ಈ ಒಂದು ಎಲೆಯಿದ್ದರೆ ಸಾಕು ಶಾಶ್ವತವಾಗಿ ಕಪ್ಪಾಗುತ್ತೆ ಬಿಳಿ ಕೂದಲು
ಬಿಳಿ ಕೂದಲನ್ನು ಕಪ್ಪಾಗಿಸಲು ಸೀಬೆ ಗಿಡದ ಎಲೆ ತುಂಬಾ ಪ್ರಯೋಜನಕಾರಿ ಆಗಿದೆ.
ಮೊದಲಿಗೆ ಸೀಬೆ ಗಿಡದ ಎಲೆಯನ್ನು ಚೆನ್ನಾಗಿ ತೊಳೆದು ಅದನ್ನು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.
ಒಂದು ಕಬ್ಬಿಣದ ಪಾತ್ರೆಯಲ್ಲಿ ಸೀಬೆ ಎಲೆ ಪೇಸ್ಟ್ 50 ಗ್ರಾಂ, ಅಷ್ಟೇ ಪ್ರಮಾಣದ ಮೆಹಂದಿ ಮತ್ತು 50 mlನಷ್ಟು ನಿಂಬೆ ರಸವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಸೀಬೆ ಗಿಡದ ಎಲೆಯಿಂದ ತಯಾರಿಸಿಟ್ಟ ಈ ಹೇರ್ ಮಾಸ್ಕ್ ಅನ್ನು 9 ದಿನಗಳವರೆಗೆ ಕಬ್ಬಿಣದ ಬಾಣಲೆಯಲ್ಲೇ ಮುಚ್ಚಿಡಿ. ಎರಡ್ಮೂರು ದಿನಗಳಿಗೊಮ್ಮೆ ಅದರ ಮುಚ್ಚಳ ತೆಗೆದು ಕೈಯಾಡಿಸಿ ಇಡಿ. (ಹೀಗೆ ಕೈಯಾಡಿಸದಿದ್ದರೆ ಇದರಲ್ಲಿ ಬೂಸ್ಟ್ ಬರಬಹುದು). ಇದು ಗಾಢ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
ತಯಾರಿಸಿಟ್ಟ ಹೇರ್ ಮಾಸ್ಕ್ ಅನ್ನು 9 ದಿನಗಳ ಬಳಿಕ ನಿಮ್ಮ ಕೂದಲಿಗೆ ಬುಡದಿಂದ ತುದಿಯವರೆಗೂ ಹಚ್ಚಿದರೆ ಒಂದೇ ಬಾರಿಗೆ ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತದೆ. ಜೊತೆಗೆ ಯಾವುದೇ ಸೈಡ್ ಎಫೆಕ್ಟ್ ಸಹ ಇರುವುದಿಲ್ಲ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.