Guru-Shani Gochar 2024: ಶೀಘ್ರದಲ್ಲಿಯೇ ಏಕ ಭಾವದಲ್ಲಿ ಗುರು-ಶನಿಯ ದ್ವಿಗೋಚರ, ಈ ಜನರಿಗೆ ಆಕಸ್ಮಿಕ ಧನಲಾಭ-ಭಾಗ್ಯೋದಯ ಯೋಗ!

Sat, 03 Feb 2024-1:52 pm,
Guru-Shani Gochar 2024

Guru-Shani Gochar 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶನಿ ಹಾಗೂ ಗುರುವಿನ ದೃಷ್ಟಿ ಒಂದೇ ಭಾವದ ಮೇಲೆ ಬಿದ್ದಾಗ, ಅದರಿಂದ ಕೆಲ ರಾಶಿಗಳ ಜನರ ಭಾಗ್ಯ ಸೂರ್ಯನಂತೆ ಹೊಳೆಯುತ್ತದೆ ಮತ್ತು ಇವರು ಜೀವನದಲ್ಲಿ ಲಗ್ಜರಿ ಲೈಫ್ ಬದುಕುವುದರ ಜೊತೆಗೆ ಅಪಾರ ಸ್ಥಾನಮಾನ ಸಂಪಾದಿಸುತ್ತಾರೆ. Spiritual News In Kannada,   

Guru-Shani Gochar 2024

ಮಿಥುನ ರಾಶಿ: ಈ ರಾಶಿಯಲ್ಲಿ ಶನಿ ಭಾಗ್ಯ, ರಾಹು ಕರ್ಮ ಹಾಗೂ ದೇವಗುರು ಬೃಹಸ್ಪತಿ ಲಾಭ ಸ್ಥಾನದಲ್ಲಿದ್ದಾರೆ. ಹೀಗಿರುವಾಗ ನಿಮ್ಮ ಜಾತಕದ ಏಕಾದಶ ಭಾವ ಜಾಗ್ರತಾವಸ್ಥೆಯನ್ನು ತಲುಪುತ್ತದೆ. ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಲಿಷ್ಠವಾಗಲಿದೆ. ದೀರ್ಘಾವಧಿಯಿಂದ ನಿಂತುಹೋದ ಕಾರ್ಯಗಳು ಪೂರ್ಣಗೊಳ್ಳಲಿವೆ. ಧನ-ಧಾನ್ಯ ವೃದ್ಧಿಯಾಗಲಿದೆ. ಅಧಿಕಾರ-ಸ್ಥಾನಮಾನದಲ್ಲಿ ಉನ್ನತ ಅಧಿಕಾರಿಗಳ ಜೊತೆಗೆ ನಿಮ್ಮ ಸಂಬಂಧಗಳು ಬಲವಾಗಲಿವೆ. ಇದರಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ನೌಕರ ವರ್ಗದ ಜನರಿಗೆ ಹಿರಿಯರ ಬೆಂಬಲ ಸಿಗಲಿದೆ. ಅದರಿಂದಲೂ ಕೂಡ ನಿಮಗೆ ಲಾಭ ಸಿಗುವ ಎಲ್ಲಾ ಸಂಕೇತಗಳಿವೆ. ಈ ಅವಧಿಯಲ್ಲಿ ಗುರುವಿನ ಪಂಚಮ ದೃಷ್ಟಿ ಮತ್ತು ಶನಿಯ ಸಪ್ತಮ ದೃಷ್ಟಿ ನಿಮ್ಮ ತೃತೀಯ ಭಾವದ ಮೇಲೆ ಇರಲಿದೆ. ಇದರಿಂದ ತೃತೀಯ ಭಾವ ಜಾಗ್ರತಾವಸ್ಥೆ ತಲುಪುತ್ತದೆ. ಇದರಿಂದ ನಿರ್ಣಯ ಕೈಗೊಳ್ಳುವ ನಿಮ್ಮ ಸಾಮರ್ಥ್ಯ ಅಪಾರ ಹೆಚ್ಚಾಗಲಿದೆ. ಆತ್ಮವಿಶ್ವಾಸ ವೃದ್ಧಿಯಾಗಲಿದೆ. ಹೊಸ ಕೆಲಸ ಆರಂಭಿಸುವುದು ಲಾಭಕಾರಿ ಸಾಬೀತಾಗುತ್ತದೆ. ಅದರಲ್ಲಿ ಯಶಸ್ಸಿನ ಜೊತೆಗೆ ಅಪಾರ್ ಧನಲಾಭ ಉಂಟಾಗುತ್ತದೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ.   

