ಅಕ್ಟೋಬರ್ 30ಕ್ಕೆ ಗುರು ಚಾಂಡಾಲ ಯೋಗ ಅಂತ್ಯ, ಲಕ್ಷ್ಮಿ ಕೃಪೆಯಿಂದ ಈ ಜನರ ಭಾಗ್ಯದ ಬಾಗಿಲು ಮತ್ತೆ ತೆರೆದುಕೊಳ್ಳಲಿದೆ!

Fri, 13 Oct 2023-5:17 pm,

End Of Guru-Chandal Yog 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೇಷ ರಾಶಿಯಲ್ಲಿ ರೂಪುಗೊಂಡಿದ್ದ ಗುರುಚಾಂಡಾಲ ಯೋಗ ಅಂತ್ಯವಾಗಲಿದೆ. ಇದರಿಂದ ಒಟ್ಟು ಮೂರು ರಾಶಿಗಳ ಜನರ ಜೀವನದಲ್ಲಿ ಮತ್ತೆ ಚಿನ್ನದಂತಹ ದಿನಗಳು ಆರಂಭವಾಗಲಿದ್ದು, ಮುಚ್ಚಿದ ಅವರ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, Spiritual News In Kannada,

ಮೇಷ ರಾಶಿ: ಈ ಯೋಗ ನಿಮ್ಮ ರಾಶಿಯಲ್ಲಿಯೇ ನಿರ್ಮಾಣಗೊಂಡಿದ್ದ ಕಾರಣ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ತಲೆದೂರಿದ್ದವು ಮತ್ತು ಈಗ ಅವುಗಳಿಂದ ನಿಮಗೆ ಮುಕ್ತಿಸಿಗಲಿದೆ. ಆರೋಗ್ಯ ಕೂಡ ಸುಧಾರಿಸಲಿದೆ. ಸುಖಗಳ ಪ್ರಾಪ್ತಿಯಾಗಲಿದೆ. ಇದಲ್ಲದೆ ಸಂತಾನ ಭಾಗ್ಯದ ಯೋಗ ಕೂಡ ರೂಪುಗೊಳ್ಳುತ್ತಿದೆ. ಆರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಅಪಾರ ಲಾಭ ಉಂಟಾಗಲಿದೆ. 

ಮಿಥುನ ರಾಶಿ: ಗುರು ಚಾಂಡಾಲ ಯೋಗ ಅಂತ್ಯ ನಿಮ್ಮ ಪಾಲಿಗೆ ಅತ್ಯಂತ ಮಂಗಳಕಾರಕ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಆದಾಯ ಭಾವದ ಮೇಲೆ ರೂಪುಗೊಂಡಿತ್ತು. ಹೀಗಾಗಿ  ಈ ಅವಧಿಯಲ್ಲಿ ಯಾರೊಂದಿಗೆ ನಿಮ್ಮ ಸಂಬಂಧಗಳು ಹಾಳಾಗಿದ್ದರೆ ಅವು ಮತ್ತೆ ಸುಧಾರಿಸಲಿವೆ. ಹಳೆ ಹೂಡಿಕೆಗಳಿಂದ ನಿಮಗೆ ಲಾಭ ಸಿಗಲಿದೆ. ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಅಪಾರ ಉನ್ನತಿಯಾಗಿ, ಘನತೆ-ಗೌರವ ಹೆಚ್ಚಾಗಲಿದೆ. 

ಸಿಂಹ ರಾಶಿ: ಗುರು ಚಾಂಡಾಲ ಯೋಗ ಅಂತ್ಯ ನಿಮ್ಮ ಪಾಲಿಗೆ ಅದ್ಭುತವಾಗಿರಲಿದೆ. ಏಕೆಂದರೆ ದೇವಗುರು ಬೃಹಸ್ಪತಿ ನಿಮ್ಮ ಭಾಗ್ಯ ಉದಯಕ್ಕೆ ಕಾರಣವಾಗಲಿದ್ದಾನೆ. ಅರ್ಥಾತ್ ಒಂದು ವೇಳೆ ನೀವು 28 ವಯಸ್ಸಿಗಿಂತ ದೊಡ್ಡವರಾಗಿದ್ದರೆ, ನಿಮಗೆ ಸರ್ಕಾರಿ ನೌಕರಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ವಿವಾಹ ಕೂಡ ನೆರವೇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ನಿಮ್ಮ ಅದೃಷ್ಟದ ಅಪಾರ ಬೆಂಬಲ ಸಿಗಲಿದೆ. ಅದರಲ್ಲಿಯೂ ವಿಶೇಷವಾಗಿ ರಾಜಕೀಯ ಜೀವನಕ್ಕೆ ಸಂಬಂಧಿಸಿದಂತೆ ಇರುವ ಜನರಿಗೆ ಸ್ಥಾನ=ಮಾನ ಪ್ರಾಪ್ತಿಯಾಗಲಿದೆ. ಮೀಡಿಯಾ, ಮಾಡೆಲಿಂಗ್, ಆಡಳಿತಾತ್ಮಕ ಸೇವೆ. ಕವಿ, ಲೇಖಕ, ಚಿತ್ರ ಜಗತ್ತಿನ ಜೊತೆಗೆ ಸಂಬಂಧ ಹೊಂದಿಯವರಿಗೆ ಈ ಸಮಯ ಅದ್ಭುತ ಸಾಬೀತಾಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ) 

ZEENEWS TRENDING STORIES

By continuing to use the site, you agree to the use of cookies. You can find out more by Tapping this link