12 ವರ್ಷಗಳ ನಂತರ ಹೊಸ ವರ್ಷದಲ್ಲಿ ಗಜಕೇಸರಿ ಯೋಗ: ಈ ರಾಶಿಯವರಿಗೆ ವೃತ್ತಿಯಲ್ಲಿ ಯಶಸ್ಸು, ಲಕ್ಷ್ಮಿ ಅನುಗ್ರಹ, ವೈಭೋಗದ ಜೀವನ

Wed, 01 Jan 2025-6:27 am,

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಗುರು ಬೃಹಸ್ಪತಿಯು 2025ರ ಮೇ 14ರಂದು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ. 

ಮಿಥುನ ರಾಶಿಯಲ್ಲಿ ಗುರು ಪ್ರವೇಶದೊಂದಿಗೆ ಚಂದ್ರನೊಂದಿಗೆ ಸಂಯೋಗ ಹೊಂದಿ ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದಾದ ಗಜಕೇಸರಿ ಯೋಗ ರಚಿಸಲಿದ್ದಾನೆ. 

ಗಮನಾರ್ಹವಾಗಿ 12 ವರ್ಷಗಳ ನಂತರ ಈ ರಾಶಿಚಕ್ರದಲ್ಲಿ ಗಜಕೇಸರಿ ಯೋಗ ನಿರ್ಮಾಣವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ. 

ಮಿಥುನ ರಾಶಿ:  ಸ್ವ ರಾಶಿಯಲ್ಲಿ ನಿರ್ಮಾಣವಾಗುತ್ತಿರುವ ಗಜಕೇಸರಿ ಯೋಗವು ಈ ರಾಶಿಯವರಿಗೆ ಪ್ರಮುಖ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೀರ್ತಿಯನ್ನು ನೀಡಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಿ ಸಂಪತ್ತು ವೃದ್ಧಿಯಾಗಲಿದೆ. 

ಕನ್ಯಾ ರಾಶಿ:  ಗಜಕೇಸರಿ ಯೋಗವು ಈ ರಾಶಿಯವರಿಗೆ ವಿದೇಶ ಪ್ರವಾಸ ಯೋಗವನ್ನು ನೀಡಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹೊಸ ಎತ್ತರಕ್ಕೆ ಏರುವಿರಿ. ಹಣದ ಸುರಿಮಳೆಯೇ ಆಗಲಿದ್ದು ಭೂಮಿ ಖರೀದಿ ಯೋಗವೂ ಇದೆ. 

ತುಲಾ ರಾಶಿ:  ಗಜಕೇಸರಿ ಯೋಗವು ಈ ರಾಶಿಯ ಜನರಿಗೆ ಪೂರ್ವಜರ ಆಸ್ತಿಯಿಂದ ಪ್ರಯೋಜನವನ್ನು ನೀಡಲಿದೆ. ಸ್ವಂತ ಮನೆ ಹೊಂದುವ ನಿಮ್ಮ ಕನಸು ನನಸಾಗಲಿದೆ. ಇನ್ನೂ ಮದುವೆಯಾಗದವರಿಗೆ ವಿವಾಹ ಯೋಗವೂ ಇದೆ. 

ಧನು ರಾಶಿ:  ಗಜಕೇಸರಿ ಯೋಗವು ಕೌಟುಂಬಿಕ ಜೀವನದಲ್ಲಿ ಶಾಂತಿ ನೆಮ್ಮದಿಯನು ನೀಡಲಿದೆ. ಈ ಸಮಯದಲ್ಲಿ ವಿಶೇಷವಾಗಿ ಪಿತೃ ಸಮಾನರಿಂದ ಹೆಚ್ಚಿನ ಲಾಭವಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ಜರುಗಬಹುದು. ಹಣಕಾಸಿನ ಸ್ಥಿತಿ ಬಲವಾಗಿರಲಿದೆ. 

ಕುಂಭ ರಾಶಿ:  ಗಜಕೇಸರಿ ಯೋಗವು ಈ ರಾಶಿಯವರಿಗೆ ವೃತ್ತಿ ಬದುಕಿನಲ್ಲಿ ಅಪಾರ ಯಶಸ್ಸು, ಮನೆಯಲ್ಲಿ ನೆಮ್ಮದಿಯನ್ನು ನೀಡಲಿದೆ. ಮದುವೆಯಾಗದವರಿಗೆ ಕಂಕಣ ಭಾಗ್ಯ, ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯಲಿದೆ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link