Guru Pushyamruta Yog 2021: ಈ ಬಾರಿ ದೀಪಾವಳಿಗೂ ಮುನ್ನವೇ ನಿರ್ಮಾಣಗೊಳ್ಳುತ್ತಿದೆ ಈ ಅಧ್ಬುತ ಮತ್ತು ಅತ್ಯಂತ ಶುಭ ಯೋಗ
1. 60 ವರ್ಷಗಳ ಬಳಿಕ ನಿರ್ಮಾಣಗೊಳ್ಳುತ್ತಿದೆ ಈ ಶುಭ ಯೋಗ - ದೇಶಾದ್ಯಂತದ ಎಲ್ಲಾ ಮಾರುಕಟ್ಟೆಗಳು ಹಲವು ದಿನಗಳ ಮುಂಚಿತವಾಗಿ ದೀಪಾವಳಿ ಶಾಪಿಂಗ್‌ಗೆ ಸಿದ್ಧಗೊಳ್ಳುತ್ತವೆ. ಇದರಿಂದ ಜನರು ತಮ್ಮ ಆಯ್ಕೆಯ ಬಹಳಷ್ಟು ವಸ್ತುಗಳನ್ನು ಖರೀದಿಸಬಹುದು, ಆದರೆ ಈ ವರ್ಷ ಜನರು ದೀಪಾವಳಿಗೆ ಮುಂಚಿತವಾಗಿ ಈ ಅವಕಾಶವನ್ನು ಪಡೆಯಲಿದ್ದಾರೆ. 60 ವರ್ಷಗಳ ನಂತರ, ಗುರು ಪುಷ್ಯ ನಕ್ಷತ್ರವು ಶನಿ-ಗುರುಗಳ ಸಂಯೋಜನೆಯಲ್ಲಿ ರೂಪುಗೊಳ್ಳುತ್ತಿದೆ, ಇದು ಅತ್ಯಂತ ಶುಭಕರವಾಗಿದೆ.
2. ಅಕ್ಟೋಬರ್ 28ರಂದು ಅತ್ಯಂತ ಶುಭಯೋಗ (Auspicious Yog) - ಅಕ್ಟೋಬರ್ 28 ರಂದು, ಮಕರ ರಾಶಿಯಲ್ಲಿ ಶನಿ-ಗುರುಗಳ ಯುತಿಯಿಂದಾಗಿ ಪುಷ್ಯ ನಕ್ಷತ್ರವು ಅತ್ಯಂತ ಮಂಗಳಕರವಾಗಿರುತ್ತದೆ. ಇದಲ್ಲದೇ, ಸರ್ವಾರ್ಥಸಿದ್ಧಿ ಯೋಗವು (Sarvartha Siddhi Yog) ಅದೇ ದಿನ ಬೆಳಗ್ಗೆ 6:33 ರಿಂದ 9:42 ರವರೆಗೆ ಇರಲಿದೆ.
3. ಖರೀದಿಯಿಂದ ಲಾಭ - ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಪುಷ್ಯ ನಕ್ಷತ್ರದಲ್ಲಿ ಮಾಡಿದ ಖರೀದಿಗಳು ಬಹಳ ಮಂಗಳಕರವಾಗಿರುತ್ತವೆ. ಮಕರ ರಾಶಿಯಲ್ಲಿ ಶನಿ-ಗುರು ಯುತಿನ ಸಮಯದಲ್ಲಿ ಅದರ ಮೇಲೆ ಗುರು ಪುಷ್ಯ ನಕ್ಷತ್ರ ಇರುವುದು ಅದರ ಶುಭ ಫಲಿತಾಂಶಗಳನ್ನು ಹೆಚ್ಚಿಸುತ್ತದೆ. ಪುಷ್ಯ ನಕ್ಷತ್ರದಂದು ಶನಿ ಮತ್ತು ಗುರುಗಳ ಅನುಗ್ರಹದಿಂದಾಗಿ, ಇದನ್ನು ನಕ್ಷತ್ರಪುಂಜಗಳ ರಾಜ ಎಂದು ಪರಿಗಣಿಸಲಾಗಿದೆ. ಈ ಅವಧಿಯಲ್ಲಿ ಈ ನಕ್ಷತ್ರಪುಂಜದಲ್ಲಿ, ಈ ಎರಡೂ ಗ್ರಹಗಳು ಒಂದೇ ರಾಶಿಯಲ್ಲಿ ಉಳಿಯುತ್ತವೆ ಮತ್ತು ಇದೊಂದು ಅತ್ಯಂತ ಲಾಭದಾಯಕ ಸ್ಥಿತಿಯಾಗಿರಲಿದೆ.
4. ಈ ವಸ್ತುಗಳನ್ನು ಖರೀದಿಸುವುದು ಶುಭಕರ - ಈ ಶುಭಯೋಗದಲ್ಲಿ ನೀವು ಮನೆ-ಆಸ್ತಿ, ಚಿನ್ನ-ಬೆಳ್ಳಿ, ಕಾರು, ಎಲೆಕ್ಟ್ರಾನಿಕ್ಸ್ ವಸ್ತುಗಳು, ಪೀಠೋಪಕರಣ ಇತ್ಯಾದಿಗಳನ್ನು ಖರೀದಿಸಬಹುದು. ಇದರ ಹೊರತಾಗಿ, ಪುಸ್ತಕಗಳನ್ನು ಖರೀದಿಸಲು ಈ ದಿನವು ಅತ್ಯಂತ ಶುಭಕರವಾಗಿದೆ.
5. ಹೂಡಿಕೆಗೂ ಕೂಡ ಈ ಅವಧಿ ಉತ್ತಮವಾಗಿದೆ - ಖರೀದಿಯ ಹೊರತಾಗಿ, ಈ ದಿನವು ಹೂಡಿಕೆಯ ದೃಷ್ಟಿಯಿಂದಲೂ ಉತ್ತಮವಾಗಿದೆ. ನೀವು ಅಕ್ಟೋಬರ್ 28 ರಂದು ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಬಹುದು. ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಕಬ್ಬಿಣ, ಸಿಮೆಂಟ್, ತೈಲ ಕಂಪನಿ, ಜವಳಿ, ಎಲೆಕ್ಟ್ರಾನಿಕ್ಸ್ ಗೆ ಸಂಬಂಧಿಸಿದ ಕಂಪನಿಗಳ ಷೇರುಗಳು ಲಾಭ ಗಳಿಸುತ್ತವೆ. (All Pictures - Representational Images)