Gupt Navaratri: ಮುಂದಿನ 9 ದಿನದಲ್ಲಿ ಇವುಗಳಲ್ಲಿ ಯಾವುದಾದರೂ ಒಂದನ್ನು ಮನೆಗೆ ತನ್ನಿ, ವರ್ಷವಿಡೀ ಎದುರಾಗಲ್ಲ ಹಣದ ಕೊರತೆ
ನಾಳೆ ಅಂದರೆ ಫೆಬ್ರವರಿ 2 ರಿಂದ ಗುಪ್ತ ನವರಾತ್ರಿ ಆರಂಭವಾಗುತ್ತಿದೆ. ಈ ಸಮಯವು ದುರ್ಗ ಮಾತೆ ಹಾಗೂ ಲಕ್ಷ್ಮಿಯನ್ನು ಮೆಚ್ಚಿಸಲು ತುಂಬಾ ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ. ನೀವು ಸಹ ವರ್ಷವಿಡೀ ಮಾತೆ ದುರ್ಗೆಯ ಮತ್ತು ಮಾ ಲಕ್ಷ್ಮಿಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಮುಂದಿನ 9 ದಿನಗಳಲ್ಲಿ ಖಂಡಿತವಾಗಿಯೂ ಈ ಕೆಲಸವನ್ನು ಮಾಡಿ.
ಗುಪ್ತ ನವರಾತ್ರಿಯ ಸಮಯದಲ್ಲಿ, ಶ್ರೀಯಂತ್ರ, ಬೆಳ್ಳಿ ನಾಣ್ಯ, ಆನೆ, ತ್ರಿಶೂಲ, ಬಿಲ್ವಪತ್ರೆ, ಕಮಲ, ಸ್ವಸ್ತಿಕ, ಕಲಶ, ದೀಪ, ಗಂಟೆ, ತಾಯಿಯ ಪಾದಗಳು, ಪೂಜೆ ತಟ್ಟೆ ಅಥವಾ ಪೂಜೆಯಲ್ಲಿ ಬಳಸುವ ಯಾವುದೇ ಶುಭ ಬೆಳ್ಳಿಯ ವಸ್ತುಗಳನ್ನು ಖರೀದಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ ಮತ್ತು ವರ್ಷವಿಡೀ ಸಂಪತ್ತು ಮತ್ತು ಸಮೃದ್ಧಿಯನ್ನು ಸುರಿಸುತ್ತಾಳೆ ಎಂದು ನಂಬಲಾಗಿದೆ.
ಗುಪ್ತ ನವರಾತ್ರಿಯಲ್ಲಿ ಮಾತೆ ಲಕ್ಷ್ಮಿಯ ಚಿತ್ರ ಅಥವಾ ವಿಗ್ರಹವನ್ನು ತರಲು ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಈ ಫೋಟೋ ಅಥವಾ ವಿಗ್ರಹದಲ್ಲಿ ಮಾತೆ ಲಕ್ಷ್ಮಿಯು ಕಮಲದ ಆಸನದ ಮೇಲೆ ಕುಳಿತು ತನ್ನ ಕೈಗಳಿಂದ ಹಣವನ್ನು ಧಾರೆ ಎರೆಯುತ್ತಿರಬೇಕು ಎಂಬುದನ್ನು ನೆನಪಿಡಿ. ಲಕ್ಷ್ಮಿ ದೇವಿಯ ನಿಂತಿರುವ ಚಿತ್ರವು ಮನೆಗೆ ಅಶುಭಕರವಾಗಿದೆ.
ಮನೆಯಲ್ಲಿ ತುಳಸಿ ಗಿಡವಿಲ್ಲದಿದ್ದರೆ ಅಥವಾ ಹೊಸದಕ್ಕೆ ಗಿಡವನ್ನು ಬದಲಾಯಿಸಲು ಬಯಸಿದರೆ, ಗುಪ್ತ ನವರಾತ್ರಿಯ ಸಮಯ ಇದಕ್ಕೆ ತುಂಬಾ ಒಳ್ಳೆಯದು. ಭಾನುವಾರ ಹೊರತುಪಡಿಸಿ ಪ್ರತಿದಿನ ತುಳಸಿಗೆ ನೀರನ್ನು ಅರ್ಪಿಸಬೇಕು ಎಂಬುದನ್ನು ನೆನಪಿಡಿ. ಹಾಗೆಯೇ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತುಳಸಿಗೆ ಪೂಜೆ ಮಾಡಿ.
ಗುಪ್ತ ನವರಾತ್ರಿಯಲ್ಲಿ ತಾಯಿಗೆ ಶೃಂಗಾರ ಸಾಮಾಗ್ರಿಗಳನ್ನು ಅಂದರೆ ಮೇಕಪ್ ಸಾಮಾಗ್ರಿಗಳನ್ನು ಅರ್ಪಿಸುವುದು ತುಂಬಾ ಮಂಗಳಕರ. ಇದು ಅದೃಷ್ಟವನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.