12ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ: ಈ ರಾಶಿಯವರಿಗೆ ಹಣದ ಸುರಿಮಳೆ, ಕೋಟ್ಯಾಧಿಪತಿಯಾಗುವ ಯೋಗ
ಪ್ರಸ್ತುತ ವೃಷಭ ರಾಶಿಯಲ್ಲಿರುವ ಗುರು ಮೇ 14, 2025ರಂದು ರಾಶಿ ಪರಿವರ್ತನೆ ಹೊಂದಿ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಸುಮಾರು 12 ವರ್ಷಗಳ ನಂತರ ಮಿಥುನ ರಾಶಿಗೆ ಕಾಲಿಡುವ ಗುರು ಈ ರಾಶಿಯಲ್ಲಿ ಶುಕ್ರನೊಂದಿಗೆ ಸಂಯೋಗ ಹೊಂದಲಿದ್ದಾರೆ.
ಮಿಥುನ ರಾಶಿಯಲ್ಲಿ ಗುರು-ಶುಕ್ರರ ಯುತಿಯಿಂದ ಶುಭಕರ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗಲಿದೆ. ಇದರೊಯಿಂದ ಕೆಲವರಿಗೆ ಅದೃಷ್ಟ ಖುಲಾಯಿಸಲಿದೆ.
ಮಿಥುನ ರಾಶಿ: ಸ್ವ ರಾಶಿಯಲ್ಲಿ ರೂಪುಗೊಳ್ಳಲಿರುವ ಗಜಲಕ್ಷ್ಮಿ ರಾಜಯೋಗವು ಈ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ವಿಜಯಮಾಲೆಯನ್ನು ನೀಡಲಿದೆ. ಆದಾಯದಲ್ಲಿ ಭಾರೀ ಹೆಚ್ಚಳವಾಗಿ ನೆಮ್ಮದಿಯ ಜೀವನ ನಡೆಸುವರು.
ಸಿಂಹ ರಾಶಿ: ಗಜಲಕ್ಷ್ಮಿ ರಾಜಯೋಗವು ಈ ರಾಶಿಯ ವೃತ್ತಿಪರರಿಗೆ ಪ್ರಮೋಷನ್, ವೇತನ ಹೆಚ್ಚಳವನ್ನು ನೀಡಲಿದೆ. ಪೂರ್ವಜರ ಆಸ್ತಿ ಕೈ ಸೇರಲಿದೆ. ಸಹೋದರಿಯರ ಬೆಂಬಲದಿಂದ ಜೀವನದಲ್ಲಿ ಪ್ರಗತಿಯನ್ನು ಕಾಣುವಿರಿ.
ತುಲಾ ರಾಶಿ: ಗಜಲಕ್ಷ್ಮಿ ರಾಜಯೋಗವು ಈ ರಾಶಿಯವರ ಆದಾಯದ ಮೂಲಗಳನ್ನು ಹೆಚ್ಚಿಸಲಿದೆ. ಸಾಲದಿಂದ ಮುಕ್ತಿ ದೊರೆತು ಸ್ವಂತ ಮನೆ ಖರೀದಿ ಮಾಡುವ ಸಾಧ್ಯತೆ ಇದೆ. ಭವಿಷ್ಯಕ್ಕಾಗಿ ಭಾರೀ ಹಣವನ್ನು ಕೂಡಿಡುವ ನಿರೀಕ್ಷೆಯಿದೆ.
ಧನು ರಾಶಿ: ಗಜಲಕ್ಷ್ಮಿ ರಾಜಯೋಗವು ಈ ರಾಶಿಯವರಿಗೆ ವ್ಯಾಪಾರದಲ್ಲಿ ಬಂಪರ್ ಆದಾಯದ ಜೊತೆಗೆ ವ್ಯವಹಾರವನ್ನು ವಿಸ್ತರಿಸಲು ಅವಕಾಶಗಳನ್ನು ನೀಡಲಿದೆ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಭೂಮಿ ಖರೀದಿ ಯೋಗವೂ ಇದೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.