ಇನ್ನೊಂದೇ ತಿಂಗಳಲ್ಲಿ ಈ ರಾಶಿಯವರ ಜೀವನದಲ್ಲಿ ಒಲಿದು ಬರುವಳು ವಿಜಯಲಕ್ಷ್ಮೀ ! ತುಂಬಿ ತುಳುಕುವುದು ಸುಖ ಸಂಪತ್ತು
)
ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾದ ದೇವಗುರು ಶೀಘ್ರದಲ್ಲೇ ತನ್ನ ನಡೆಯನ್ನು ಬದಲಿಸಲಿದ್ದಾನೆ. ಗುರುವು ಸೆಪ್ಟೆಂಬರ್ 4 ರಂದು ಹಿಮ್ಮುಖವಾಗಿ ಚಲಿಸಲು ಆರಂಭಿಸಲಿದೆ. ಗುರುಗ್ರಹದ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯವಾಗಲಿದೆ. ವಕ್ರಿ ಗುರುವಿನ ಪ್ರಭಾವದಿಂದ ಜೀವನದಲ್ಲಿ ಧನ ಸಂಪತ್ತು ಹೆಚ್ಚಲಿದೆ.
)
ಮೇಷ ರಾಶಿಯವರ ಮೇಲೆ ಗುರುವಿನ ವಿಶೇಷ ಕೃಪೆ ಇರುತ್ತದೆ. ಗುರುವಿನ ಹಿಮ್ಮುಖ ಚಲನೆ ಆರಂಭವಾದಾಗ ಈ ರಾಶಿಯವರಿಗೆ ಗೆಲುವು ಸಿಗುವುದು. ಆರ್ಥಿಕ ಪ್ರಗತಿಯ ಸಾಧ್ಯತೆಗಳಿವೆ. ಇದ್ದಕ್ಕಿದ್ದಂತೆ ದೊಡ್ಡ ಮಟ್ಟದ ಲಾಭವಾಗುವುದು. ಇದರಿಂದ ಮನೆಯಲ್ಲಿ ಸಂತೋಷದ ವಾತಾವರಣ ನೆಲೆಯಾಗುವುದು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ.
)
ದೇವಗುರು ಗುರುವಿನ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಹೊಸ ಅವಕಾಶಗಳನ್ನು ನೀಡಲಿದೆ. ಈ ರಾಶಿಯವರಿಗೆ ಸರ್ಕಾರಿ ನೌಕರಿ ಸಿಗುತ್ತದೆ. ಲಕ್ಷ್ಮೀ ದೇವಿಯು ಈ ರಾಶಿಯವರ ಮೇಲೆ ವಿಶೇಷ ದಯೆ ತೋರುತ್ತಾಳೆ. ಆದಾಯ ಹೆಚ್ಚಾಗುವ ಸಾಧ್ಯತೆಗಳಿವೆ. ಗುರುವು ಮಿಥುನ ರಾಶಿಯ ಆದಾಯದ ಅರ್ಥದಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಈ ರಾಶಿಯವರ ಆದಾಯ ಹೆಚ್ಚಳವಾಗುವ ಸೂಚನೆಗಳಿವೆ.
ಗುರುವಿನ ಹಿಮ್ಮುಖ ಚಲನೆ ಆರಂಭವಾಗುತ್ತಿದ್ದಂತೆಯೇ, ಸಿಂಹ ರಾಶಿಯವರ ಅದೃಷ್ಟವೇ ಬದಲಾಗುವುದು. ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಶು ಕಟ್ಟಿಟ್ಟ ಬುತ್ತಿ. ಹೆಜ್ಜೆ ಹೆಜ್ಜೆಗೂ ಅದೃಷ್ಟ ಇವರ ಕೈ ಹಿಡಿಯಲಿದೆ. ಈ ಅವಧಿಯಲ್ಲಿ ಮನಸ್ಸಿನ ಎಲ್ಲಾ ಆಸೆಗಳು ಬಹುತೇಕ ಈಡೇರುತ್ತವೆ. ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರು ಉತ್ತಮ ಉದ್ಯೋಗದ ಅವಕಾಶ ಪಡೆಯುವರು.
ಗುರುವಿನ ನಡೆ ಬದಲಾವಣೆಯೊಂದಿಗೆ ಈ ರಾಶಿಯವರು ಹಠಾತ್ ಹಣವನ್ನು ಪಡೆಯುತ್ತಾರೆ. ಇದು ಅವರ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ. ಹೊಸ ಹೊಸ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಕೆಲಸದ ಸ್ಥಳದಲ್ಲಿ ಸ್ಥಾನಮಾನ ಮತ್ತು ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಉತ್ತಮ ಅವಕಾಶಗಳಿರುತ್ತವೆ.