ಸಿಂಹ ರಾಶಿ: ನಿಮ್ಮ ಜಾತಕದ ನವಮ ಭಾವದ ಮೇಲೆ ಅಂದರೆ ಭಾಗ್ಯದ ಭಾವದ ಮೇಲೆ ಗುರು ಹಾಗೂ ಶನಿಯ ದೃಷ್ಟಿ ಇರಲಿದೆ. ಇದರಿಂದ ನಿಮ್ಮ ನವಮ ಭಾವ ಜಾಗ್ರತಾವಸ್ಥೆ ತಲುಪಲಿದೆ. ಇದಾದ ಬಳಿಕ ಗುರು ಸೆಪ್ಟೆಂಬರ್ ತಿಂಗಳಿನಲ್ಲಿ ರಾಶಿಯನ್ನು ಪರಿವರ್ತಿಸುವ ಮೂಲಕ ದಶಮ ಭಾವ ಪ್ರವೇಶಿಸಲಿದ್ದಾನೆ. ಇದರಿಂದ ಅದೃಷ್ಟದ ಬೆಂಬಲದಿಂದ ಪ್ರತಿಯೊಂದು ಸಮಸ್ಯೆಗಳಿಂದ ನಿಮಗೆ ಮುಕ್ತಿ ಸಿಗಲಿದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ನಿಮಗೆ ಸಿಗಲಿದೆ. ಇದರ ಜೊತೆಗೆ ಚಿಂತೆ, ಭಯದಿಂದ ಮುಕ್ತಿ ಸಿಗಲಿದೆ. ಆರೋಗ್ಯ ಉತ್ತಮವಾಗಿರಲಿದೆ. ನೌಕರಿಯ ಕುರಿತು ಹೇಳುವುದಾದರೆ, ನೀವು ಬಯಸಿದೆಡೆ ನಿಮಗೆ ವರ್ಗಾವಣೆ ಭಾಗ್ಯ ಸಿಗಲಿದೆ. ಆಧ್ಯಾತ್ಮದತ್ತ ನಿಮ್ಮ ಒಲವು ಹೆಚ್ಚಾಗಲಿದ್ದು, ಧಾರ್ಮಿಕ ಕಾರ್ಯಗಳಲ್ಲಿ ನೀವು ಭಾಗವಹಿಸುವಿರಿ. ಗುರುವಿನ ಪಂಚಮ ಮತ್ತು ಶನಿಯ ಸಪ್ತಮ ದೃಷ್ಟಿ ನಿಮ್ಮ ಜಾತಕದ ಲಗ್ನ ಭಾವವನ್ನು ಜಾಗ್ರತಗೊಳಿಸುತ್ತವೆ. ಇದರಿಂದ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಉಂಟಾಗಲಿದೆ. ಮನಸ್ಸು ಶಾಂತವಾಗಿರಲಿದ್ದು, ನಿರ್ಣಯ ಕೈಗೊಳ್ಳುವ ನಿಮ್ಮ ಸಾಮಾರ್ಥ್ಯ ಹೆಚ್ಚಾಗಲಿದೆ. ತರಾತುರಿಯಲ್ಲಿ ಕೈಗೊಂಡ ತಪ್ಪು ನಿರ್ಧಾರಗಳನ್ನು ತಿದ್ದಿಕೊಳ್ಳುವ ಅವಕಾಶ ನಿಮಗೆ ಸಿಗಲಿದೆ.   

ಧನು ರಾಶಿ: ದೇವಗುರು ಬೃಹಸ್ಪತಿಯ ಕುರಿತು ಹೇಳುವುದಾದರೆ, ಆತ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಗೋಚರಿಸಲಿದ್ದಾನೆ. ಏಪ್ರಿಲ್ 30ರವರೆಗೆ ಆತ ಅಲ್ಲಿಯೇ ಇರಲಿದ್ದಾನೆ. ಇದಲ್ಲದೆ ಶನಿ ಹಾಗೂ ಗುರುವಿನ ತೃತೀಯ ದೃಷ್ಟಿ ಕೂಡ ನಿಮ್ಮ ಪಂಚಮ ಭಾವದ ಮೇಲೆ ಬೀಳುತ್ತಿದೆ. ಇದರ ಲಾಭ ನಿಮಗೆ ಸಿಗಲಿದೆ. ಏಪ್ರಿಲ್ 30ರ ಬಳಿಕ ಗುರು ಶಷ್ಟಮ ಭಾವಕ್ಕೆ ಸಾಗಲಿರುವ ಕಾರಣ ನೌಕರಿ ಸಿಗುವ ಸಾಧ್ಯತೆ ಇದೆ. ಷೇರು ಮಾರುಕಟ್ಟೆಯಲ್ಲಿ ನಿಮಗೆ ಲಾಭ ಸಿಗಲಿದೆ. ಲವ್ ಲೈಫ್ ಉತ್ತಮ ವಾಗಿರಲಿದ್ದು, ಸಂಗಾತಿಯ ಜೊತೆಗೆ ವಿವಾಹ ನೆರವೇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಆರೋಗ್ಯ ಉತ್ತಮವಾಗಿರಲಿದೆ. ಗುರುವಿನ ಪಂಚಮ ಮತ್ತು ಶನಿಯ ಸಪ್ತಮ ದೃಷ್ಟಿ ಭಾಗ್ಯ ಸ್ಥಾನದ ಮೇಲೆ ಬೀಳುತ್ತಿರುವ ಕಾರಣ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link