ಹತ್ತು ವರ್ಷಗಳ ಬಳಿಕ ಗುರು-ಶುಕ್ರರಿಂದ `ನವಪಂಚಮ ರಾಜಯೋಗ` ನಿರ್ಮಾಣ, ಹೊಸ ವರ್ಷದಲ್ಲಿ ಈ ಜನರಿಗೆ ಭಾರಿ ಧನಲಾಭ!
Guru-Shukra Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೇಘ್ರದಲ್ಲೇ ಗುರು-ಶುಕ್ರರ ಮೈತ್ರಿಯಿಂದ ನವಪಂಚಮ ರಾಜಯೋಗ ರೂಪುಗೊಳ್ಳುತ್ತಿದೆ. ಸುದೀರ್ಘ 10 ವರ್ಷಗಳ ಬಳಿಕ ರೂಪುಗೊಳ್ಳುತ್ತಿರುವ ಈ ರಾಜಯೋಗ ಮೂರು ರಾಶಿಗಳ ಜಾತಕದವರಿಗೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ನೀಡಲಿದೆ. (Spiritual News In Kannada)
ಮೇಷ ರಾಶಿ: ನವಪಂಚಮ ಯೋಗ ನಿರ್ಮಾಣದ ಅವಧಿಯಲ್ಲಿ ವೃತ್ತಿ-ವ್ಯಾಪಾರದಲ್ಲಿ ಅಪಾರ ಉನ್ನತಿಯಾಗಲಿದೆ. ಅನಾವಶ್ಯಕ ವೆಚ್ಚಗಳನ್ನು ಕಡಿತಗೊಳಿಸುವಲ್ಲಿ ನೀವು ಯಶಸ್ಸನ್ನು ಕಾಣುವಿರಿ. ಆದಾಯದಲ್ಲಿ ಅಪಾರ ಹೆಚ್ಚಳವನ್ನು ನೀವು ಗಮನಿಸಬಹುದು. ನಿಮ್ಮ ಸಾಮಾಜಿಕ ವ್ಯಾಪ್ತಿ ಹೆಚ್ಚಾಗಲಿದೆ. ವ್ಯಾಪಾರಿಗಳ ಪಾಲಿಗೆ ಹೊಸ ವರ್ಷ ಸಾಕಷ್ಟು ಲಾಭದಾಯಕವಾಗಿರಲಿದೆ. ವ್ಯಾಪಾರದಲ್ಲಿ ಉತ್ತಮ ಲಾಭದ ಜೊತೆಗೆ ವ್ಯಾಪಾರ ವಿಸ್ತರಣೆ ಮಾಡುವಲ್ಲಿ ಯೋಜನೆಗಳನ್ನು ನೀವು ರೂಪಿಸುವಿರಿ. ನೌಕರ ವರ್ಗದ ಜನರಿಗೆ ಈ ಅವಧಿಯಲ್ಲಿ ಇಂಕ್ರಿಮೆಂಟ್ ಹಾಗೂ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗಲಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ವರ್ಷಾರಂಭದಲ್ಲಿ ನೀವು ಅಂದುಕೊಂಡ ಯೋಜನೆಗಳು ಯಶಸ್ವಿಯಾಗಲಿವೆ.
ಕರ್ಕ ರಾಶಿ: ಈ ಶುಭಯೋಗ ನಿರ್ಮಾಣದಿಂದ ನಿಮಗೆ ವರ್ಷಾರಂಭದಲ್ಲಿಯೇ ಹಲವು ಶುಭ ಸಮಾಚಾರಗಳು ಪ್ರಾಪ್ತಿಯಾಗಲಿವೆ. ನೌಕರ ವರ್ಗದ ಜನರ ಆದಾಯ ಹೆಚ್ಚಾಗಲಿದೆ ಮತ್ತು ಪ್ರಭಾವ ಕೂಡ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಹೊಸ ಬಿಸ್ನೆಸ್ ಆರಂಭಿಸಲು ಚಿಂತನೆ ನಡೆಸಬಹುದು ಮತ್ತು ಅದರಿಂದ ನಿಮಗೆ ಲಾಭ ಕೂಡ ಉಂಟಾಗಲಿದೆ. ದೀರ್ಘಕಾಲದಿಂದ ನಿಮಗೆ ಬರಬೇಕಾಗಿದ್ದ ಹಣ ನಿಮ್ಮತ್ತ ಮರಳಲಿದೆ. ಹೊಸ ವರ್ಷದಲ್ಲಿ ನೀವು ಫ್ಲ್ಯಾಟ್, ವಾಹನ ಅಥವಾ ನಿವೇಶನ ಖರೀದಿಸುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸಲಿದ್ದು, ಈ ಯಾತ್ರೆಗಳು ನಿಮ್ಮ ಪಾಲಿಗೆ ಶುಭ ಸಾಬೀತಾಗಲಿವೆ. ಕೌಟುಂಬಿಕ ಮತ್ತು ವೈವಾಹಿಕ ಜೀವನ ಉತ್ತಮವಾಗಿರಲಿದೆ. ಸಮಾಜದಲ್ಲಿ ನಿಮಗೆ ಘನತೆ-ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ವೃಶ್ಚಿಕ ರಾಶಿ: ನವಪಂಚಮ ರಾಜಯೋಗ ನಿಮ್ಮ ವೃತ್ತಿ-ವ್ಯಾಪಾರದ ದೃಷ್ಟಿಯಿಂದ ಶುಭ ಸಾಬೀತಾಗುವ ಸಾಧ್ಯತೆ ಇದೆ. ಸ್ಪಾರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ನಿಮ್ಮದಾಗಲಿದೆ. ಸರ್ಕಾರಿ ನೌಕರಿ ಸಿಗುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನಿಮಗೆ ಹೂಡಿಕೆಯಿಂದ ಲಾಭ ಸಿಗಲಿದೆ. ನೌಕರವರ್ಗದ ಜನರಿಗೆ ಪದೋನ್ನತಿಯಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)