12 ವರ್ಷಗಳ ಬಳಿಕ ಈ ರಾಶಿಯವರಿಗೆ ಗುರು ಬಲ, ಹೊಸ ವರ್ಷದಲ್ಲಿ ಜಾಕ್ ಪಾಟ್, ಸಕಲೈಶ್ವರ್ಯ ಪ್ರಾಪ್ತಿ..!
ವೈದಿಕ ಜ್ಯೋತಿಷ್ಯದ ಪ್ರಕಾರ, 2025ರ ಮೇ 14ರಂದು ಗುರು ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಇದರೊಂದಿಗೆ ಕೆಲವು ರಾಶಿಯವರಿಗೆ 'ಗುರು ಬಲ' ಆರಂಭವಾಗಲಿದೆ.
ಹೊಸ ವರ್ಷದಲ್ಲಿ ಗುರು ಮಹಾದಶದಿಂದ ಕೆಲವು ರಾಶಿಯವರ ಬದುಕು ಹಸನಾಗಲಿದ್ದು ಸಕಲೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ.
ಮೇಷ ರಾಶಿ: ಗುರು ಸಂಚಾರ ಪ್ರಭಾವದಿಂದ ಈ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣಭಾಗ್ಯ ಕೂಡಿ ಬರಲಿದೆ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ.
ಕನ್ಯಾ ರಾಶಿ: ಗುರು ಮಹಾದಶ ಪ್ರಭಾವದಿಂದ ಹೊಸ ವರ್ಷದಲ್ಲಿ ಉದ್ಯೋಗದಲ್ಲಿ ಕೀರ್ತಿ ಯಶಸ್ಸು ದೊರೆಯಲಿದೆ. ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಕಾಲ.
ತುಲಾ ರಾಶಿ: ಗುರು ಬಲದಿಂದ ಈ ರಾಶಿಯವರಿಗೆ ಮಲಗಿರುವ ಅದೃಷ್ಟ ಜಾಗೃತಗೊಳ್ಳಲಿದೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದ್ದು, ವಿದೇಶ ಪ್ರಯಾಣ ಯೋಗವೂ ಇದೆ. ಕನಸು ನನಸಾಗುವ ಪರ್ವಕಾಲ.
ಧನು ರಾಶಿ: 2025ರಲ್ಲಿ ಗುರು ಸಂಚಾರದಿಂದ ಈ ರಾಶಿಯವರಿಗೆ ಭೂಮಿ, ವಾಹನ ಖರೀದಿಸುವ ಕನಸು ನನಸಾಗಲಿದೆ. ವ್ಯವಹಾರದಲ್ಲಿ ಜಾಕ್ ಪಾಟ್ ಹೊಡೆಯಲಿದ್ದು, ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ.
ಕುಂಭ ರಾಶಿ: ಗುರು ಮಹಾದಶ ಪ್ರಭಾವದಿಂದ ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಬಂಪರ್ ಲಾಭವಾಗಲಿದೆ. ಜೀವನದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳಬೇಕಾಗಬಹುದು. ಮದುವೆಯಂತಹ ಶುಭ ಕಾರ್ಯಗಳು ಜರುಗುವುವು.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.