ಗುಜರಾತಿನಲ್ಲಿ ಬೆಳೆಸಲಾಗಿರುವ ಈ ಅಣಬೆ ಅನೇಕ ರೋಗಗಳಿಗೆ ರಾಮಬಾಣ
ಗುಜರಾತ್ ವಿಜ್ಙಾನಿಗಳು ಬೆಳೆದಿರುವ ಈ ಅಣಬೆ ಅತ್ಯಂತ ದುಬಾರಿಯಾಗಿದೆ. ಒಂದು ಕಿಲೋ ಮಶ್ರೂಮ್ ಗೆ ಬರೋಬ್ಬರಿ ಒಂದೂವರೆ ಲಕ್ಷ ಪಾವತಿಸಬೇಕಾಗುತ್ತದೆ.
ಕಚ್‌ನ ಗುಜರಾತ್ ಇನ್‌ಸ್ಟಿಟ್ಯೂಟ್ ಆಫ್ ಡೆಸರ್ಟ್ ಎಕಾಲಜಿ ವಿಜ್ಞಾನಿಗಳು 90 ದಿನಗಳಲ್ಲಿ Cordyceps Militaris ಅಣಬೆಯನ್ನು ಪ್ರಯೋಗಾಲಯದ ನಿಯಂತ್ರಿತ ವಾತಾವರಣದಲ್ಲಿ ಬೆಳೆಸಿದ್ದಾರೆ. ಅವರು ಈ ಅಣಬೆಯನ್ನು 35 ಜಾರ್ ಗಳಲ್ಲಿ ಇವುಗಳನ್ನು ಬೆಳೆಯಲಾಗಿದೆ. ಈ ಜಾತಿಯ ಅಣಬೆಯನ್ನು ಚೀನಾ ಮತ್ತು ಟಿಬೆಟ್‌ನ ನೈಸರ್ಗಿಕ ಔಷಧಿಗಳಲ್ಲಿ ದೀರ್ಘಕಾಲದಿಂದಲೂ ಬಳಸಲಾಗುತ್ತಿದೆ ಎಂದು ತಿಳಿದುಬಂದಿದೆ.
ವರದಿಯ ಪ್ರಕಾರ, ಸಂಸ್ಥೆಯ ನಿರ್ದೇಶಕ ವಿ.ವಿಜಯ್ ಕುಮಾರ್, ಪ್ರಕಾರ, 'ಕಾರ್ಡಿಸೆಪ್ಸ್ ಮಿಲಿಟರಿಸ್ ಜಾತಿಯ ಮಶ್ರೂಮ್ ಅನ್ನು ಹಿಮಾಲಯನ್ ಚಿನ್ನ ಎಂದು ಕರೆಯಲಾಗುತ್ತದೆ. ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಅಲ್ಲದೆ, ಇದು ಅನೇಕ ರೋಗಗಳನ್ನು ತಡೆಗಟ್ಟಲು ಬಹಳ ಸಹಾಯಕವಾಗಿದೆ.
ಈ ಮಶ್ರೂಮಿನಲ್ಲಿರುವ ಆಂಟಿಟ್ಯುಮರ್ ಅಂಶದ ಬಗ್ಗೆ ಸಂಸ್ಥೆ ಅಧ್ಯಯನ ಮಾಡಿದೆ. ಅಂದರೆ, ಇದು ದೇಹದಲ್ಲಿ ಟ್ಯೂಮರ್ ಬೆಳೆಯುವುದನ್ನು ತಡೆಯುತ್ತದೆ. ಒಂದು ವೇಳೆ ಟ್ಯೂಮರ್ ಬೆಳೆದಿದ್ದರೆ ಅದರ ಗಾತ್ರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರ ಮೆಡಿಕಲ್ ಟ್ರಯಲ್ ಗಾಗಿ, ಅನುಮತಿ ಕೋರಲಾಗಿದೆ ಎಂದು, ಸಂಸ್ಥೆಯ ಹಿರಿಯ ವಿಜ್ಞಾನಿ ಕಾರ್ತಿಕೇಯನ್ ತಿಳಿಸಿದ್ದಾರೆ. ಪ್ರಾಸ್ಟೇಟ್ ಕ್ಯಾನ್ಸರ್ ಮೇಲೆ ಈ ಮಶ್ರೂಮ್ ವಿಶೇಷ ಪರಿಣಾಮಗಳನ್ನು ಬೀರಲಿದೆ ಎನ್ನಲಾಗಿದೆ.
ಭಾರತೀಯ ಹವಾಮಾನಕ್ಕೆ ಅನುಗುಣವಾಗಿ ಇದರ ಕ್ಯಾನ್ಸರ್ ವಿರೋಧಿ ಮತ್ತು ಆಂಟಿ-ವೈರಲ್ ಗುಣಲಕ್ಷಣಗಳ ಬಗ್ಗೆ ಪರೀಕ್ಷೆ ನಡೆಸಲು ಯೋಜನೆ ರೂಪಿಸಲಾಗಿದೆ. ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಇದೊಂದು ಬಹಳ ಮುಖ್ಯ ಪಾತ್ರ ವಹಿಸುತ್ತದೆ ಎಂಬುದನ್ನು ಕಂಡುಕೊಂಡ ನಂತರ, ಿದನ್ನು ಬೆಳೆಸುವ ಬಗ್ಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಲ್ಯಾಬ್ ನಲ್ಲಿ ಈ ಮಶ್ರೂಮನ್ನು ಬೆಳೆಸಿದರೆ ಇದಕ್ಕೆ ಒಂದೂವರೆ ಲಕ್ಷ ರೂ ವೆಚ್ಚ ತಗಲುತ್ತದೆ. ಆದರೆ ಸಂಸ್ಥೆ ಸಾಮಾನ್ಯ ಶುಲ್ಕದಲ್ಲಿ ಇದರ ತರಬೇತಿ ನೀಡಲು ನಿರ್ಧರಿಸಿದೆ. ಈ ಸಂಶೋಧನಾ ತಂಡದಲ್ಲಿ ನಿರ್ಮಾ ವಿಶ್ವವಿದ್ಯಾಲಯದ ಪ್ರೊಫೆಸರ್ ಜಿಗ್ನಾ ಷಾ ಮತ್ತು ಮಾರ್ಗದರ್ಶಿ ವಿಜ್ಞಾನಿ ಜಿ ಜಯಂತಿ ಕೂಡ ಸೇರಿದ್ದಾರೆ