Guru Nakshatra Parivartan: 12 ವರ್ಷಗಳ ಬಳಿಕ ಕೃತಿಕಾ ನಕ್ಷತ್ರಕ್ಕೆ ದೇವಗುರು ಬೃಹಸ್ಪತಿ ಪ್ರವೇಶ, ಈ ರಾಶಿಗಳ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ!
ಮಿಥುನ ರಾಶಿ: ಕೃತಿಕಾ ನಕ್ಷತ್ರಕ್ಕೆ ಗುರುವಿನ ಪ್ರವೇಶ ನಿಮ್ಮ ಪಾಲಿಗೆ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ನಿಮ್ಮ ಜಾತಕದ ದಶಮ ಸ್ಥಾನ ಹಾಗೂ ಸ್ಥಾನಮಾನ ಸ್ಥಾನಕ್ಕೆ ಗುರು ಅಧಿಪತಿಯಾಗಿದ್ದು, ಏಕಾದಶ ಭಾವದಲ್ಲಿ ಕುಳಿತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ (guru nakshatra parivartan will be giving lot of financial gains to these zodiac signsl astrology).
ರಾಜಕೀಯ ಜೀವನದಲ್ಲಿ ಸಕ್ರಿಯರಾಗಿರುವ ಹಾಗೂ ಚುನಾವಣೆ (Lok Sabha Elections 2024) ಎದುರಿಸುತ್ತಿರುವ ಮಿಥುನ ರಾಶಿಯ ಜನರಿಗೆ ಚುನಾವಣೆಯಲ್ಲಿ ಗೆಲುವು ಲಭಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಆದರೆ, ನಿಮ್ಮ ರಾಶಿಯ ಅಧಿಪತಿ ಬುಧನಾಗಿರುವ ಕಾರಣ ಬುಧನಿಗೆ ಸಂಬಂಧಿಸಿದ ಮಂತ್ರಗಳನ್ನು ಜಪಿಸಬೇಕು ಮತ್ತು ದಾನ ಇತ್ಯಾದಿಗಳನ್ನು ಮಾಡಬೇಕು.
ಕರ್ಕ ರಾಶಿ: ಕೃತಿಕಾ ನಕ್ಷತ್ರಕ್ಕೆ ಗುರುವಿನ ಪ್ರವೇಶ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ರಾಶಿಗೆ ಚಂದ್ರ ಅಧಿಪತಿ ಹಾಗೂ ಚಂದ್ರನ ನಕ್ಷತ್ರ ರೋಹಿಣಿ.
ಇದಲ್ಲದೆ ಕರ್ಕ ರಾಶಿಯ ಗೋಚರ ಜಾತಕದಲ್ಲಿ ಗುರು ಕರ್ಮ ಹಾಗೂ ಲಾಭ ಸ್ಥಾನದಲ್ಲಿ ಸಂಚರಿಸುತ್ತಿದ್ದಾನೆ. ಹೀಗಾಗಿ ಕರ್ಕ ರಾಶಿಯ ನೌಕರವರ್ಗದ ಜನರಿಗೆ ಇಂಕ್ರಿಮೆಂಟ್-ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ರಾಜಕೀಯದಲ್ಲಿ ಯಶಸ್ಸು ಸಿಗಲಿದೆ. ಹೀಗಾಗಿ ಈ ಅವಧಿಯಲ್ಲಿ ಆಕಸ್ಮಿಕ ಧನಲಾಭ ಸಿಗಲಿದೆ. ಆಷ್ಟ ದಿಕ್ಕುಗಳಿಂದ ನಿಮಗೆ ಲಾಭ ಸಿಗಲಿದೆ.
ಧನು ರಾಶಿ: ಕೃತಿಕಾ ನಕ್ಷತ್ರಕ್ಕೆ ದೇವಗುರು ಬೃಹಸ್ಪತಿಯ ಪ್ರವೇಶ ಧನು ರಾಶಿಯ ಜಾತಕದವರಿಗೆ ವರದಾನ ಸಾಬೀತಾಗಲಿದೆ. ಏಕೆಂದರೆ, ಮೇ 1 ರಿಂದ ನಿಮ್ಮ ಜಾತಕದ ಅಧಿಪತಿ ಕೃತಿಕಾ ನಕ್ಷತ್ರದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಉತ್ತಮ ಧನಲಾಭ ಉಂಟಾಗಲಿದೆ. ಸ್ಥಾನಮಾನ ಪ್ರತಿಷ್ಠೆ ಹೆಚ್ಚಾಗಲಿದೆ.
ರಾಜನೀತಿಗೆ ಸಂಬಂಧಿಸಿದ ಧನು ರಾಶಿಯ ಜಾತಕದವರಿಗೆ ಚುನಾವಣೆಯಲ್ಲಿ ಗೆಲುವು ಸಿಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಕಾರ್ಯ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ.
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)