ಫೆಬ್ರವರಿಯಲ್ಲಿ ಗುರು ಸಂಚಾರ: ಬೃಹಸ್ಪತಿ ನಡೆಯಿಂದ ಈ ರಾಶಿಯವರ ಬದುಕಿನಲ್ಲಿ ಕಷ್ಟಗಳ ಮೇಲೆ ಕಷ್ಟ, ಕೋಲಾಹಲ
)
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ಹಿಮ್ಮುಖವಾಗಿ ಸಂಚರಿಸುತ್ತಿರುವ ಗುರು 2025ರ ಫೆಬ್ರವರಿ 04ರಂದು ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ.
)
ಸುಮಾರು 119ದಿನಗಳ ಬಳಿಕ ಗುರುವಿನ ನೇರ ನಡೆಯಿಂದಾಗಿ ಕೆಲವರಿಗೆ ಅದೃಷ್ಟ ಬೆಳಗಿದರೆ, ಇನ್ನೂ ಕೆಲವು ರಾಶಿಯವರ ಬದುಕಿನಲ್ಲಿ ಕಷ್ಟದ ಮೇಲೆ ಕಷ್ಟಗಳನ್ನು ಬೃಹಸ್ಪತಿ ನೀಡಲಿದ್ದಾನೆ ಎನ್ನಲಾಗುತ್ತಿದೆ. ಹಾಗಾಗಿ, ಈ ಸಮಯದಲ್ಲಿ ಕೆಲವು ರಾಶಿಯವರು ಜಾಗರೂಕರಾಗಿರಬೇಕು ಎನ್ನಲಾಗುತ್ತದೆ.
)
ಮಿಥುನ ರಾಶಿ: ಗುರು ನೇರ ನಡೆಯಿಂದ ಈ ರಾಶಿಯವರಿಗೆ ಆದಾಯಕ್ಕಿಂತ ಖರ್ಚುಗಳು ಹೆಚ್ಚಾಗಲಿದೆ. ವೈಯಕ್ತಿಕ ಬದುಕಿನಲ್ಲಿ ಒತ್ತಡ ಹೆಚ್ಚಾಗಲಿದೆ. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಗುರು ದೋಷದಿಂದ ಪರಿಹಾರ ಮಾಡುವುದರಿಂದ ಕೊಂಚ ಪರಿಹಾರ ಪಡೆಯಬಹುದು.
ಕನ್ಯಾ ರಾಶಿ: ಗುರು ನೇರ ಸಂಚಾರದಿಂದ ಈ ರಾಶಿಯವರಿಗೆ ಕೆಲಸದಲ್ಲಿ ಸವಾಲುಗಳು ಹೆಚ್ಚಾಗಬಹುದು. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಕೆಲಸದಲ್ಲಿ ಅಡೆತಡೆಗಳು ತಲ್ಲಣಗೊಳಿಸಲಿವೆ. ಅವಸರದಲ್ಲಿ ಯಾವುದೇ ರೀತಿಯ ತಪ್ಪು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದ್ದು ಈ ಬಗ್ಗೆ ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ.
ಮಕರ ರಾಶಿ: ಈ ಸಮಯದಲ್ಲಿ ನಿಮ್ಮ ಆತ್ಮ ಬಲ ಕುಂದುತ್ತದೆ. ಹಣಕಾಸಿನ ಸಂಬಂಧಿತ ವ್ಯವಹಾರಗಳಲ್ಲಿ ತೊಂದರೆಗಳು ಎದುರಾಗಿ ಸಾಲ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯದ ವಿಚಾರದಲ್ಲೂ ಸಮಸ್ಯೆಗಳು ಉಲ್ಬಣಿಸುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.