Guru Gochar: 2024ರಲ್ಲಿ ಗುರು ಬಲದಿಂದಾಗಿ ಈ ರಾಶಿಯವರಿಗೆ ಶ್ರೀಮಂತರಾಗುವ ಯೋಗ

Tue, 30 Jan 2024-8:18 am,

ಗುರು ಗೋಚಾರ:  ವೈದಿಕ ಜ್ಯೋತಿಷ್ಯದ ಪ್ರಕಾರ, ದೇವಗುರು ಬೃಹಸ್ಪತಿಯು 01 ಮೇ 2024ರಂದು ಮಧ್ಯಾಹ್ನ 2:29 ಕ್ಕೆ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. 

ಗುರು ಗೋಚಾರದ ಫಲ:  ವೃಶ್ಚಿಕ ರಾಶಿಗೆ ಗುರುವಿನ ಪ್ರವೇಶವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಬೀರುತ್ತದೆ. 

ಗುರು ದಯೆ:  ಆದಾಗ್ಯೂ ಈ ಅವಧಿಯಲ್ಲಿ ಗುರು ಕೆಲವು ರಾಶಿಯವರ ಜೀವನದ ಮೇಲೆ ದಯೆ ತೋರಲಿದ್ದಾನೆ. ಇದರಿಂದಾಗಿ ಆ ವ್ಯಕ್ತಿಯ ಜೀವನದಲ್ಲಿ ಅದೃಷ್ಟವು ಹೊಳೆಯುತ್ತದೆ ಎಂದು ಹೇಳಲಾಗುತ್ತಿದೆ. 

ಗುರು ಸಂಚಾರದ ಸಕಾರಾತ್ಮಕ ಪರಿಣಾಮ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವೃಶ್ಚಿಕ ರಾಶಿಗೆ ಗುರು ಪ್ರವೇಶದಿಂದ ಕೆಲವು ರಾಶಿಯವರಿಗೆ ಗುರು ಬಲ ದೊರೆಯಲಿದೆ. ಗುರು ಬಲದಿಂದಾಗಿ ಈ ಸಮಯದಲ್ಲಿ ಅವರು ಕೈ ಹಾಕಿದ ಕೆಲಸಗಾಲಲ್ಲೆಲ್ಲಾ ಅದೃಷ್ಟ ಅವರ ಕೈ ಹಿಡಿಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಕರ್ಕಾಟಕ ರಾಶಿ:  2024ರಲ್ಲಿ ಗುರು ರಾಶಿ ಪರಿವರ್ತನೆಯು ಕರ್ಕಾಟಕ ರಾಶಿಯವರಿಗೆ ತುಂಬಾ ಫಲಪ್ರಧವಾಗಿದೆ. ಈ ಅವಧಿಯಲ್ಲಿ, ಕರ್ಕಾಟಕ ರಾಶಿಯ ಜನರು ಕೈ ಹಾಕಿದ ಕೆಲಸಗಳಲ್ಲೆಲ್ಲಾ ಭಾರೀ ಯಶಸ್ಸನ್ನು ಪಡೆಯುವರು. ಜೊತೆಗೆ ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ಕೂಡ ಬಗೆಹರಿಯಲಿವೆ. 

ಕನ್ಯಾ ರಾಶಿ:  ಈ ವರ್ಷ ಗುರು ಸಂಚಾರದಿಂದಾಗಿ ಕನ್ಯಾ ರಾಶಿಯವರಿಗೆ ಅದೃಷ್ಟ ಹೊಳೆಯಲಿದೆ. ಉದ್ಯೋಗದಿಂದ ವ್ಯವಹಾರದವರೆಗೆ ಎಲ್ಲದರಲ್ಲೂ ಯಶಸ್ಸು ನಿಮ್ಮ ಕೈ ಹಿಡಿಯಲಿದೆ. ಮಾತ್ರವಲ್ಲ, ಪೂರ್ವಿಕರ ಆಸ್ತಿಯಿಂದ ಲಾಭವನ್ನು ನಿರೀಕ್ಷಿಸಬಹುದು. ಹಣಗಳಿಕೆಯ ಅವಕಾಶಗಳು ಕೂಡ ಹೆಚ್ಚಾಗಲಿದೆ. 

ಧನು ರಾಶಿ:  ಗುರು ರಾಶಿ ಬದಲಾವಣೆಯು ಧನು ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯವನ್ನು ತರಲಿದೆ. ಈ ಸಮಯದಲ್ಲಿ ನೀವು ಉದ್ಯೋಗ, ವ್ಯವಹಾರದಲ್ಲಿ ಪ್ರಗತಿಯನ್ನು ಹೊಂದುವಿರಿ. ವ್ಯಾಪಾರಸ್ಥರಿಗೆ ಬಂಪರ್ ಲಾಭದ ನಿರೀಕ್ಷೆಯಿದೆ. ಆದಾಯವೂ ಹೆಚ್ಚಾಗಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link