ದೇವಗುರು ಬೃಹಸ್ಪತಿ ಮತ್ತು ಶುಕ್ರರಿಂದ `ಕಾಮ ರಾಜಯೋಗ` ರಚನೆ, ಧನ ಕುಬೇರ ಕೃಪೆಯಿಂದ ಈ ರಾಶಿಗಳ ಭಾಗ್ಯೋದಯ-ಉನ್ನತಿಯ ಯೋಗ!
ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕಾಮ ರಾಜಯೋಗ ಎಲ್ಲಾ ಆಸೆ ಆಕಾಂಕ್ಷೆಗಳನ್ನು ಈಡೇರಿಸುವ ಯೋಗ ಎಂದು ಭಾವಿಸಲಾಗುತ್ತದೆ. ಹೀಗಾಗಿ ಕೆಲ ರಾಶಿಗಳ ಜನರ ಜೀವನದಲ್ಲಿ ಖುಷಿಗಳೆ-ಖುಷಿಗಳು ಆಗಮಿಸಲಿವೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಗುರು ಹಾಗೂ ಶುಕ್ರ ಇಬ್ಬರೂ ಕೂಡ ಜೀವನದಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರಲಿದ್ದಾರೆ.
ಮೇಷ ರಾಶಿ: ಮೇಷ ರಾಶಿಯ ಜಾತಕದವರಿಗೆ ಕಾಮ ರಾಜಯೋಗ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಈ ರಾಶಿಯ ಜಾತಕದವರಿಗೆ ಗುರು ಹಾಗೂ ಶುಕ್ರ ಇಬ್ಬರೂ ಕೂಡ ಸಾಕಷ್ಟು ಖುಷಿಗಳನ್ನು ತಂದುಕೊಡಲಿದ್ದಾರೆ. ದೀರ್ಘಾವಧಿಯಿಂದ ಪೂರ್ಣಗೊಳ್ಳಬೇಕಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಕುಟುಂಬ ಸದಸ್ಯರ ಜೊತೆಗೆ ಉತ್ತಮ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ವೈವಾಹಿಕ ಜೀವನದಲ್ಲಿ ಖುಷಿಗಳು ಇರಲಿವೆ. ನೌಕರವರ್ಗದ ಜನರಿಗೆ ಯಶಸ್ಸು, ಪದೋನ್ನತಿ ಭಾಗ್ಯ ಪ್ರಾಪ್ತಿಯಾಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಅಪಾರ ಧನಲಾಭ ನಿಮ್ಮದಾಗಲಿದೆ. ಕುಟುಂಬಸ್ತರ ಜೊತೆಗೆ ಉತ್ತಮ ಕಾಲವನ್ನು ಕಳೆಯುವಿರಿ.
ಕರ್ಕ ರಾಶಿ: ಕರ್ಕ ರಾಶಿಯ ಜನರಿಗೂ ಕೂಡ ಈ ಯೋಗ ಶುಭ ಸಮಾಚಾರಗಳನ್ನು ತರಲಿದೆ. ಗುರು ಹಾಗೂ ಶುಕ್ರ ಇಬ್ಬರೂ ಕೂಡ ನಿಮ್ಮ ಜೀವನದಲ್ಲಿ ಸಕಾರಾತ್ಮಕ ಪ್ರಭಾವ ಬೀರಲಿದ್ದಾರೆ. ನಿಂತುಹೋದ ಕೆಲಸ ಕಾರ್ಯಗಳು ಮತ್ತೆ ಆರಂಭಗೊಳ್ಳಲಿವೆ. ನಿಮ್ಮ ಜಾತಕದ ದಶಮ ಭಾವದಲ್ಲಿ ಗುರು ಹಾಗೂ ಚತುರ್ಥ ಭಾವದಲ್ಲಿ ಶುಕ್ರ ವಿರಾಜಮಾನ ನಾಗಿರಲಿದ್ದಾರೆ. ಹೀಗಿರುವಾಗ ಕಾಮ ರಾಜಯೋಗ ನಿರ್ಮಾಣ ಈ ರಾಶಿಗಳ ಜನರಿಗೆ ಮನೆ, ವಾಹನ, ಸಂಪತ್ತಿನ ವಿಶೇಷ ಲಾಭವನ್ನು ತಂದುಕೊಡಲಿದೆ. ಕೌಟುಂಬಿಕ ಜೀವನ ಉತ್ತಮವಾಗಲಿದೆ. ತಂದೆ-ತಾಯಿಯರ ಬೆಂಬಲ ಸಿಗಲಿದೆ. ಪ್ರೀತಿ ಸಿಗಲಿದೆ. ಆಸ್ತಿಪಾಸ್ತಿಯಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸಕಾಲವಾಗಿದೆ. ಸಹೋದರ ಸಹೋದರಿಯರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ನಿಮ್ಮ ಪಾಲಿಗೆ ಕಾಮ ರಾಜಯೋಗ ಆಸೆಗಳನ್ನು ಈಡೇರಿಸುವ ಯೋಗವಾಗಿರಲಿದೆ. ಸುಖ-ಸೌಕರ್ಯಗಳಲ್ಲಿ ವೃದ್ಧಿ ಇರಲಿದೆ.
ಸಿಂಹ ರಾಶಿ: ಕಾಮ ರಾಜಯೋಗ ನಿಮ್ಮ ಭಾಗ್ಯವನ್ನೇ ಪರಿವರ್ತಿಸಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಕೆಲ ಮಹತ್ವಪೂರ್ಣ ಕೆಲಸಗಳನ್ನು ಪೂರ್ಣಗೊಳಿಸುವಲ್ಲಿ ಯಶಸ್ಸನ್ನು ಪಡೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ವೃತ್ತಿ ಜೀವನದಲ್ಲಿ ಉತ್ತಮ ಅವಕಾಶಗಳು ಲಭಿಸಲಿವೆ. ಸಮಾಜದಲ್ಲಿ ನಿಮ್ಮ ಸ್ಥಾನಮಾನ ಸುಧಾರಿಸಲಿದೆ. ಬಂಧು ಮಿತ್ರರ ಜೊತೆಗೆ ಉತ್ತಮ ಕಾಲ ಕಳೆಯುವಿರಿ. ಬಿಸ್ನೆಸ್ ನಲ್ಲಿಯೂ ಕೂಡ ಲಾಭದ ಪ್ರಬಲ ಯೋಗವಿದೆ. ಸಂತಾನ ಪಕ್ಷದ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಗುವ ಸಂಕೇತಗಳಿವೆ. ಉನ್ನತ ವ್ಯಾಸಂಗ ಮಾಡುವ ನಿಮ್ಮ ಆಸೆ ಈಡೇರಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)