ಬಿಳಿ ಕೂದಲು ಕಪ್ಪಾಗಲು ಈ ಎಲೆಯ ನೀರು ಹಚ್ಚಿ.. ಶಾಶ್ವತ ಪರಿಹಾರ ಕಾಣುವಿರಿ!

Tue, 23 Jan 2024-8:18 pm,

ಇದು ಬಳಸಲು ತುಂಬಾ ಸುಲಭ. ಇದು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ ಮತ್ತು ಪರಿಣಾಮಕಾರಿಯಾಗಿದೆ. ಕೂದಲಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಪೇರಲ ಎಲೆಗಳಿಲ್ಲಿದೆ. ಪೇರಲ ಎಲೆಯಿಂದ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು. 

ಪೇರಲ ಎಲೆಗಳಲ್ಲಿ ಅನೇಕ ಪೋಷಕಾಂಶಗಳಿವೆ. ಇದು ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅನ್ನು ಹೊಂದಿರುತ್ತದೆ. ಇದು ಕೂದಲು ಮತ್ತು ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಕೂದಲಿಗೆ ಪೇರಲ ಎಲೆಗಳನ್ನು ಹಲವು ರೀತಿಯಲ್ಲಿ ಬಳಸಬಹುದು.

ಪೇರಲ ಎಲೆಗಳ ಹೇರ್ ಪ್ಯಾಕ್: 15 ರಿಂದ 20 ಪೇರಲ ಎಲೆಗಳನ್ನು ತೊಳೆದು ಒಣಗಿಸಿ. ಮಿಕ್ಸಿಯಲ್ಲಿ ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಈ ಪೇಸ್ಟ್ ಅನ್ನು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಿ. ಕೆಲವು ನಿಮಿಷಗಳ ಕಾಲ ಬೆರಳುಗಳಿಂದ ಮಸಾಜ್ ಮಾಡಿ. 30-40 ನಿಮಿಷಗಳ ಕಾಲ ಹಾಗೆ ಬಿಟ್ಟು, ಬಳಿಕ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ. ಸೌಮ್ಯವಾದ ಶಾಂಪೂ ಬಳಸಿ. ಇದನ್ನು ವಾರಕ್ಕೆ ಎರಡು ಬಾರಿ ಮಾಡಿ. 

ತೆಂಗಿನೆಣ್ಣೆ ಜೊತೆ ಪೇರಲ ಎಲೆ: ಕೆಲವು ಪೇರಲ ಎಲೆಗಳನ್ನು ತೊಳೆದು ಬ್ಲೆಂಡರ್‌ನಲ್ಲಿ ಹಾಕಿ ದಪ್ಪ ಪೇಸ್ಟ್ ತಯಾರಿಸಿ ಪಕ್ಕಕ್ಕೆ ಇಡಿ. ಒಂದು ಚಿಕ್ಕ ಈರುಳ್ಳಿ ಹಾಕಿ ಪ್ಯೂರಿ ಮಾಡಿ. ಅದನ್ನು ಬಟ್ಟೆಯಲ್ಲಿ ಹಾಕಿ ರಸವನ್ನು ಹಿಂಡಿ. ಈರುಳ್ಳಿ ರಸದಲ್ಲಿ ಪೇರಲ ಎಲೆಗಳ ಪೇಸ್ಟ್ ಮತ್ತು ತೆಂಗಿನೆಣ್ಣೆಯನ್ನು ಮಿಶ್ರಣ ಮಾಡಿ. ಇದನ್ನು ಹಚ್ಚಿ, ಅರ್ಧ ಗಂಟೆಯ ನಂತರ ತೊಳೆಯಿರಿ.

ಪೇರಲ ಎಲೆಯ ನೀರು : ಒಂದಷ್ಟು ಪೇರಲ ಎಲೆಗಳನ್ನು ತೆಗೆದುಕೋಮಡು ತೊಳೆಯಿರಿ. ಇದನ್ನು ಒಂದು ಲೀಟರ್ ನೀರಿನಲ್ಲಿ 15 - 20 ನಿಮಿಷ ಕುದಿಸಿ, ತಣ್ಣಗಾಗುವ ವರೆಗೆ ಬಿಡಿ. ನಂತರ ಫಿಲ್ಟರ್ ಮಾಡಿ ಮತ್ತು ಬಾಟಲಿಯಲ್ಲಿ ಸಂಗ್ರಹಿಸಿ. ಸ್ಪ್ರೇ ಬಾಟಲಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಹಚ್ಚಿ, 10 ನಿಮಿಷ ಕಾಲ ಮಸಾಜ್ ಮಾಡಿ. ನಂತರ ಸರಳ ನೀರಿನಿಂದ ಕೂದಲನ್ನು ತೊಳೆಯಿರಿ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link