Kuber Yoga: ಮೇ ತಿಂಗಳಲ್ಲಿ ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಸಿರಿವಂತರಾಗುವ ಯೋಗ
ವಾರದ ಹಿಂದಷ್ಟೇ ಮೇ 01, 2024ರಂದು ದೇವಗುರು ಗೃಹಸ್ಪತಿ ವೃಷಭ ರಾಶಿಗೆ ಪದಾರ್ಪಣೆ ಮಾಡಿದ್ದಾನೆ. ಇದರಿಂದಾಗಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಕುಬೇರ ಯೋಗ ನಿರ್ಮಾಣವಾಗಿದೆ.
ಗುರು ಸಂಚಾರದಿಂದ ನಿರ್ಮಾಣವಾದ ಕುಬೇರ ಯೋಗವು ಮೇ ತಿಂಗಳಿನಲ್ಲಿ ಕೆಲವು ರಾಶಿಯ ಜನರ ಅದೃಷ್ಟವನ್ನೇ ಬದಲಾಯಿಸಲಿದ್ದು, ಈ ತಿಂಗಳು ಪೂರ್ತಿ ಅವರಿಗೆ ಶುಭ ಸುದ್ಧಿ, ಬಂಪರ್ ಧನಲಾಭ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಕುಬೇರ ಯೋಗದ ಪರಿಣಾಮದಿಂದಾಗಿ ಮೇಷ ರಾಶಿಯ ಜನರು ಮೇ ತಿಂಗಳಿನಲ್ಲಿ ವ್ಯಾಪಾರದಲ್ಲಿ ಬಂಪರ್ ಧನಲಾಭವನ್ನು ನಿರೀಕ್ಷಿಸಬಹುದು. ಹಣದ ಹರಿವು ಹೆಚ್ಚಾಗಿ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.
ಕರ್ಕಾಟಕ ರಾಶಿಯ ಜನರು ಮೇ ತಿಂಗಳಿನಲ್ಲಿ ಕುಬೇರ ಯೋಗದ ಆಶೀರ್ವಾದದಿಂದ ಹೊಸ ಆಸ್ತಿ, ಮನೆ ಖರೀದಿಸುವ ಸಂಭವವಿದೆ. ವಿದೇಶ ಪ್ರಯಾಣಕ್ಕಾಗಿ ಯೋಚಿಸುತ್ತಿರುವವರಿಗೆ ನಿಮ್ಮ ಕನಸು ನನಸಾಗಲಿದೆ.
ಕುಬೇರ ಯೋಗವು ಮೇ ತಿಂಗಳಿನಲ್ಲಿ ವೃಶ್ಚಿಕ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಆದಾಯದ ಹಲವು ಮೂಲಗಳು ಸೃಷ್ಟಿಯಗಳಿವೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉದ್ಯೋಗಾವಕಾಶ, ವ್ಯಾಪಾರ-ವ್ಯವಹಾರದಿಂದ ಲಾಭವಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.