ಐನೂರು ವರ್ಷಗಳ ಬಳಿಕ ಮೇಷ ರಾಶಿಯಲ್ಲಿ `ಕುಲದೀಪಕ ರಾಜಯೋಗ` ಈ ಜನರಿಗೆ ಅಪಾರ ಸಿರಿ ಸಂಪತ್ತು ಪ್ರಾಪ್ತಿ!
Guru Margi 2023 In Mesha Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ದೇವ ಗುರು ಬೃಹಸ್ಪತಿ ಕುಲದೀಪಕ ರಾಜಯೋಗ ನಿರ್ಮಿಸಲು ಹೊರಟಿದ್ದು, ಇದರಿಂದ ಹೊಸ ಆರಂಭದಲ್ಲಿಯೇ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯಲಿದೆ. (Spiritual News In Kannada)
ಮೇಷ ರಾಶಿ: ನಿಮ್ಮ ಜಾತಕದಲ್ಲಿಯೇ ಈ ರಾಜಯೋಗ ನಿರ್ಮಾಣಗೊಳ್ಳುತ್ತಿರುವ ಕಾರಣ ಕುಲದೀಪಕ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಹೀಗಾಗಿ ಹೊಸ ವರ್ಷದ ಆರಂಭದಲ್ಲಿಯೇ ಭಾಗ್ಯದ ಸಾಥ್ ನಿಮಗೆ ಸಿಗಲಿದ್ದು, ನಿಮ್ಮ ಆತ್ಮವಿಶ್ವಾಸ ಅಪಾರ ಹೆಚ್ಚಾಗಲಿದೆ. ವೃತ್ತಿಗೆ ಸಂಬಂಧಿಸಿದಂತೆ ನಿಮಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ನಿಮ್ಮ ವ್ಯಾಪಾರದಲ್ಲಿ ಆದಾಯ ಹೆಚ್ಚಾಗಲಿದೆ ಮತ್ತು ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಗುರು ನಿಮ್ಮ ಜಾತಕದ ನವಮ ಹಾಗೂ ದ್ವಾದಶ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯವಾಗಲಿದೆ. ಹಳೆ ಸಾಲದಿಂದ ಮುಕ್ತಿ ಸಿಗಲಿದೆ. ದೇಶ ವಿದೇಶಗಳಿಗೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ.
ಕರ್ಕ ರಾಶಿ: ಕುಲದೀಪಕ ರಾಜಯೋಗ ಕರ್ಕ ರಾಶಿಯ ಜಾತಕದವರ ವೃತ್ತಿ ಜೀವನ ಹಾಗೂ ವ್ಯಾಪಾರದ ದೃಷ್ಟಿಯಿಂದ ಅತ್ಯಂತ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ಗುರುಗ್ರಹ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಸಂಚರಿಸಲಿದ್ದು, ಮೇ 1, 2024ರವರೆಗೆ ಆತ ಅಲ್ಲಿಯೇ ಇರಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೃತ್ತಿ-ವ್ಯಾಪಾರದಲ್ಲಿ ಉನ್ನತಿಯಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಬ್ಯಾಂಕ್ ಬ್ಯಾಲೆನ್ಸ್ ನಲ್ಲಿ ಹೆಚ್ಚಳದ ಸಾಧ್ಯತೆ ಇದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದೆ. ಆಧ್ಯಾತ್ಮಿಕ ಕೆಲಸ ಕಾರ್ಯಗಳಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಲಿದೆ. ಜೀವನದಲ್ಲಿ ಸುಖ ಸಮೃದ್ಧಿ ಇರಲಿದೆ. ನೌಕರ ವರ್ಗದ ಜನರ ಪದೋನ್ನತಿಯಾಗಲಿದೆ. ಗುರುವಿನ ಕೃಪೆಯಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ.
ಸಿಂಹ ರಾಶಿ:ಕುಲದೀಪಕ ರಾಜಯೋಗ ನಿಮಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ನೀಡಲಿದೆ ಈ ಅವಧಿಯಲ್ಲಿ ಗುರು ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಬೆಂಬಲ ಸಿಗಲಿದೆ. ವಿದೇಶ ಯಾತ್ರೆಗೆ ತೆರಳಲು ಬಯಸುವ ಯೋಜನೆ ರೂಪಿಸುತ್ತಿರುವವರ ಯೋಜನೆ ಕೈಗೂಡಲಿದೆ. ಗುರುವಿನ ಕೃಪೆಯಿಂದ ಆಧ್ಯಾತ್ಮಿಕ ಕಾರ್ಯಗಳಲ್ಲಿ ಅಭಿರುಚಿ ಹೆಚ್ಚಾಗಲಿದೆ. ಜೀವನದಲ್ಲಿ ಸುಖ ಸಮೃದ್ಧಿ ಹೆಚ್ಚಾಗಲಿದೆ. ಗುರು ನಿಮ್ಮ ಜಾತಕದ ಪಂಚಮ ಹಾಗೂ ಅಷ್ಟಮ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಸಂತಾನಕ್ಕೆ ಸಂಬಂಧಿಸಿದಂತೆ ಹಲವು ಶುಭ ಸಮಾಚಾರಗಳು ಸಿಗಲಿವೆ. ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಕೂಡ ಉಂಟಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)