Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನ
ದೇವಗುರು ಬೃಹಸ್ಪತಿಯು ವರ್ಷಕ್ಕೆ ಒಮ್ಮೆ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇದೀಗ ಮೇ 01ರಂದು ಗುರು ಮೇಷ ರಾಶಿಯನ್ನು ತೊರೆದು ವೃಷಭ ರಾಶಿಯನ್ನು ಪ್ರವೇಶಿಸಲಿದ್ದಾನೆ.
ವೃಷಭ ರಾಶಿಗೆ ಗುರುವಿನ ಪ್ರವೇಶದೊಂದಿಗೆ ಶುಭಕರ ಕುಬೇರ ಯೋಗವು ನಿರ್ಮಾಣವಾಗಲಿದೆ. ಇದರ ಪರಿಣಾಮ ದ್ವಾದಶ ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಇದನ್ನು ಕೆಲವು ರಾಶಿಯವರ ದೃಷ್ಟಿಯಿಂದ ತುಂಬಾ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ಕುಬೇರ ರಾಜಯೋಗದ ಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರಲಿದ್ದು, ಇದರಿಂದ ಇವರ ಜೀವನದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಅವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ವೃಷಭ ರಾಶಿಯಲ್ಲಿಯೇ ಗುರು ಸಂಚಾರದಿಂದ ಕುಬೇರ ರಾಜ ಯೋಗ ನಿರ್ಮಾಣವಾಗುತ್ತಿದೆ. ಇದರಿಂದಾಗಿ, ಈ ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಯಶಸ್ಸು ಕಂಡು ಬರಲಿದ್ದು, ಅಪಾರ ಧನ-ಕನಕ ಪ್ರಾಪ್ತಿಯಾಗಲಿದೆ. ಆರೋಗ್ಯವೂ ಉತ್ತಮವಾಗಿರಲಿದೆ.
ಗುರು ರಾಶಿ ಬದಲಾವಣೆಯಿಂದಾಗಿ ಕರ್ಕಾಟಕ ರಾಶಿಯವರಿಗೆ ಗೋಲ್ಡನ್ ಟೈಮ್ ಆರಂಭವಾಗಲಿದೆ. ಈ ಸಮಯದಲ್ಲಿ ಆದಾಯದ ಮೂಲಗಳು ಹೆಚ್ಚಾಗಲಿವೆ. ಜೀವನದಲ್ಲಿ ಸಂಪತ್ತು ಹೆಚ್ಚಾಗಲಿದ್ದು ಬೊಕ್ಕಸ ತುಂಬಲಿದೆ.
ಕುಬೇರ ಯೋಗವು ಕನ್ಯಾ ರಾಶಿಯ ಜನರಿಗೆ ಸಂಪತ್ತಿನ ಜೊತೆಗೆ ನೆಮ್ಮದಿಯ ಜೀವನವನ್ನು ಕೂಡ ತರಲಿದೆ. ವೃತ್ತಿಯಲ್ಲಿ ಪ್ರಗತಿ, ವಿದೇಶ ಪ್ರಯಾಣ ಯೋಗವೂ ಇದೆ. ಆದಾಯ ಹೆಚ್ಚಳದಿಂದ ಭೌತಿಕ ಸೌಕರ್ಯಗಳು ಕೂಡ ಹೆಚ್ಚಾಗಲಿವೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.