೇಹಿ ವಾಹನಗಳನ್ನು ಹೆಚ್ಚಿಸಲು 2024ರ ಅಂತ್ಯದ ವೇಳೆಗೆ ಒಟ್ಟು 100 ಡೀಲರ್‌ಶಿಪ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ರೂಪಿಸಿಕೊಂಡಿರುವುದಾಗಿ ಕಂಪನಿ ಹೇಳಿಕೊಂಡಿದೆ.